/newsfirstlive-kannada/media/post_attachments/wp-content/uploads/2024/06/vinay-Gowda-1.jpg)
ದರ್ಶನ್ ಅರೆಸ್ಟ್ ಆಗೋ ದಿನ ನಾನೂ ಶೂಟಿಂಗ್​ ಸ್ಪಾಟ್​ನಲ್ಲಿ ಇದ್ದೆ ಎಂದು ಬಿಗ್ ​ಬಾಸ್ ಸೀಸನ್​ 10​ ಸ್ಪರ್ಧಿ ವಿನಯ್​ ಗೌಡ ಹೇಳಿದ್ದಾರೆ.
ನ್ಯೂಸ್​​ಫಸ್ಟ್​ ಜೊತೆಗೆ ಕೆಲವು ಕುತೂಹಲಕಾರಿ ಸಂಗತಿಯನ್ನು ಬಿಚ್ಚಿಟ್ಟ ವಿನಯ್​​​ ಗೌಡ, ದರ್ಶನ್​​ ಡೆವಿಲ್​ ಸಿನಿಮಾ ಶೂಟಿಂಗ್​ ಬಗ್ಗೆ ಮಾತನಾಡಿದ್ದಾರೆ. ನಾರ್ಮಲ್​ ಶೂಟ್​ ಏನು ನಡಿಬೇಕಾಗಿತ್ತೋ ಅದು ನಡಿಯುತ್ತಿತ್ತು. ಆ ಶೂಟ್​ ಮುಗಿದ ಮೇಲೆ ದರ್ಶನ್​ ಬರಬೇಕಾಗಿತ್ತು. ಅಷ್ಟರಲ್ಲೇ ಪ್ಯಾಕಪ್​ ಆಯ್ತು ಎಂದು ಹೇಳಿದ್ದಾರೆ.
ಬಳಿಕ ಮಾತನಾಡಿದ ವಿನಯ್​, ಪ್ಯಾಕಪ್​ ಆದ ಬಗ್ಗೆ ಕೇಳಿದಾಗ ಆಸೋಷಿಯೇಟ್​ ಮತ್ತು ಅಸಿಸ್ಟಂಟ್​ಗಳು ಏನೋ ಒಂದು ಇನ್ಸಿಂಡೆಂಟ್​ ಆಗಿದೆ ಎಂದು ಹೇಳಿದರು. ನಾವು ನ್ಯೂಸ್​ ಚಾನೆಲ್​ ನೋಡಿದಾಗ ಏನೋ ಒಂದು ಇನ್ಸಿಡೆಂಟ್​ ಆಗಿರೋದು ಗೊತ್ತಾಯ್ತು. ಮೈಸೂರಲ್ಲಿ ದರ್ಶನ್​ ಇಲ್ಲ ಬೆಂಗಳೂರಿಗೆ ಹೋಗಿದ್ದಾರೆ ಎಂದು ಗೊತ್ತಾದಾಗ ಪ್ಯಾಕಪ್​ ಆಯ್ತು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಡೆಂಘೀ ಜ್ವರದ ಶಂಕೆ, ಬಾಲಕಿ ಸಾವು; ಮಗಳ ಶವದ ಮುಂದೆ ನಿಂತು ಸರ್ಕಾರಕ್ಕೆ ಕಣ್ಣೀರಿಡುತ್ತಲೇ ಮನವಿ ಮಾಡಿದ ತಂದೆ
ಇದನ್ನೂ ಓದಿ: ನನ್ನ ಮದುವೆಯಾಗು..! ಗಂಡ ಮತ್ತು 3 ಮಕ್ಕಳನ್ನು ತೊರೆದು ಪ್ರಿಯಕರನ ಮನೆ ಸೇರಿದ ಮಹಿಳೆ!
ವಿನಯ್ ಗೌಡ ನಟ ದರ್ಶನ್ ಎದುರು ಡೆವಿಲ್​ ಸಿನಿಮಾದಲ್ಲಿ ವಿಲನ್ ಆಗಿ ನಟಿಸ್ತಿದ್ದಾರೆ. ಆದರೆ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್​ ಅರೆಸ್ಟ್​ ಆದ ಬಳಿಕದಿಂದ ಶೂಟಿಂಗ್​ ಸ್ಥಗಿತವಾಗಿದೆ. ಸದ್ಯ ಡೆವಿಲ್​ ಚಿತ್ರತಂಡಕ್ಕೆ ಇದರಿಂದ ಬೇಸರವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us