ಮೈಂಡ್​ ಗೇಮ್​ ಅಲ್ಲ; ತನ್ನ ಮುಗ್ಧತೆಯಿಂದಲೇ ಕನ್ನಡಿಗರ ಮನ ಗೆದ್ದ ಹನುಮಂತು ಆಟ ಹೇಗಿತ್ತು?

author-image
Ganesh Nachikethu
Updated On
BBK11: ಬಿಗ್​ಬಾಸ್​ನಲ್ಲಿ ಹನುಮಂತ ಅಸಲಿ ಆಟ ಶುರು ಮಾಡಿದ್ದು ಯಾವಾಗ? ಮನೆ ಮಂದಿ ಹೇಳಿದ್ದೇನು?
Advertisment
  • ಮಾತು ಆರಂಭಿಸೋ ಮುನ್ನವೇ ಕೈಕಟ್ಟಿ ವಿನಯತೆಯಿಂದ ನಿಲ್ಲೋ ಸ್ಪರ್ಧಿ
  • ದೈತ್ಯ ಸ್ಪರ್ಧಿಗಳಿಗೆ ಟಕ್ಕರ್ ಕೊಡುತ್ತಲ್ಲೇ ಬಿಗ್​ಬಾಸ್​ ವಿನ್ನರ್ ಹನುಮಂತು
  • ಇವರು ಬಿಗ್​​​ಬಾಸ್​ ಗೆಲ್ಲಲು ಕಾರಣವೇನು? ಕನ್ನಡಿಗರ ಮನ ಗೆದ್ದಿದ್ದು ಹೇಗೆ?

ಮಾತು ಆರಂಭಿಸೋ ಮುನ್ನವೇ ಕೈಕಟ್ಟಿ ವಿನಯತೆಯಿಂದ ನಿಲ್ಲೋ ಸ್ಪರ್ಧಿ. ಥ್ಯಾಂಕ್ಯೂ ಬಿಗ್ ಬಾಸ್ ಎನ್ನುತ್ತಲೇ ದೈತ್ಯ ಸ್ಪರ್ಧಿಗಳಿಗೆ ಟಕ್ಕರ್ ಕೊಡುತ್ತಲ್ಲೇ ಬಿಗ್​ಬಾಸ್​ ವಿನ್ನರ್​ ಆದ ಹನುಮಂತು. ಇವರು ಬಿಗ್​​​ಬಾಸ್​ ಗೆಲ್ಲಲು ಕಾರಣವೇನು? ಕನ್ನಡಿಗರ ಮನ ಗೆದ್ದಿದ್ದು ಹೇಗೆ? ಎಂದು ತಿಳಿದುಕೊಳ್ಳಲು ಈ ಸ್ಟೋರಿ ಓದಿ.

ಹನುಮಂತು ಕನ್ನಡಿಗರಿಗೆ ಇಷ್ಟ ಆಗಲು ಕಾರಣವೇನು?

ಬಿಗ್​ಬಾಸ್​​ ಕನ್ನಡ ಸೀಸನ್​​ 11ರ ವಿನ್ನರ್​​​ ಹನುಮಂತು. ಈತ ಸೀದಾ ಸಾದ ಹಳ್ಳಿಹೈದ. ಹನುಮಂತುಗೆ ರಿಯಾಲಿಟಿ ಶೋಗಳು ಹೊಸದೇನಲ್ಲ. ತನ್ನ ಹಾಡುಗಳ ಮೂಲಕವೇ ಕನ್ನಡಿಗರ ಮನ ಗೆದ್ದಿದ್ದ ಈತನಿಗೆ ಬಿಗ್​​ಬಾಸ್​ ವೇದಿಕೆ ಮಾತ್ರ ಖಂಡಿತ ಹೊಸತು. ಬೇರೆ ಸ್ಪರ್ಧಿಗಳ ನಾಟಕದ ಮಧ್ಯೆ ಯಾವುದೇ ಬಣ್ಣ ಬಳಿದುಕೊಳ್ಳದೆ ತಾನು ಹೇಗೆ ಇದ್ದನೋ ಹಾಗೆಯೇ ಆಟ ಆಡಿದ ಕೆಂಟೆಸ್ಟಂಟ್​​. ಇವರ ನೈಜ ಆಟದ ಜತೆಗೆ ವ್ಯಕ್ತಿತ್ವವೇ ಜನರಿಗೆ ಇಷ್ಟವಾದದ್ದು.

publive-image

ಹಳ್ಳಿಹೈದ ಹನುಮಂತು

ತನ್ನ ಗ್ರಾಮೀಣ ಭಾಷೆಯಿಂದಲೇ ಹೆಸರು ಮಾಡಿದ ಹನುಮಂತು. ಹಾಡು, ನಡವಳಿಕೆ ಮೂಲಕವೂ ಅಷ್ಟೇ ಫೇಮಸ್​ ಆದ್ರು. ದೊಡ್ಮನೆಯಲ್ಲಿ ಏನೇ ಒಂದು ವಿಚಾರವಾದ್ರೂ ಹಾಡು ಹಾಡುತ್ತಲೇ ಕೌಂಟರ್​ ಕೊಡುತ್ತಿದ್ದ. ಹಾಡು ಹಾಡುತ್ತಲೇ ಟಾಸ್ಕನಲ್ಲಿ ಗೆಲ್ಲುತ್ತಾ ಹೋದ. ಆಗಲೇ ಹನುಮಂತನಿಗೆ ಬಿಗ್​ಬಾಸ್ ಗೆಲ್ಲುವ ಸಾಮರ್ಥ್ಯ ಇದೆ ಎಂದು ಕನ್ನಡಿಗರು ಭಾವಿಸಿದ್ರು.

ಹನುಮಂತು ತಾನು ಹೇಗೆ ಇದ್ದೇನೋ ಹಾಗೆಯೇ ಇದ್ದ. ಇದು ಬಿಗ್​ಬಾಸ್ ಆಟದಲ್ಲಿ ಕೆಲ ಸ್ಪರ್ಧಿಗಳಿಗೆ ನಾಟಕೀಯವಾಗಿ ಕಂಡಿತು. ಇದು ಹನುಮಂತನ ಮುಗ್ಧತೆ ಬದಲಿಗೆ, ಮೈಂಡ್ ಗೇಮ್ ಎಂದು ಹಲವರು ಟೀಕಿಸಿದ್ದರು.

ಇದನ್ನೂ ಓದಿ: BBK11GrandFinale: ಅಮ್ಮನ ಕನಸು ನನಸಾಗದ ನೋವು.. ಬಿಗ್​ಬಾಸ್ ಮನೆಯಿಂದ ಮೋಕ್ಷಿತಾ ಔಟ್‌!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment