/newsfirstlive-kannada/media/post_attachments/wp-content/uploads/2025/01/rajath8.jpg)
ಬೆಂಗಳೂರು: ಈ ವಾರವೇ ಬಿಗ್‌ಬಾಸ್ ಗ್ರ್ಯಾಂಡ್ ಫಿನಾಲೆ. 50 ದಿನ ಆದ್ಮೇಲೆ ಬಿಗ್‌ಬಾಸ್ ಮನೆಗೆ ಕಾಲಿಟ್ಟಿದ್ದ ರಜತ್ ಫಿನಾಲೆ ವಾರಕ್ಕೆ ಕಾಲಿಟ್ಟಿದ್ದಾರೆ. ಸಖತ್ ಆಗಿ ಆಟ ಆಡ್ತಿರೋ ರಜತ್ ಬಿಗ್‌ಬಾಸ್ ಸ್ಪರ್ಧಿಗಳಿಗೆ ಟಫ್ ಕಾಂಪಿಟೇಟರ್ ಆಗಿದ್ದಾರೆ. ಕಪ್ ಗೆಲ್ಲೋಕೆ ರಜತ್ ಬಿಗ್‌ಬಾಸ್ ಮನೆಯೊಳಗೆ ಹೋರಾಡ್ತಿದ್ರೆ, ಇಲ್ಲಿ ಅವ್ರ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ರಜತ್ ಕಿಶನ್.. ಬಿಗ್‌ಬಾಸ್-11 ಸ್ಪರ್ಧಿ. ಬಿಗ್ ಮನೆಯೊಳಗೆ ಸ್ಪರ್ಧಿಗಳಿಗೆ ಪಂಚ್ ಮೇಲೆ ಪಂಚ್ ಕೊಡ್ತಾ ಸಖತ್ ಆಗಿ ಆಟ ಆಡ್ಕೊಂಡು ಬರ್ತಿದ್ದಾರೆ. 50 ದಿನ ಆದ್ಮೇಲೆ ಮನೆಯೊಳಗೆ ಬಂದಿದ್ರು ಫಸ್ಟ್ ಡೇಯಿಂದ ಇರೋರನ್ನೇ ಮನೆಗೆ ಕಳ್ಸಿ ಕಪ್ ಗೆಲ್ಲೋಕೆ ಆಟ ಆಡ್ತಿದ್ದಾರೆ. ಆದ್ರೀಗ ರಜತ್‌ಗೆ ಟ್ರೋಲ್ ಪೇಜ್‌ಗಳ ತಲೆಬಿಸಿ ಶುರುವಾಗಿದ್ದು, ರಜತ್ ಪತ್ನಿ ಅಕ್ಷತಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಫೋಟೋ ಡಿಲೀಟ್ ಮಾಡೋದಕ್ಕೆ ಪತ್ನಿಗೆ ಹಣಕ್ಕೆ ಡಿಮ್ಯಾಂಡ್
ಪ್ಯಾಟೆ ಹುಡ್ಗಿರ್ ಹಳ್ಳಿ ಲೈಪು ರಿಯಾಲಿಟಿ ಶೋ ಖ್ಯಾತಿಯ ಅಕ್ಷತಾ ರಜತ್ ಪತ್ನಿ ಅಂತಾ ಎಲ್ಲರಿಗೂ ಗೊತ್ತಿದೆ. ಆದ್ರೆ ಗೊತ್ತಿಲ್ಲದ ವಿಚಾರವೊಂದು ಇದೀಗ ಟ್ರೋಲ್ ಪೇಜ್‌ಗಳಲ್ಲಿ ಹರಿದಾಡ್ತಿದೆ. ಮಾಜಿ ಗೆಳತಿಯ ಜೊತೆಗಿನ ರಜತ್ ಫೋಟೋಗಳು ಟ್ರೋಲ್ ಪೇಜ್‌ಗಳಲ್ಲಿ ವೈರಲ್ ಆಗಿವೆ. ಇಬ್ಬರ ಫೋಟೋವನ್ನ ಅಪ್ಲೋಡ್ ಮಾಡಿದ್ದು, ಅದನ್ನ ಡಿಲೀಟ್ ಮಾಡಲು ರಜತ್ ಪತ್ನಿಗೆ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆ.
ಟ್ರೋಲ್ ಪೇಜ್​ ಟೆನ್ಷನ್
ಮಾಜಿ ಗೆಳತಿಯ ಜೊತೆಗಿದ್ದ ರಜತ್ ಫೋಟೋಗಳು ವೈರಲ್ ಆಗಿದ್ದು, ಫೋಟೋ ಡಿಟೀಲ್ ಮಾಡಲು ರಜತ್ ಪತ್ನಿ ಅಕ್ಷತಾ ಮೆಸೇಜ್ ಮಾಡಿದ್ರು. ಆದ್ರೆ ಫೋಟೋ ಡಿಲೀಟ್ ಮಾಡಲು ಹಣಕ್ಕೆ ಡಿಮ್ಯಾಂಡ್ ಮಾಡಿದ್ದು, ಅಪರಿಚಿತ ವ್ಯಕ್ತಿ ನೀಡಿದ ಯುಪಿಐ ಐಡಿಗೆ ಅಕ್ಷತಾ ಹಣ ಟ್ರಾನ್ಸ್‌ಫರ್ ಮಾಡಿದ್ರು. ಹಣ ಹಾಕಿದ ಬಳಿಕವೂ ಬೇರೆ ಟ್ರೋಲ್ ಪೇಜ್‌ನಲ್ಲಿ ಫೋಟೋ ವೈರಲ್ ಆಗಿದ್ದು, ಪಶ್ಟಿಮ ವಿಭಾಗದ ಠಾಣೆಗೆ ರಡತ್ ಪತ್ನಿ ಅಕ್ಷತಾ ದೂರು ಕೊಟ್ಟಿದ್ದಾರೆ. ದೂರಿನ ಬಳಿಕ 10ಕ್ಕೂ ಹೆಚ್ಚು ಟ್ರೋಲ್ ಪೇಜ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಟ್ರೋಲ್ ಪೇಜ್‌ಗಳ ವಿರುದ್ಧ ಎಫ್‌ಐಆರ್ ದಾಖಲಾಗ್ತಿದ್ದಂತೆ, ಫೋಟೋ ಡಿಲೀಟ್ ಆಗಿದೆ. ಫೋಟೋ ಅಪ್ಲೋಡ್ ಮಾಡಿದ್ದ ಅಕೌಂಟ್ ಕೂಡ ಡಿ-ಆ್ಯಕ್ಟಿವ್ ಆಗಿದೆ. ಸದ್ಯ ಬ್ಲ್ಯಾಕ್‌ಮೇಲ್ ಮಾಡಿದ ಅಪರಿಚಿತ ವ್ಯಕ್ತಿಗಾಗಿ ಪೊಲೀಸ್ರು ಶೋಧ ನಡೆಸ್ತಿದ್ದಾರೆ.
ಇದನ್ನೂ ಓದಿ:ನಾಳೆಯಿಂದ 3 ದಿನಗಳ ಕಾಲ ಭರ್ಜರಿ ಮಳೆ; ರಾಜ್ಯದ ಈ ಜಿಲ್ಲೆಗಳಲ್ಲಿ ಕಟ್ಟೆಚ್ಚರ
ವಿಶೇಷ ಸೂಚನೆ:ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us