/newsfirstlive-kannada/media/post_attachments/wp-content/uploads/2025/01/SUDEEP_TRIVIKRAM.jpg)
ಕನ್ನಡದ ಬಿಗ್ಬಾಸ್ ಶೋನ ಅಂತಿಮ ನಿರೂಪಣೆ ಮುಗಿಸಿದ ಕಿಚ್ಚ ಸುದೀಪ್ ಅವರು ಸದ್ಯ ಬೇರೆ ಬೇರೆ ಪ್ರಾಜೆಕ್ಟ್ ಕೈಗೆತ್ತಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ. ಇದರ ಜೊತೆಗೆ ಸ್ಪೋರ್ಟ್ಸ್ ಎಂದರೆ ಅವರಿಗೆ ಅಷ್ಟೇ ಪ್ರೀತಿ ಇದೆ. ಈ ಹಿನ್ನೆಲೆಯಲ್ಲಿ ಸೆಲೆಬ್ರಿಟಿ ಕ್ರಿಕೆಟ್ ಲೀಗ್ (CCL)ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ಟೀಮ್ ಮುನ್ನಡೆಸುತ್ತಿದ್ದಾರೆ. ಸದ್ಯ ತಂಡದ ಆಟಗಾರರ ಹೆಸರು ಅನೌನ್ಸ್ ಮಾಡಿಲಾಗಿದ್ದು ಬಿಗ್ಬಾಸ್ನ ರನ್ನರ್ ಅಪ್ ತ್ರಿವಿಕ್ರಮ್ ಅವರ ಸ್ಥಾನದ ಬಗ್ಗೆ ಸುದೀಪ್ ಮಾತನಾಡಿದ್ದಾರೆ.
ಬಿಗ್ಬಾಸ್ ಸೀಸನ್ 11ರ ಶೋನಲ್ಲಿ ತ್ರಿವಿಕ್ರಮ್ ಅವರು ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಬಿಗ್ಬಾಸ್ ಬಳಿಕ ತಮ್ಮದೇ ಕೆಲಸದಲ್ಲಿ ತ್ರಿವಿಕ್ರಮ್ ಬ್ಯುಸಿಯಾಗಿದ್ದಾರೆ. ಹಲವಾರು ಶೂಟಿಂಗ್ನಲ್ಲಿ ಭಾಗಿಯಾಗುತ್ತಿದ್ದಾರೆ. ಬಿಗ್ಬಾಸ್ ಮುಗಿಸಿರುವ ತ್ರಿವಿಕ್ರಮ್ ಕುಟುಂಬಸ್ಥರು, ಸ್ನೇಹಿತರ ಜೊತೆ ಕೆಲ ಸಮಯ ಕಳೆದಿದ್ದಾರೆ. ಇದರ ಜೊತೆಗೆ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ಟೀಮ್ನಲ್ಲಿ ತ್ರಿವಿಕ್ರಮ್ ಅವರು ಇದ್ದಾರಾ, ಇಲ್ವಾ ಎನ್ನುವ ಕುರಿತು ಸ್ವತಹ ಸುದೀಪ್ ಅವರೇ ಉತ್ತರ ಕೊಟ್ಟಿದ್ದಾರೆ.
ಇದನ್ನೂ ಓದಿ:ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಗುಡ್ನ್ಯೂಸ್.. ಸಂಸದ ಪಿಸಿ ಮೋಹನ್ ಪ್ರಯತ್ನಕ್ಕೆ ಒಲಿದ ಫಲ
ಕರ್ನಾಟಕ ಬುಲ್ಡೋಜರ್ಸ್ ಟೀಮ್ನಲ್ಲಿ ತ್ರಿವಿಕ್ರಮ್ ಅವರಿಗೆ ಸ್ಥಾನ ಇದೆಯೋ, ಇಲ್ವಾ ಎಂದು ಸುದೀಪ್ ಅವರಿಗೆ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಉತ್ತರವಾಗಿ ಮಾತನಾಡಿದ ಸುದೀಪ್ ಅವರು, ತಂಡದಲ್ಲಿ ಆಟಗಾರರ ಇದ್ದಾರೆ. ಇದರ ಜೊತೆಗೆ ತ್ರಿವಿಕ್ರಮ್ ಅವರಿಗೆ ಸ್ಥಾನ ನೀಡಲಾಗಿದೆ. ಅವರು ಒಬ್ಬ ಉತ್ತಮ ಕ್ರಿಕೆಟ್ ಆಟಗಾರ. ಹೀಗಾಗಿ ಕರ್ನಾಟಕ ಬುಲ್ಡೋಜರ್ಸ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಸುದೀಪ್ ಅವರು ಹೇಳಿದ್ದಾರೆ.
ಕನ್ನಡದ ಬಿಗ್ಬಾಸ್ ಸೀಸನ್- 11ರ ಗ್ರ್ಯಾಂಡ್ ಫಿನಾಲೆ, ಇದು ಸುದೀಪ್ ಅವರ ಕೊನೆಯ ನಿರೂಪಣೆ ಆಗಿತ್ತು. ಸತತ 11 ಸೀಸನ್ ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದ ಸುದೀಪ್ ಅವರು ಕೆಲಸದ ಒತ್ತಡದಿಂದ ಬಿಗ್ಬಾಸ್ ನಿರೂಪಣೆಗೆ ವಿದಾಯ ಹೇಳಿದ್ದಾರೆ. ಇನ್ನು ತ್ರಿವಿಕ್ರಮ್ ಅವರು ರನ್ನರ್ ಅಪ್ ಆಗುವುದರೊಂದಿಗೆ ತಮ್ಮ ಮುಂದಿನ ಹೊಸ ಪ್ರಾಜೆಕ್ಟ್, ಹೊಸ ಶೂಟಿಂಗ್ ಕೆಲಸಗಳನ್ನು ಪ್ರಾರಂಭಿಸಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ