Advertisment

biggbosskannada11: ಹೊಸ ಸೀಸನ್, ಹೊಸ ಮನೆಗೆ 17 ಹೊಸ ಕಂಟೆಸ್ಟೆಂಟ್ಸ್‌.. ಸ್ವರ್ಗ, ನರಕದ ಬಾಗಿಲು ಓಪನ್!

author-image
admin
Updated On
ಬಿಗ್‌ ಬಾಸ್ ಸೀಸನ್ 11: ಸ್ವರ್ಗಕ್ಕೆ ಯಾರು? ನರಕದಲ್ಲಿ ನರಳಾಡೋದು ಯಾರು? ಇಲ್ಲಿದೆ ಬಿಗ್ ಅಪ್ಡೇಟ್‌!
Advertisment
  • ಬಿಗ್‌ ಬಾಸ್‌ ಸೀಸನ್ 11ರ 17 ಸ್ಪರ್ಧಿಗಳು ಬಿಗ್‌ ಬಾಸ್ ಮನೆಗೆ ಎಂಟ್ರಿ
  • ಬಾದ್ ಷಾ ಕಿಚ್ಚ ಸುದೀಪ ಸಾರಥ್ಯದಲ್ಲಿ ಸೀಸನ್ 11 ಗ್ರ್ಯಾಂಡ್ ಓಪನಿಂಗ್
  • ಸೀಸನ್‌ 11ರ 17 ಸ್ಪರ್ಧಿಗಳಲ್ಲಿ ಯಾರು ಸ್ವರ್ಗಕ್ಕೆ ಯಾರು ನರಕಕ್ಕೆ ಹೋಗ್ತಾರೆ?

ಕಿರುತೆರೆ ಜಗತ್ತಿನ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11ರ ಶುಭಾರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿದೆ. ಇಂದು ಸಂಜೆ 6 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 11ರ ಗ್ರ್ಯಾಂಡ್ ಓಪನಿಂಗ್ ಆರಂಭವಾಗುತ್ತಿದೆ. ಅದ್ಧೂರಿ, ಅಬ್ಬರದ ಜೊತೆಗೆ ಬಿಗ್‌ ಬಾಸ್‌ ಸೀಸನ್ 11ರ 17 ಸ್ಪರ್ಧಿಗಳು ಇಂದು ಬಿಗ್‌ ಬಾಸ್ ಮನೆಗೆ ಎಂಟ್ರಿ ಕೊಡುತ್ತಿದ್ದಾರೆ.

Advertisment

ನ್ಯೂಸ್ ಫಸ್ಟ್‌ಗೆ ಸಿಕ್ಕಿರೋ ಮಾಹಿತಿ ಪ್ರಕಾರ ಈಗಾಗಲೇ ಬಿಗ್‌ ಬಾಸ್ ಮನೆಗೆ ಹೋಗುವ ಎಲ್ಲಾ ಕಂಟೆಸ್ಟೆಂಟ್ಸ್‌ಗಳು ಗ್ರ್ಯಾಂಡ್‌ ಫಿನಾಲೆ ವೇದಿಕೆಗೆ ಎಂಟ್ರಿ ಕೊಟ್ಟಿದ್ದಾರೆ. ಹೊಸ ಸೀಸನ್, ಹೊಸ ಮನೆ, ಹೊಸ ಕಂಟೆಸ್ಟೆಂಟ್ಸ್, ಹೊಸ ಆಟ ಇನ್ನೇನು ಶುರುವಾಗೋದು ಒಂದೇ ಬಾಕಿ ಉಳಿದಿದೆ.

publive-image

ಕಲರ್ಸ್ ಕನ್ನಡ ವಾಹಿನಿ ಲೇಟೆಸ್ಟ್ ವಿಡಿಯೋವೊಂದನ್ನ ಬಿಡುಗಡೆ ಮಾಡಿದೆ. ಅದರಲ್ಲಿ ಬಿಗ್‌ ಬಾಸ್ ಸೀಸನ್ 11ರ ಅದ್ಧೂರಿ ಆರಂಭ ಹೇಗಿದೆ ಅನ್ನೋದರ ಝಲಕ್ ತೋರಿಸಲಾಗಿದೆ. ಬಾದ್ ಷಾ ಕಿಚ್ಚ ಸುದೀಪ ಸಾರಥ್ಯದಲ್ಲಿ ಬಿಗ್ ಬಾಸ್ ಸೀಸನ್ 11 ಗ್ರ್ಯಾಂಡ್ ಓಪನಿಂಗ್ ಆರಂಭವಾಗಿದೆ.

publive-image

ಬಿಗ್ ಬಾಸ್ ಸೀಸನ್ 11ರಲ್ಲಿ ಸ್ವರ್ಗ, ನರಕದ ಎರಡು ಮನೆಗಳಿವೆ. ಅದರಲ್ಲಿ ಯಾರಿಗೆ ಸ್ವರ್ಗ? ಯಾರಿಗೆ ನರಕ? ಅನ್ನೋದು ಇನ್ನು ಕೆಲವೇ ಗಂಟೆಯಲ್ಲಿ ರಿವೀಲ್ ಮಾಡಲಾಗುತ್ತಿದೆ. ಹೊಸ ಪ್ರೋಮೋದಲ್ಲಿ ಕಿಚ್ಚ ಸುದೀಪ್ ಅವರೇ ಯಾರ್ ಯಾರು ನಮ್ಮ ಬಿಗ್‌ ಬಾಸ್ ಸ್ವರ್ಗಕ್ಕೆ ಸೇರುತ್ತಾರೆ ಅನ್ನೋ ಕುತೂಹಲದ ಪ್ರಶ್ನೆ ವೀಕ್ಷಕರ ಮುಂದಿಟ್ಟಿದ್ದಾರೆ.

Advertisment

publive-image

ಇದನ್ನೂ ಓದಿ: ಇಂದಿನಿಂದ ಬಿಗ್​ಬಾಸ್ ಶೋ – ದೊಡ್ಮನೆಗೆ ಹೋಗುವ 16 ಸ್ಪರ್ಧಿಗಳ ಪಕ್ಕಾ ಲಿಸ್ಟ್..! 

ಈ ಬಾರಿಯ ಸೀಸನ್‌ನಲ್ಲಿ ಯಾರ್ ಯಾರು ನರಕದ ಮನೆ ಸೇರುತ್ತಾರೆ ಅನ್ನೋದೇ ಬಹುಮುಖ್ಯವಾಗಿದೆ. ನರಕಕ್ಕೆ ಹೋಗೋರಿಗೆ ಕಿಚ್ಚ ಸುದೀಪ್ ಅವರು ಮೊದಲೇ ಆಲ್‌ ದಿ ಬೆಸ್ಟ್ ಹೇಳಿದ್ದಾರೆ. ಒಟ್ಟಾರೆ ಬಿಗ್ ಬಾಸ್ ಸೀಸನ್ 11 ಸಾಮಾನ್ಯವಲ್ಲ. ಈ ಬಾರಿ ಬೆಂಕಿ, ಬಿರುಗಾಳಿಯ ಮನರಂಜನೆ ನೋಡುಗರಿಗೆ ಕಾದಿದೆ.

publive-image

17 ಸ್ಪರ್ಧಿಗಳು ಲಿಸ್ಟ್ ಇಲ್ಲಿದೆ!

ಯಮುನಾ ಶ್ರೀನಿಧಿ
ಭವ್ಯಾ ಗೌಡ
ಧರ್ಮ ಕೀರ್ತಿ ರಾಜ್
ತುಕಾಲಿ ಮಾನಸ
ಶಿಶಿರ್ ಶಾಸ್ತ್ರಿ
ಗೌತಮಿ ಜಾಧವ್
ಲಾಯರ್ ಜಗದೀಶ್
ಗೋಲ್ಡ್ ಸುರೇಶ್
ಚೈತ್ರಾ ಕುಂದಾಪುರ
ಮೋಕ್ಷಿತಾ ಪೈ
ಉಗ್ರಂ ಮಂಜು
ಐಶ್ವರ್ಯ ಶಿಂದೋಗಿ
ಧನರಾಜ್
ಹಂಸ ನಾರಾಯಣಸ್ವಾಮಿ
ಅನುಷಾ ರೈ
ತ್ರಿವಿಕ್ರಮ್
ರಂಜಿತ್ ಗೌಡ

Advertisment

publive-image

ನ್ಯೂಸ್‌ ಫಸ್ಟ್‌ಗೆ ಸಿಕ್ಕಿರೋ ಸದ್ಯದ ಮಾಹಿತಿ ಪ್ರಕಾರ 17 ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಕಾಲಿಡಲು ಸಜ್ಜಾಗಿದ್ದಾರೆ. ಇಂದು ಸಂಜೆ 6 ಗಂಟೆಗೆ ಗ್ರ್ಯಾಂಡ್ ಓಪನಿಂಗ್ ನಡೆಯಲಿದ್ದು, ಯಾರು ಸ್ವರ್ಗಕ್ಕೆ ಯಾರು ನರಕಕ್ಕೆ ಅನ್ನೋದು ಕುತೂಹಲ ಕೆರಳಿಸಿದೆ. ಬಿಗ್‌ಬಾಸ್ ಸೀಸನ್ 11ರ ಎಲ್ಲಾ ಅಪ್ಡೇಟ್‌ಗಳಿಗಾಗಿ ನ್ಯೂಸ್‌ ಫಸ್ಟ್ ಅನ್ನು ಮಿಸ್ ಮಾಡ್ದೇ ನೋಡುತ್ತಾ ಇರಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment