/newsfirstlive-kannada/media/post_attachments/wp-content/uploads/2025/03/Vinay-Rajat-kishan-Arrest.jpg)
ಏನೋ ಮಾಡಲು ಹೋಗಿ ಇನ್ನೇನೋ ಆಗೋಯ್ತು. ಈ ಹಳೆ ಮಾತು ಈ ಹೊಸ ಸ್ಟೋರಿಗೆ ಸೂಟ್ ಆಗುತ್ತೆ ಬಿಡಿ. ಕಲರ್ ಕಲರ್ ಬಟ್ಟೆ ಹಾಕಿ.. ಇನ್ಸ್​ಸ್ಟಾದಲ್ಲಿ ರೀಲ್ಸ್​ಗೆ ಪೋಸ್ ಕೊಟ್ಟಿದ್ದ ಬಿಗ್​ಬಾಸ್​ ಮಾಜಿ ಸ್ಪರ್ಧಿಗಳು ಲಕ್ಷಗಟ್ಟಲೇ ಲೈಕ್ಸ್, ವೀವ್ಸ್ ಬರುತ್ತೆ ಅಂತ ಕನಸು ಕಂಡಿದ್ರು. ಆದ್ರೆ ಅಲ್ಲಾಗಿದ್ದೇ ಬೇರೆ. ಅದೇ ರೀಲ್ಸ್​ ಶೋಕಿ, ಪೊಲೀಸ್ ಅಂಗಳದಲ್ಲಿ ಕೂರುವಂತೆ ಮಾಡಿತ್ತು. ಆದ್ರೀಗ ರಾತ್ರೋರಾತ್ರಿ ರಜತ್-ವಿನಯ್ ರಿಲೀಸ್ ಆಗಿದ್ದಾರೆ.
ಮಚ್ಚು ಪ್ರದರ್ಶಿಸಿದ್ದ ರಜತ್, ವಿನಯ್ ರಾತ್ರೋರಾತ್ರಿ ರಿಲೀಸ್
ರಜತ್ ಕಿಶನ್ ಹಾಗೂ ವಿನಯ್ ಗೌಡ.. ಇಬ್ಬರೂ ಬೇರೆ ಬೇರೆ ಬಿಗ್ ಬಾಸ್ ಸೀಸನ್​ಗಳ ಕಂಟೆಸ್ಟೆಂಟ್​ಗಳು.. ಇಬ್ರೂ ರೆಬೆಲ್ ಆ್ಯಟಿಟ್ಯೂಡ್​ನಲ್ಲಿ ಪ್ರತಿ ಸ್ಪರ್ಧಿಗಳ ಮೇಲೆ ರಾಂಗ್​ ಆಗ್ತಿದ್ದ ಈ ರೆಬೆಲ್ ಬಾಯ್ಸ್.. ಆದ್ರೀಗ ಲಾಂಗ್ ಹಿಡಿದು ಮಾಡಿದ ಇದೊಂದು ರೀಲ್ಸ್ ಇಬ್ಬರನ್ನ ಸಂಕಷ್ಟಕ್ಕೆ ತಳ್ಳಿತ್ತು. ಬೆಂಗಳೂರಿನ ಬಸವೇಶ್ವರ ನಗರ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿತ್ತು.. ಲಾಂಗ್ ಹಿಡಿದು ಭಯದ ವಾತಾವರಣ ಸೃಷ್ಟಿಸುವಂತ ರೀಲ್ಸ್​ ಮಾಡಿದ್ದಾಗಿ ಶಸ್ತ್ರಾಸ್ತ್ರ ಕಾಯ್ದೆಯಡಿ FIR ​ದಾಖಲಾಗಿತ್ತು. ಅಲ್ಲದೇ ಬಸವೇಶ್ವರ ನಗರ ಠಾಣೆ ಪೊಲೀಸರು ಇಬ್ಬರನ್ನ ಬಂಧಿಸಿದ್ರು. ಆದ್ರೀಗ ಮಧ್ಯಾಹ್ನ ಬಂಧಿಸಿ, ರಾತ್ರೋರಾತ್ರಿ ರಿಲೀಸ್ ಮಾಡಿದ್ದಾರೆ. ಇದು ಹಲವಾರು ಪ್ರಶ್ನೆಗಳನ್ನ ಹುಟ್ಟುಹಾಕಿದೆ.
ಇದನ್ನೂ ಓದಿ: 6, 6, 6, 6, 6, 6, 6! ನಿಕೋಲಸ್ ಪೂರನ್ ಭರ್ಜರಿ ಬ್ಯಾಟಿಂಗ್.. ಹೇಗಿತ್ತು ಸಿಡಿಲಬ್ಬರದ ಅರ್ಧ ಶತಕ?
ಏನಿದು ಪೊಲೀಸರ ವರಸೆ?
ವಿನಯ್‌ಗೌಡ ಮತ್ತು ರಜತ್ ಮಚ್ಚು ಪ್ರದರ್ಶಿಸಿದ ಕೇಸ್‌ನಲ್ಲಿ ಬಸವೇಶ್ವರನಗರ ಪೊಲೀಸರು ರಾತ್ರೋರಾತ್ರಿ ವರಸೆ ಬದಲಿಸಿದ್ರಾ ಎಂಬ ಪ್ರಶ್ನೆ ಉದ್ಭವಿಸಿದೆ. ಬೆಳಗ್ಗೆ ಹೊತ್ತು ಒರಿಜಿನಲ್ ಮಚ್ಚು ಎಂದಿದ್ದ ಪೊಲೀಸರು, ರಾತ್ರಿ ಆಗ್ತಿದ್ದಂತೆ ಫೈಬರ್ ಮಚ್ಚು ಎನ್ನುತ್ತಿರೋದು ಅಚ್ಚರಿ ಮೂಡಿಸಿದೆ. ರೀಲ್‌ನಲ್ಲಿ ಬಳಸಿದ್ದ ಮಚ್ಚನ್ನ ಆರೋಪಿಗಳು ಪೊಲೀಸರಿಗೆ ಒಪ್ಪಿಸಿದ್ದರು. ಆದ್ರೀಗ ಇಬ್ಬರ ಕೈನಲ್ಲಿ ರಾರಾಜಿಸಿದ್ದ ಮಚ್ಚು ಫೈಬರ್‌ನಿಂದ ಮಾಡಿದ್ದು ಅಂತ ಪೊಲೀಸರು ಹೇಳ್ತಿದ್ದಾರೆ. ಇದನ್ನೇ ನೆಪ ಮಾಡಿಕೊಂಡು ಪೊಲೀಸ್ ಠಾಣೆಯಿಂದ ವಿನಯ್ ಗೌಡ ಹಾಗೂ ರಜತ್‌ನ ರಾತ್ರೋರಾತ್ರಿ ಬಿಡುಗಡೆ ಮಾಡಿದ್ದಾರೆ. ಆರೋಪಿಗಳ ಮಾತನ್ನ ಕೇಳಿ ಫೈಬರ್ ಮಚ್ಚು ಎಂಬ ನಿರ್ಧಾರಕ್ಕೆ ಪೊಲೀಸರು ಬಂದಿದ್ದಾರೆ. ಇದೀಗ ನೋಟಿಸ್ ನೀಡಿ ಆರೋಪಿಗಳನ್ನ ಬಿಟ್ಟು ಕಳಿಸಿದ್ದು, ಇವತ್ತು ಬೆಳಗ್ಗೆ 10.30ಕ್ಕೆ ಠಾಣೆಗೆ ಬರುವಂತೆ ಪೊಲೀಸರು ಸೂಚನೆ ನೀಡಿದ್ದಾರೆ ಅಂತ ತಿಳಿದುಬಂದಿದೆ.
ಈ ರೀಲ್ಸ್ ಗೀಳು ಇಬ್ಬರು ಸ್ಟಾರ್ಸ್​ಗಳನ್ನ ಸಂಕಷ್ಟಕ್ಕೆ ತಳ್ಳಿದೆ. ಎಲ್ಲದಕ್ಕೂ ಒಂದ್ ಮಿತಿ ಇರುತ್ತೆ.. ಆ ಮಿತಿ ದಾಟಿ.. ಹೀಗೆ ಲಾಂಗ್ ಹಿಡಿದು ರೀಲ್ಸ್ ಮಾಡಿದ್ದೇ ನಿಜಕ್ಕೂ ಅಕ್ಷ್ಯಮ್ಯ.. ಇದೆಲ್ಲದರ ಮಧ್ಯೆ ಪೊಲೀಸರ ಕ್ರಮವೇ ಯಾಕೋ ಅನುಮಾನ ಹುಟ್ಟಿಸುವಂತಿದೆ. ಇವತ್ತು ಮತ್ತೆ ವಿಚಾರಣೆಗೆ ಹಾಜರಾದ್ರೆ ಅಸಲಿಯತ್ತು ಗೊತ್ತಾಗಲಿದೆ.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್