/newsfirstlive-kannada/media/post_attachments/wp-content/uploads/2025/02/HANUMANTHA_2.jpg)
ಬಿಗ್ ಬಾಸ್ 11ರ ವಿನ್ನರ್ ಹನುಮಂತು ಬ್ಯಾಕ್ ಟು ನಾರ್ಮಲ್ ಲೈಫ್‌ಗೆ ಮರಳಿದ್ದಾರೆ. ಬಿಗ್‌ಬಾಸ್ ಬಳಿಕ ವೇದಿಕೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಎಲ್ಲೇ ಹೋದರೂ ಹನುಮಂತನಿಗೆ ಅಭಿಮಾನಿಗಳು ಮುಗಿ ಬೀಳುತ್ತಿದ್ದಾರೆ. ಸದ್ಯಕ್ಕಂತೂ ಹಲವು ಕಾರ್ಯಕ್ರಮಗಳನ್ನ ನೀಡುತ್ತ ಬಿಗ್‌ಬಾಸ್ ವಿನ್ನರ್ ಪುಲ್ ಬ್ಯುಸಿಯಾಗಿದ್ದಾರೆ.
ಸಾದ ಸೀದ ಹಳ್ಳಿಹೈದ.. ಬಿಗ್‌ಬಾಸ್ 11ನೇ ಸೀಸನ್ ವಿನ್ನರ್ ಹನುಮಂತು ಸಖತ್ ಬ್ಯುಸಿಯಾಗಿದ್ದಾರೆ. ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿ ಎಲ್ಲರ ಮನಗೆದ್ದಿದ್ದ ಹನುಮಂತು ಈಗ ತಮ್ಮ ಕಾರ್ಯಕ್ರಮಗಳ ಮೂಲಕ ಜನರಿಗೆ ಮನರಂಜನೆ ನೀಡುತ್ತಿದ್ದಾರೆ.
ಶರೀಫರ ತತ್ವ ಪದ ಹಾಗೂ ಸಿನಿಮಾ ಹಾಡು
ಹಾವೇರಿ ತಾಲೂಕಿನ ಅಗಡಿ ಗ್ರಾಮದಲ್ಲಿ ದೇವಿ ಜಾತ್ರೆಯ ಪ್ರಯುಕ್ತ ಮನರಂಜನಾ ಕಾರ್ಯಕ್ರಮವನ್ನ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಬಿಗ್‌ಬಾಸ್ ವಿನ್ನರ್ ಹನುಮಂತು. ತಮ್ಮ ಹಾಡಿನ ಮೂಲಕವೇ ಹನುಮಂತು ಜನರಿಗೆ ಮನರಂಜನೆ ನೀಡಿದ್ದಾರೆ. ಶರೀಫರ ತತ್ವ ಪದ ಹಾಗೂ ಸಿನಿಮಾ ಹಾಡುಗಳನ್ನ ಹಾಡುವ ಮೂಲಕ ನೆರೆದಿದ್ದ ಪ್ರೇಕ್ಷಕರಿಗೆ ಸಖತ್ ಮನರಂಜನೆ ನೀಡಿದ್ದಾರೆ.
ಹಳ್ಳಿಹೈದ ಹನುಮಂತು ವೇದಿಕೆಗೆ ಆಗಮಿಸುತ್ತಿದ್ದಂತೆ ಜನರ ಕೇಕೆ ಚಪ್ಪಾಳೆ ಜೋರಾಗಿತ್ತು. ಮೊದಲು ಕೇಳ ಜಾಣ ಶಿವಧ್ಯಾನ ಮಾಡಣ್ಣ, ನಿನ್ನ ಒಳಗ ನೀನು ತಿಳಿದು ನೋಡಣ್ಣ ಎಂಬ ಹಾಡನ್ನ ಹಾಡುವ ಮೂಲಕ ಜನರಿಗೆ ಮನರಂಜನೆ ನೀಡಿದರು. ಹಾಡಿನ ಮಧ್ಯದಲ್ಲಿ ಎಗ್ಗರೈಸ್ ತಿಂದು ಬಂದಿನ್ರೀ. ಯಾಕೋ ಸ್ವಲ್ಪ ಧ್ವನಿ ಸರಿ ಇಲ್ಲರ್ರೀ ಎಂದು ಹಾಸ್ಯ ಚಟಾಕಿ ಸಿಡಿಸಿ ಜನರ ಮುಖದಲ್ಲಿ ನಗು ತರಿಸಿದರು.
ಇದನ್ನೂ ಓದಿ: ಹೆಂಡತಿ, ಮಕ್ಕಳಿದ್ದರೂ ಇನ್ನೊಂದು ಮದುವೆ.. ಆತನ 2ನೇ ಪತ್ನಿಯನ್ನ ಅಪಹರಿಸಿ ಅಮಾನವೀಯ ಕೃತ್ಯ
ನೆರೆದಿದ್ದ ಪ್ರೇಕ್ಷಕರನ್ನ ಭಾವುಕ ಕ್ಷಣಕ್ಕೆ ಕರೆದೊಯ್ದ ಹನುಮ
ನಂತರ ನಿಜ ಹೇಳತಿನಿ ಕೇಳ ಗೆಳತಿ ಎಂಬ ಜಾನಪದ ಹಾಡನ್ನ ಹೇಳಿ, ಹನುಮಂತು ಹಳ್ಳಿಯ ಜನರ ಮನ ತಣಿಸಿದರು. ಅಲ್ಲದೆ ಶೇಕ್ ಇಟ್ ಪುಷ್ಪವತಿ ಸಾಂಗ್‌ಗೆ ಸಖತ್ ಸ್ಟೆಪ್ ಹಾಕಿ ಜಾತ್ರೆಗೆ ಆಗಮಿಸಿದ ಜನರಿಗೆ ಮನರಂಜನೆ ನೀಡಿದರು. ದಿವಂಗತ ಪುನೀತ್ ರಾಜಕುಮಾರ್ ಅವರನ್ನ ನೆನೆದು ಬೊಂಬೆ ಹೇಳುತೈತೆ ಹಾಡಿಗೆ ಧ್ವನಿಗೂಡಿಸಿ ನೆರೆದಿದ್ದ ಪ್ರೇಕ್ಷಕರನ್ನ ಭಾವುಕ ಕ್ಷಣಕ್ಕೆ ಕರೆದೊಯ್ದರು.
ಕಾರ್ಯಕ್ರಮ ಮುಗಿಯುತ್ತಿದ್ದಂತೆ ಹನುಮಂತು ಜೊತೆಗೆ ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದಿದ್ದರು. ಹನುಮಂತು ಹಾಡು ಕೇಳಿ, ಪೋಟೋ ಕ್ಲಿಕ್ಕಿಸಿಕೊಂಡು ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದರು. ಹಳ್ಳಿಹೈದ ಹನುಮಂತು ಕಾರ್ಯಕ್ರಮ ಮೇಲೆ ಕಾರ್ಯಕ್ರಮಗಳನ್ನ ಕೊಡುತ್ತಾ ರಾಜ್ಯದ ಜನರ ಮನಸ್ಸನ್ನ ಮತ್ತಷ್ಟು ಗೆಲ್ಲುತ್ತಿರೋದಂತು ನಿಜ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ