/newsfirstlive-kannada/media/post_attachments/wp-content/uploads/2025/01/BBK-11-Hanumantha-6.jpg)
ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್ ಕನ್ನಡ ಸೀಸನ್ 11 ಗ್ರ್ಯಾಂಡ್​ ಆಗಿ ಅಂತ್ಯ ಹಾಡಿದೆ. ಈ ಬಾರಿಯ ಬಿಗ್ ಬಾಸ್ ಸೀಸನ್ 11ರ ವಿನ್ನರ್​ ಯಾರು ಆಗುತ್ತಾರೆ ವೀಕ್ಷಕರಲ್ಲಿ ಭಾರೀ ಕುತೂಹಲ ಮನೆ ಮಾಡಿತ್ತು. ಅದರಲ್ಲೂ ಫೈನಲ್‌ನಲ್ಲಿ ಹನುಮಂತ ಗೆಲ್ಲುತ್ತಾರಾ ಅಥವಾ ತ್ರಿವಿಕ್ರಮ್​ ಗೆಲ್ಲುತ್ತಾರಾ ಅಂತ ಗೊಂದಲ ಮನೆ ಮಾಡಿತ್ತು.
/newsfirstlive-kannada/media/post_attachments/wp-content/uploads/2025/01/hanuma-2.jpg)
ಇದೀಗ ಆ ಎಲ್ಲ ಗೊಂದಲಕ್ಕೆ ಕಿಚ್ಚ ಸುದೀಪ್​ ಅವರು ತೆರೆ ಎಳೆದಿದ್ದಾರೆ. ಮೊದಲು ಬಿಗ್​ಬಾಸ್​ ಗ್ರ್ಯಾಂಡ್​ ಫಿನಾಲೆ ವಾರಕ್ಕೆ ಮೊದಲು ಹನುಮಂತ ಎಂಟ್ರಿ ಕೊಟ್ಟಿದ್ದರು. ಇದಾದ ಬಳಿಕ ಮೋಕ್ಷಿತಾ, ತ್ರಿವಿಕ್ರಮ್​, ರಜತ್, ಮಂಜು ಹಾಗೂ ಭವ್ಯಾ ಗೌಡ ಫೈನಲಿಸ್ಟ್​ ಆಗಿದ್ದರು. ಈ ಆರು ಸ್ಪರ್ಧಿಗಳ ಪೈಕಿ ಟಾಪ್​ 2 ಸ್ಥಾನಕ್ಕೆ ತ್ರಿವಿಕ್ರಮ್​ ಹಾಗೂ ಹನುಮಂತ ಇದ್ದರು. ಈ ಪೈಕಿ ಕಿಚ್ಚ ಸುದೀಪ್​ ಅವರು ಹನುಮಂತನ ಹೆಸರನ್ನು ಜೋರಾಗಿ ಕೂಗುವ ಮೂಲಕ ವಿನ್ನರ್​ ಯಾರೆಂದು ಹೇಳಿದ್ದಾರೆ.
/newsfirstlive-kannada/media/post_attachments/wp-content/uploads/2025/01/hanuma-3.jpg)
ಇನ್ನೂ, ಬಿಗ್​ಬಾಸ್ ಕನ್ನಡ ಸೀಸನ್ 11ಕ್ಕೆ ಹನುಮಂತ ಅವರು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದು ಗಮನ ಸೆಳೆದರು. ಅವರ ಆಟ ಎಲ್ಲರಿಗೂ ಇಷ್ಟ ಆಯಿತು. ಚಾಣಾಕ್ಷತನದಿಂದ ಅವರು ಆಟ ಆಡಿ ಭೇಷ್ ಎನಿಸಿಕೊಂಡರು. ಫಿನಾಲೆ ಟಿಕೆಟ್ ಪಡೆದ ಮೊದಲ ಸ್ಪರ್ಧಿ ಇವರಾಗಿದ್ದರು. ಈಗ ಕಪ್ ಕೂಡ ಗೆದ್ದುಕೊಂಡಿದ್ದಾರೆ. ಪ್ರತಿ ಸೀಸನ್​ನಲ್ಲಿ ವಿನ್ನರ್​ಗೆ ಟ್ರೋಫಿ ಜೊತೆಗೆ 50 ಲಕ್ಷ ರೂಪಾಯಿ ಹಣವನ್ನು ಕೊಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us