BBK11: ಶ್ರುತಿ ಬಿಟ್ಟರೆ ಯಾರೂ ಗೆಲ್ಲಲಿಲ್ಲ.. ಬಿಗ್ ಬಾಸ್ ಸೀಸನ್ 3 ರಿಸಲ್ಟ್ ರಿಪೀಟ್ ಆಗುತ್ತಾ?

author-image
admin
Updated On
BBK11: ಶ್ರುತಿ ಬಿಟ್ಟರೆ ಯಾರೂ ಗೆಲ್ಲಲಿಲ್ಲ.. ಬಿಗ್ ಬಾಸ್ ಸೀಸನ್ 3 ರಿಸಲ್ಟ್ ರಿಪೀಟ್ ಆಗುತ್ತಾ?
Advertisment
  • ಮಂಜು, ತ್ರಿವಿಕ್ರಮ್, ರಜತ್, ಭವ್ಯಾ, ಮೋಕ್ಷಿತಾ, ಹನುಮಂತ
  • ಬಿಗ್ ಬಾಸ್ ಸೀಸನ್ 11 ಗ್ರ್ಯಾಂಡ್‌ ಫಿನಾಲೆಯ ಮೆಗಾ ರಿಸಲ್ಟ್
  • ಇಂದು, ನಾಳೆ ಬಿಗ್ ಬಾಸ್ ಸೀಸನ್ 3ರ ರಿಸಲ್ಟ್ ರಿಪೀಟ್ ಆಗುತ್ತಾ?

ಬಿಗ್ ಬಾಸ್ ಸೀಸನ್ 11 ಗ್ರ್ಯಾಂಡ್‌ ಫಿನಾಲೆಯ ಮೆಗಾ ರಿಸಲ್ಟ್ ಸಾಕಷ್ಟು ಕುತೂಹಲ ಕೆರಳಿಸಿದೆ. ಇನ್ನು ಕೆಲವೇ ಕೆಲವು ಗಂಟೆಯಲ್ಲಿ ಬಿಗ್ ಬಾಸ್ ಸೀಸನ್ 11 ಯಾರ್ ಗೆಲ್ತಾರೆ ಅನ್ನೋ ಪ್ರಶ್ನೆಗೆ ಉತ್ತರ ಸಿಗಲಿದೆ. ಮಂಜು, ತ್ರಿವಿಕ್ರಮ್, ರಜತ್, ಭವ್ಯಾ, ಮೋಕ್ಷಿತಾ, ಹನುಮಂತ ಈ 6 ಸ್ಪರ್ಧಿಗಳಲ್ಲಿ ಯಾರು ಬಿಗ್ ಬಾಸ್ ವಿನ್ನರ್ ಆಗ್ತಾರೆ ಅನ್ನೋದು ಕನ್ನಡ ಕಿರುತೆರೆಯ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

ಬಿಗ್ ಬಾಸ್ ಸೀಸನ್ 11 ಫಿನಾಲೆ ಹತ್ತಿರವಾದಂತೆ ಯಾರ್ ಗೆಲ್ಲುತ್ತಾರೆ ಅಂತ ಪ್ರೇಕ್ಷಕರು ಎದುರು ನೋಡುತ್ತಿದ್ದಾರೆ. ಫಿನಾಲೆಗೂ ಮುನ್ನವೇ ಸೀಸನ್ 11, ಬಿಗ್ ಬಾಸ್ ಸೀಸನ್ 3ರ ಫಿನಾಲೆಯನ್ನು ನೆನಪಿಸುತ್ತಿದೆ. ಯಾಕಂದ್ರೆ ಈ ಬಾರಿಯ ಫಿನಾಲೆಗೆ ಇಬ್ಬರು ಮಹಿಳಾ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದು ಸೀಸನ್ 3ರ ರಿಸಲ್ಟ್ ರಿಪೀಟ್ ಆಗುತ್ತಾ ಅನ್ನೋ ಪ್ರಶ್ನೆ ಮೂಡಿದೆ.

publive-image

ಬಿಗ್ ಬಾಸ್ ಸೀಸನ್ 3ರಲ್ಲಿ ಸ್ಯಾಂಡಲ್‌ವುಡ್ ನಟಿ ಶೃತಿ ಅವರು 100 ದಿನಗಳ ಯಶಸ್ವಿ ಪಯಣ ಮುಗಿಸಿ ವಿನ್ನರ್ ಕೂಡ ಆಗಿದ್ದರು. ಇದೀಗ ಬಿಗ್ ಬಾಸ್ ಸೀಸನ್ 11 ಅಂತಿಮ ಘಟ್ಟ ತಲುಪಿದ್ದು, ಇವತ್ತು ಮತ್ತು ನಾಳೆ ಯಾರ ಕೈಗೆ ಟ್ರೋಫಿ ಅನ್ನೋದು ಗೊತ್ತಾಗಲಿದೆ. ಒಂದೇ ಒಂದು ಟ್ರೋಫಿಗೆ 12 ಕೈಗಳು, 6 ಸ್ಪರ್ಧಿಗಳು ಕಾತರದಿಂದ ಕಾಯುತ್ತಿದ್ದಾರೆ. ಕೋಟ್ಯಾಂತರ ಕನ್ನಡಿಗರು ಬಿಗ್‌ ಬಾಸ್ ಸೀಸನ್ 11 ಟ್ರೋಫಿ ಯಾರ ಮನೆಗೆ ಹೋಗುತ್ತೆ ಅಂತ ಎದುರು ನೋಡುತ್ತಿದ್ದಾರೆ.

publive-image

ಬಿಗ್ ಬಾಸ್ ಮನೆಯಲ್ಲಿ ಉಳಿದ 6 ಸ್ಪರ್ಧಿಗಳಲ್ಲಿ ಒಬ್ಬರಿಗೆ ಸೀಸನ್ 11ರ ಟ್ರೋಫಿ ಹಾಗೂ 50 ಲಕ್ಷ ರೂಪಾಯಿ ಬಹುಮಾನ ಸಿಗುತ್ತಿದೆ. ಹನುಮಂತ, ಮೋಕ್ಷಿತಾ ಪೈ, ತ್ರಿವಿಕ್ರಮ್​, ಭವ್ಯಾ ಗೌಡ, ರಜತ್ ಹಾಗೂ ಉಗ್ರಂ ಮಂಜು ಗ್ರ್ಯಾಂಡ್​ ಫಿನಾಲೆ ವಾರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಆದ್ರೆ ಈ ಬಾರಿಯ ಬಿಗ್​ಬಾಸ್​ ಸೀಸನ್ 11ರ ಟ್ರೋಫಿಯನ್ನು ಮಹಿಳಾ ಸ್ಪರ್ಧಿಗಳು ವಿನ್ನರ್ ಆಗೋ ಚಾನ್ಸಸ್ ಇದ್ಯಾ ಎಂದು ವೀಕ್ಷಕರು ಕಾಯುತ್ತಿದ್ದಾರೆ.

publive-image

ಮಹಿಳೆ ಸ್ಪರ್ಧಿಗಳಿಗೆ ಕಿಚ್ಚ ಸುದೀಪ್​ ಕಿವಿಮಾತು!
ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಸೀಸನ್ 10ರಲ್ಲಿ ಮಹಿಳಾ ಸ್ಪರ್ಧಿಗಳು ಯಾಕೆ ಗೆಲ್ಲುತ್ತಿಲ್ಲ ಅನ್ನೋ ವಿಚಾರವನ್ನ ಪ್ರಸ್ತಾಪ ಮಾಡಿದ್ದರು. ಬಿಗ್ ಬಾಸ್ ಮನೆಯಲ್ಲಿ ಮಹಿಳಾ ಸ್ಪರ್ಧಿಗಳಿಗೆ ಎರಡು ಟೀಂ ಲೀಡರ್‌ ಆಯ್ಕೆ ಮಾಡಿ ಎಂದಾಗ 20 ಸೆಕೆಂಡ್‌ ಕೂಡ ಟೈಮ್ ತೆಗೆದುಕೊಳ್ಳದೇ ವಿನಯ್‌ ಹಾಗೂ ಕಾರ್ತಿಕ್‌ ಅವರನ್ನೇ ಆಯ್ಕೆ ಮಾಡಿದ್ದೀರಿ.

ಇದನ್ನೂ ಓದಿ: BBK11: ಮೋಕ್ಷಿತಾನಾ, ಭವ್ಯಾನಾ? ಈ ಬಾರಿ ಮಹಿಳಾ ಸ್ಪರ್ಧಿ ವಿನ್ನರ್ ಆಗ್ತಾರಾ? ಮಾಜಿ ಸ್ಪರ್ಧಿಗಳು ಹೇಳಿದ್ದೇನು? 

ನಾನ್‌ ಯಾಕೆ ಕ್ಯಾಪ್ಟನ್‌ ಆಗಬಾರದು ಎಂದು ಯಾರಿಗೂ ಅನ್ನಿಸಿಲ್ವಾ? ಯಾವೊಬ್ಬ ಮಹಿಳೆಯರು ಮುಂದೆ ಬರಲಿಲ್ಲ. ಮುಂದಿನ ವಾರ ನೇರವಾಗಿ ನಾಮಿನೇಟ್‌ ಮಾಡುವ ಇಬ್ಬರು ಸ್ಪರ್ಧಿಗಳ ಹೆಸರು ಹೇಳಿ ಎಂದರೆ ಸಮಯ ತೆಗೆದುಕೊಂಡಿರಿ. ಆದರೆ ನೀವು ಕ್ಯಾಪ್ಟನ್‌ ಆಗಬಹುದಾ ಎಂಬ ಯೋಚನೆ ಕೂಡ ಮಾಡಿಲ್ಲ. ನೀವೆಲ್ಲರೂ ಆಡೋಕೆ ಎಂದೇ ಬಿಗ್​ಬಾಸ್ ಮನೆಗೆ ಹೋಗಿದ್ದೀರಿ. ಹಾಗಿದ್ದರೂ ಬೇರೆಯವರಿಗೆ ಆಟವನ್ನು ಬಿಟ್ಟುಕೊಡೋದು ಏಕೆ? 

publive-image

ಇಷ್ಟೂ ಸೀಸನ್‌ನಲ್ಲಿ ಮಹಿಳೆಯರು ಗೆದಿದ್ದು ಒಬ್ಬರೇ. ಅದು ಶ್ರುತಿ ಅವರು ಮಾತ್ರ. ಉಳಿದ ಎಲ್ಲಾ ವಿನ್ನರ್​ಗಳು ಪುರುಷರೇ. ಮಹಿಳೆಯರು ಏಕೆ ವಿನ್ ಆಗೋಕೆ ಆಗಲ್ಲ ಎಂದು ಅನೇಕರು ಪ್ರಶ್ನೆ ಮಾಡುತ್ತಾರೆ.

ನಿಮ್ಮ ಈ ಮನಸ್ಥಿತಿಯಿಂದಲೇ ಮಹಿಳೆಯರು ಬಿಗ್ ಬಾಸ್ ಗೆಲ್ಲುತ್ತಿಲ್ಲ. ನಾನ್ಯಾಕೆ ಕ್ಯಾಪ್ಟನ್ ಆಗಬಾರದು ಅಂತ ನಿಮಗೆ ಅನ್ನಿಸಲಿಲ್ವಾ? ಯುದ್ಧಕ್ಕೆ ಇಳಿದ ಮೇಲೆ ಸೋತರೂ ಪರವಾಗಿಲ್ಲ, ಸತ್ತಾದಾರೂ ಗೆಲ್ಲಿ. ಹೇಗಿರಬೇಕು ಅನ್ನೋದು ನಿಮಗೆ ಬಿಟ್ಟಿದ್ದು. ಆದರೆ ಈ ರೀತಿ ಮಾತ್ರ ಇರಬೇಡಿ ಎಂದು ಸುದೀಪ್ ಕಿವಿಮಾತು ಹೇಳಿದ್ದರು. ಇದೀಗ ಬಿಗ್‌ಬಾಸ್‌ ಸೀಸನ್ 11ರ ಫಿನಾಲೆಯಲ್ಲಿ ಇಬ್ಬರು ಮಹಿಳಾ ಸ್ಪರ್ಧಿಗಳಿದ್ದು ವಿನ್ನರ್ ಪಟ್ಟ ಸಿಗುತ್ತಾ ಅನ್ನೋದನ್ನ ಕಾದು ನೋಡಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment