Advertisment

ಬಿಗ್​ಬಾಸ್​​ ಕನ್ನಡ ಸೀಸನ್​​ 11; ದೊಡ್ಮನೆಗೆ ಎಂಟ್ರಿ ಕೊಟ್ಟ ಮೊದಲ ಸ್ಪರ್ಧಿ ಇವರೇ ನೋಡಿ!

author-image
Ganesh Nachikethu
Updated On
BBK11: ದೊಡ್ಮನೆಗೆ​ ಅಚ್ಚರಿ ರೀತಿಯಲ್ಲಿ ಎಂಟ್ರಿ ಕೊಟ್ಟ ವಕೀಲ ಜಗದೀಶ್​
Advertisment
  • ಕನ್ನಡದ ಬಹುನಿರೀಕ್ಷಿತ ರಿಯಾಲಿಟಿ ಶೋ ಬಿಗ್​ಬಾಸ್​​​
  • ಬಿಗ್‌ ಬಾಸ್‌‌ ಸೀಸನ್‌ 11 ಮೊದಲ ಸ್ಪರ್ಧಿ ರಿವೀಲ್​​..!
  • ಕನ್ನಡದ ಬಿಗ್​ಬಾಸ್​ ಮೊದಲ ಸ್ಪರ್ಧಿ ಇವರೇ ನೋಡಿ

ಡೈರೆಕ್ಟಾಗಿ ಟ್ರೆಂಡಿಂಗ್‌ನಲ್ಲಿರೋ ವಿಷ್ಯಕ್ಕೆ ಬಂದುಬಿಡ್ತೀವಿ. ನಿಮಗೆ ಗೊತ್ತಿಲ್ಲದ ಪ್ರಶ್ನೆ ಏನಲ್ಲ. ನೀವೇ ತುಂಬಾ ಕುತೂಹಲದಿಂದ ಕಾಯ್ತಿರೋ, ನಿಮ್ಮನ್ನ ಕಾಡ್ತಿರೋ ಪ್ರಶ್ನೆಯದು. ಇಲ್ಲಿಯವರೆಗೂ ನಿಮ್ಮ ಕಿವಿಗೆ ಎಷ್ಟೊಂದು ಹೆಸರು ಬಿದ್ದಿರಬಹುದು. ಆದ್ರೆ, ಈಗ ಕೇಳೋ, ನೋಡೋ ಹೆಸರುಗಳು ಕನ್ಫರ್ಮ್‌. ಹಾಗಾದ್ರೆ, ಆ ಪ್ರಶ್ನೆ ಯಾವುದು ಅಂತಾ ಗೊತ್ತಾಯ್ತು ತಾನೇ. ಅದೇ ಬಿಗ್‌ಬಾಸ್‌ ಕನ್ನಡ ಸೀಸನ್‌ 11ರ ಸ್ಪರ್ಧಿಗಳು ಯಾಱರು? ಟ್ರೇಡಿಂಗ್‌ನಲ್ಲಿರೋ ಈ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

Advertisment

ಇಲ್ಲೇ ಸ್ವರ್ಗ, ಇಲ್ಲೇ ನರಕ ಬೇರೇನಿಲ್ಲ ಸುಳ್ಳು. ಈ ಹಾಡೇ ಬಿಗ್‌ಬಾಸ್‌ ಸೀಸನ್‌ 11ರ ಅಡಿಪಾಯ. ಬಿಗ್‌ಬಾಸ್‌ನ ಆತ್ಮ. ಬಿಗ್‌ಬಾಸ್‌ ಸ್ಪರ್ಧಿಗಳ ಬಿಗ್ಗೆಸ್ಟ್ ಚಾಲೆಂಜ್. ಈ ಬಾರಿ ಸ್ವರ್ಗ ಮತ್ತು ನರಕ ಕಾನ್ಸೆಪ್ಟ್‌ನಲ್ಲಿ ಬಿಗ್‌ಬಾಸ್ ಕನ್ನಡ ಸೀಸನ್‌ ರೂಪುಗೊಂಡಿದೆ ಅನ್ನೋದು ನಿಮಗೆ ಈಗಾಗಲೇ ಗೊತ್ತಾಗಿದೆ. ಇನ್ ಅಂಡ್ ಔಟ್‌ ಎಲ್ಲಾ ಗೊತ್ತಿದೆ. ಈಗ ಬಿಗ್​​ ಬಾಸ್​​ಗೆ ಎಂಟ್ರಿ ಕೊಡ್ತಿರೋ ಮೊದಲ ಸ್ಪರ್ಧಿ ಬಗ್ಗೆ ರಿವೀಲ್​ ಆಗಿದೆ.

publive-image

ಯೆಸ್​​, ಬಿಗ್​ಬಾಸ್​ ಎಂಟ್ರಿ ಕೊಡ್ತಿರೋ ಮೊದಲ ಸ್ಪರ್ಧಿ ಸೀರಿಯಲ್‌ನ ಪಾಪ್ಯುಲರ್ ನಟಿ ಗೌತಮಿ ಜಾಧವ್‌. ನಾವು ಇವರು ಬಿಗ್​ಬಾಸ್​ಗೆ ಹೋಗ್ತಾರೆ ಎಂದು ನ್ಯೂಸ್​ಫಸ್ಟ್​ನಲ್ಲಿ ಮೊದಲೇ ವರದಿ ಮಾಡಿದ್ವಿ. ಈಗ ನ್ಯೂಸ್​ಫಸ್ಟ್​ ವರದಿ ಮಾಡಿದಂತೆಯೇ ಗೌತಮಿ ಜಾಧವ್​​​ ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

ಯಾರು ಈ ಗೌತಮಿ ಜಾಧವ್‌?

ಸತ್ಯ ಸೀರಿಯಲ್ ಮೂಲಕ ಜನಪ್ರಿಯರಾಗಿರುವ ಗೌತಮಿ ಜಾಧವ್‌, ಅವರು ಖಡಕ್ ರೋಲ್ ಮೂಲಕನೇ ಪ್ರಖ್ಯಾತಿ ಪಡೆದಿದ್ದಾರೆ. ಆದ್ರೆ, ಅವರು ರಿಯಲ್ ಲೈಫ್‌ನಲ್ಲಿ ಸಖತ್ ಸಾಫ್ಟ್‌. ಆದ್ರೆ, ಬಿಗ್‌ಬಾಸ್‌ನಲ್ಲಿ ಹೇಗಿರ್ತಾರೋ ಏನೋ ಗೊತ್ತಿಲ್ಲ.

Advertisment

ಇದನ್ನೂ ಓದಿ:BIGG BOSS ಮನೆಗೆ ಎಂಟ್ರಿ ಕೊಡ್ತಾ ಇರೋ ಸ್ಪರ್ಧಿ ಇವರೇ ನೋಡಿ

Advertisment
Advertisment
Advertisment