Advertisment

ಬಿಗ್​ಬಾಸ್​ ತನಿಷಾ ಕುಪ್ಪಂಡಗೆ ಭರ್ಜರಿ ಗಿಫ್ಟ್ ಕೊಟ್ಟ ವರ್ತೂರ್ ಸಂತೋಷ್​; ಏನದು?

author-image
Veena Gangani
Updated On
ಬಿಗ್​ಬಾಸ್​ ತನಿಷಾ ಕುಪ್ಪಂಡಗೆ ಭರ್ಜರಿ ಗಿಫ್ಟ್ ಕೊಟ್ಟ ವರ್ತೂರ್ ಸಂತೋಷ್​; ಏನದು?
Advertisment
  • ವಿಜಯನಗರ ಕ್ಲಬ್​ ರೋಡ್​ನಲ್ಲಿ ಕುಪ್ಪಂಡಸ್​ ಸಿಲ್ವರ್ ಜ್ಯುವೆಲರಿ ಓಪನ್​
  • ನೂತನ ಶಾಪ್​ ಶುರು ಮಾಡಿ ಬಹುದಿನದ ಆಸೆ ಈಡೇರಿಸಿಕೊಂಡ ಬೆಂಕಿ
  • ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಯ್ತು ಶಾಪ್​ ವಿಡಿಯೋ

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10ರ ಸ್ಪರ್ಧಿಯಾಗಿದ್ದ ತನಿಷಾ ಕುಪ್ಪಂಡ ಹೊಸ ಸಿಲ್ವರ್ ಜ್ಯುವೆಲರಿ ಶಾಪ್​ವೊಂದನ್ನು ಆರಂಭ ಮಾಡಿದ್ದಾರೆ. ಈ ಶಾಪ್ ಉದ್ಘಾಟನೆ ಸಮಾರಂಭಕ್ಕೆ ಬಿಗ್‌ಬಾಸ್​ನ ಎಲ್ಲ ಸ್ಪರ್ಧಿಗಳು ಬಂದಿದ್ದರು. ವಿಜಯನಗರ ಕ್ಲಬ್​ ರೋಡ್​ನಲ್ಲಿ ತಮ್ಮ ಹೊಸ ಜ್ಯುವೆಲರಿ ಶಾಪ್​ವೊಂದನ್ನು ಓಪನ್​ ಮಾಡಿದ್ದಾರೆ.

Advertisment

ಇದನ್ನೂ ಓದಿ:ಅಯೋಧ್ಯೆ ರಾಮಲಲ್ಲಾನಿಗೂ ತಟ್ಟಿದ ಬಿಸಿಲಿನ ಬವಣೆ.. ಶ್ರೀರಾಮಜನ್ಮಭೂಮಿ ಟ್ರಸ್ಟ್​ನಿಂದ ಮಹತ್ವದ ನಿರ್ಧಾರ; ಏನದು?

publive-image

ಬಿಗ್​ಬಾಸ್​ ಸ್ಪರ್ಧಿಗಳಾದ ಕಾರ್ತಿಕ್​ ಮಹೇಶ್​, ವಿನಯ್​ ಗೌಡ, ನಮ್ರತಾ ಗೌಡ, ನೀತು, ಸಿರಿ, ಪವಿ, ರಕ್ಷಕ್​ ಬುಲೆಟ್​, ಸ್ನೇಹಿತ್​ ಗೌಡ, ವರ್ತೂರು ಸಂತೋಷ್​ ಬಂದಿದ್ದರು. ಜೊತೆಗೆ ನಟಿ ಅನುಷಾ ರೈ, ನೇಹಾ ಗೌಡ, ಭವ್ಯ ಗೌಡ, ಅನುಪಮ ಗೌಡ, ನಟ ಲೂಸ್ ಮಾದ ಯೋಗಿ ಹಾಗೂ ಅವರ ಪತ್ನಿ ಸಾಹಿತ್ಯ ಕೂಡ ಬಂದಿದ್ದರು.

ಈ ವೇಳೆ ವರ್ತೂರು ಸಂತೋಷ್​ ಅವರು ತನಿಷಾ ಕುಪ್ಪಂಡಗೆ ಗಿಫ್ಟ್​ವೊಂದನ್ನು ಕೊಟ್ಟಿದ್ದಾರೆ. ಹೌದು, ಹಳ್ಳಿಕಾರ್​ ವರ್ತೂರು ಸಂತೋಷ್​ ತನಿಷಾಗೆ ಬೆಳ್ಳಿಯ ತಟ್ಟೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದೇ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment