ಬ್ಯಾಗ್ ಹಿಡಿದು, ಆ್ಯಪಲ್ ತಿನ್ನುತ್ತ ಜೈಲಿನಿಂದ ಹೊರಬಂದ ವಿನಯ್, ರಜತ್ ಕಿಶನ್..!

author-image
Ganesh
Updated On
ಬ್ಯಾಗ್ ಹಿಡಿದು, ಆ್ಯಪಲ್ ತಿನ್ನುತ್ತ ಜೈಲಿನಿಂದ ಹೊರಬಂದ ವಿನಯ್, ರಜತ್ ಕಿಶನ್..!
Advertisment
  • ಮಚ್ಚು ಹಿಡಿದು ರೀಲ್ಸ್ ಮಾಡಿದ ಕೇಸ್​ನಲ್ಲಿ ಜೈಲು ಸೇರಿದ್ದರು
  • ಜೈಲಿನಿಂದ ಹೊರ ಬರ್ತಿದ್ದಂತೆ ವಿಸಿಟರ್​ ಜೊತೆ ಸೆಲ್ಫಿಗೆ ಪೋಸ್
  • 24ನೇ ಎಸಿಎಂಎಂ ಕೋರ್ಟ್​​ನಿಂದ ಷರತ್ತುಬದ್ಧ ಜಾಮೀನು

ಮಚ್ಚು ಹಿಡಿದು ರೀಲ್ಸ್ ಮಾಡಿದ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಮಾಜಿ ಬಿಗ್​ಬಾಸ್ ಸ್ಪರ್ಧಿಗಳಾದ ರಜತ್ ಕಿಶನ್ ಹಾಗೂ ವಿನಯ್ ಗೌಡ ಇಂದು ರಿಲೀಸ್ ಆಗಿದ್ದಾರೆ.

ರೀಲ್ಸ್ ಪ್ರಕರಣದಲ್ಲಿ ಇಬ್ಬರಿಗೂ 24ನೇ ಎಸಿಎಂಎಂ ಕೋರ್ಟ್ ನಿನ್ನೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಆದರೆ ಸಮಯಕ್ಕೆ ಸರಿಯಾಗಿ ಜಾಮೀನು ಆದೇಶ ಪ್ರತಿ ತಲುಪದ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಜೈಲಿನಲ್ಲೇ ಕಳೆದಿದ್ದರು. ಇಂದು ಬಿಡುಗಡೆಗೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳನ್ನು ಪೂರೈಸಿ ರಿಲೀಸ್ ಆಗಿದ್ದಾರೆ. ಇಬ್ಬರು ಒಂದು ಕೈಯಲ್ಲಿ ಬ್ಯಾಗ್ ಹಿಡಿದು, ಇನ್ನೊಂದು ಕೈಯಲ್ಲಿ ಸೇಬು ಹಣ್ಣು ತಿನ್ನುತ್ತ ಹೊರ ಬಂದಿದ್ದಾರೆ. ಈ ವೇಳೆ ಕೆಲವು ವಿಸಿಟರ್​ ಸೆಲ್ಫಿ ಕೇಳಿದ್ದಾರೆ. ಸೆಲ್ಫಿಗೂ ಪೋಸ್ ನೀಡಿದ್ದಾರೆ.

publive-image

ರೀಲ್ಸ್​ ಮಾಡುವ ಬರದಲ್ಲಿ ಬಿಗ್​ಬಾಸ್ ಮಾಜಿ ಸ್ಪರ್ಧಿಗಳಾದ ವಿನಯ್​ ಗೌಡ ಹಾಗೂ ರಜತ್​ ಕಿಶನ್​ ಮಚ್ಚು ಹಿಡಿದುಕೊಂಡು ವಿಡಿಯೋ ಶೂಟ್​ ಮಾಡಿದ್ದರು. ಹೀಗಾಗಿ ಈ ಇಬ್ಬರ ಮೇಲೆ ​ಶಸ್ತ್ರಾಸ್ತ್ರ ಕಾಯ್ದೆಯಡಿ FIR ​ದಾಖಲಾಗಿತ್ತು. ಬಳಿಕ ವಿಚಾರಣೆಗೆ ಬರುವಂತೆ ಪೊಲೀಸರು ಸೂಚನೆ ಕೊಟ್ಟಿದ್ದರು. ಆದ್ರೆ, ವಿನಯ್​ ಗೌಡ ಹಾಗೂ ರಜತ್​ ಕಿಶನ್ ಫೈಬರ್​ ಮಚ್ಚು ನೀಡಿ ಯಾಮಾರಿಸಿದ್ದರು. ಹೀಗಾಗಿ ಪೊಲೀಸರು ಆ ರಿಯಲ್ ಮಚ್ಚಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈ ಮಧ್ಯೆ ಆರೋಪಿಗಳು ಜಾಮೀನು ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: 21 ರನ್​ ನೀಡಿ 3 ವಿಕೆಟ್ ಕಿತ್ತ ಹೇಜಲ್​ವುಡ್..​ ವಿನ್ನಿಂಗ್ ದೃಶ್ಯ ಹಂಚಿಕೊಂಡ ಆರ್​ಸಿಬಿ -VIDEO

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment