ಇದು ವಿಶ್ವದ ಅತಿದೊಡ್ಡ ಫ್ರೀ ಕಿಚನ್​.. ನಿತ್ಯ 50 ಸಾವಿರ ಜನರಿಗೆ ಇಲ್ಲಿ ಬಿಸಿ ಬಿಸಿ ಊಟ ಉಚಿತವಾಗಿ ಸಿಗುತ್ತೆ!

author-image
Gopal Kulkarni
Updated On
ಇದು ವಿಶ್ವದ ಅತಿದೊಡ್ಡ ಫ್ರೀ ಕಿಚನ್​.. ನಿತ್ಯ 50 ಸಾವಿರ ಜನರಿಗೆ ಇಲ್ಲಿ ಬಿಸಿ ಬಿಸಿ ಊಟ ಉಚಿತವಾಗಿ ಸಿಗುತ್ತೆ!
Advertisment
  • ಇದು ವಿಶ್ವದ ಅತಿದೊಡ್ಡ ಫ್ರಿ ಕಿಚನ್ ಎಂದು ಪ್ರಸಿದ್ಧಿ ಪಡೆದ ಪುಣ್ಯಸ್ಥಳ
  • ಈ ದೇಗುಲದಲ್ಲಿ ನಿತ್ಯ 50 ಸಾವಿರ ಜನ ಭಕ್ತಾದಿಗಳಿಗೆ ಪ್ರಸಾದ ವಿತರಣೆ
  • ದಿನದ 24 ಗಂಟೆಯಲ್ಲಿ ಯಾವುದೇ ಸಮಯದಲ್ಲಿ ಹೋದರು ಊಟ ಲಭ್ಯ

ದೇಹಿ ಎಂದು ಬಂದವರಿಗೆ ಈ ದೇಶ ಎಂದಿಗೂ ಬೆನ್ನು ತೋರಿಸಿಲ್ಲ. ಅದರಲ್ಲೂ ಅನ್ನದಾನ ಎನ್ನುವುದು ಈ ದೇಶದ ಪರಂಪರೆಯ ಬೇರಿನೊಂದಿಗೆ ಬಂದಿದೆ. ಅನ್ನದಾನದಂತಹ ಪುಣ್ಯದಾನ ಇನ್ನೊಂದಿಲ್ಲ ಎಂಬ ನಂಬಿಕೆ ಸಹಸ್ರಾರು ವರ್ಷಗಳಿಂದ ಚಾಲ್ತಿಯಲ್ಲಿದೆ. ಹೀಗಾಗಿ ಹಸಿದು ಮನೆಯ ಬಾಗಿಲಿಗೆ ನಿಂತು ಭಿಕ್ಷಾಂದೇಹಿ ಎಂದವರಿಗೆ ಹಿಡಿ ಅನ್ನವೋ, ಇಲ್ಲ ಹಿಡಿ ಅಕ್ಕಿಯೋ ದೊರಕಿಯೇ ದೊರಕುತ್ತದೆ. ಆದರೆ ಬೇಡುವ ನಾಲಿಗೆಯಲ್ಲಿ ನಿಯತ್ತಿರಬೇಕು, ಆಗ ಕೊಡುವ ಕೈಗಳಿಗೆ ಎಂದೂ ಕೊರತೆಯಿಲ್ಲ ಎಂದು ಗಾದೆಯೇ ಇದೆ. ಇದೇ ಅನ್ನದಾನದ ವಿಚಾರವಾಗಿ ಭಾರತದಲ್ಲಿ ಅತಿದೊಡ್ಡ ಫ್ರಿ ಕಿಚನ್ ಎಂದು ಖ್ಯಾತಿ ಪಡೆದ ದೇವಸ್ಥಾನವೊಂದಿದೆ. ಇಲ್ಲಿ ನಿತ್ಯ ಸಾವಿರಾರು ಜನರು ಬಂದು ಜಾತಿ,ಧರ್ಮ ಬೇಧ ಭಾವಗಳಿಲ್ಲದೇ ಎಲ್ಲರಿಗೂ ಉಚಿತವಾಗಿ ಬಿಸಿ ಬಿಸಿ ಊಟವನ್ನು ನೀಡಲಾಗುತ್ತದೆ.

publive-image

ನೀವು ಅಮೃತ್​ಸರ್​ನ ಗೋಲ್ಡನ್ ಟೆಂಪಲ್​ ಬಗ್ಗೆ ಕೇಳಿಯೇ ಇರುತ್ತೀರಿ. ಇದು ಕೇವಲ ಧಾರ್ಮಿಕ ಹಾಗೂ ಶ್ರದ್ಧಾ ಕೇಂದ್ರವಾಗಿ ಉಳಿದುಕೊಂಡಿಲ್ಲ. ಇಲ್ಲಿ ಇರುವ ಲಂಗರ್ ಜಗತ್ತಿನ ಅತಿದೊಡ್ಡ ಸಮುದಾಯದ ಫ್ರಿ ಕಿಚನ್ ಎಂದೇ ಖ್ಯಾತಿ ಗಳಿಸಿಕೊಂಡಿದೆ. ಇಲ್ಲಿ ನಿತ್ಯ ಕಡಿಮೆ ಅಂದರೂ 50 ಸಾವಿರ ಜನರಿಂದ 1 ಲಕ್ಷದವರೆಗೆ ಭಕ್ತಾದಿಗಳು ಬಿಸಿ ಬಿಸಿ ಊಟವನ್ನು ಸೇವಿಸಿ ಅನ್ನದಾತೋ ಸುಖಿಃಭವ ಎಂದು ಹೃದಯದಿಂದ ಹರಸಿ ಕೈತೊಳೆದುಕೊಂಡು ಹೋಗುತ್ತಾರೆ.

ಇದನ್ನೂ ಓದಿ:ಭಾರತದಲ್ಲಿ ಮೊಟ್ಟ ಮೊದಲು ಸೂರ್ಯೋದಯ ಆಗುವುದು ಯಾವ ಗ್ರಾಮದಲ್ಲಿ? ಇಲ್ಲಿದೆ ವಿಶೇಷ ಮಾಹಿತಿ!

ಇಲ್ಲಿ ಬರುವ ಯಾವ ವ್ಯಕ್ತಿಯನ್ನೂ ಕೂಡ ಅವರ ಜಾತಿ, ಅಂತಸ್ತು, ಧರ್ಮದ ಬಗ್ಗೆ ವಿಚಾರಣೆ ಮಾಡುವುದಿಲ್ಲ. ಬಂದು ಎಲೆಯ ಮುಂದೆ ಕುಳಿತ ಪ್ರತಿ ವ್ಯಕ್ತಿಗೂ ಮನಸ್ಪೂರ್ತಿಯಾಗಿ ಹೊಟ್ಟೆ ತುಂಬಾ ಊಟ ನೀಡುತ್ತಾರೆ. ಈ ಒಂದು ಪರಂಪರೆ ನಡೆದುಕೊಂಡು ಬಂದಿದ್ದು ಸಿಖ್ಖ ಧರ್ಮ ಸಂಸ್ಥಾಪಕ ಗುರು ನಾನಾಕ ಅವರ ವರ್ಷವಾದ 1481ರಿಂದ. ಜಗತ್ತಿನ ಎಲ್ಲ ಗುರುದ್ವಾರಗಳಲ್ಲಿಯೂ ಉಚಿತವಾಗಿ ಊಟ ನೀಡಲಾಗುತ್ತದೆ. ಆದ್ರೆ ಈ ಸ್ವರ್ಣ ಮಂದಿರದ ವಿಶೇಷತೆಯೇ ಬೇರೆ. ಇಲ್ಲಿ ಬರುವ ಭಕ್ತಾದಿಗಳ ಸಂಖ್ಯೆಯೇ ದೊಡ್ಡ ಮಟ್ಟದ್ದು.

publive-image

ದಿನದ 24 ಗಂಟೆಯೂ ಲಂಗರ್​ ತನ್ನ ಕಾರ್ಯವನ್ನು ಜಾರಿಯಲ್ಲಿಟ್ಟಿರುತ್ತದೆ. ಯಾವುದೇ ವ್ಯಕ್ತಿ ಯಾವುದೇ ಸಮಯಕ್ಕೆ ಬಂದು ಹಸಿವು ಅಂದ್ರೆ ಅವನಿಗೆ ಉಚಿತವಾಗಿ ಬಿಸಿ ಬಿಸಿ ಊಟ ದೊರೆಯುತ್ತದೆ. ಈ ಲಂಗರ್​ನಲ್ಲಿ ಸುಮಾರು 300ಕ್ಕೂ ಹೆಚ್ಚು ಜನರು ಭಕ್ತಿಭಾವದಿಂದ ಅನ್ನ ಸಿದ್ಧಪಡಿಸುವ ಕಾರ್ಯದಲ್ಲಿ ತೊಡಗಿರುತ್ತಾರೆ. ಇಲ್ಲಿ ನೀಡುವ ಊಟದಲ್ಲಿ ದಾಲ್, ಸಬ್ಜಿ, ಅನ್ನ, ರೊಟ್ಟಿ ಮತ್ತು ಖೀರು ಇರುತ್ತದೆ. ಈ ದೇವಾಲದಯಲ್ಲಿರುವ ವಿಶಾಲ ಡೈನಿಂಗ್ ಹಾಲ್​ನಲ್ಲಿ ಒಂದೇ ಬಾರಿಗೆ ಒಟ್ಟು 5 ಸಾವಿರ ಜನರು ಊಟಕ್ಕೆ ಕೂರುವ ವ್ಯವಸ್ಥೆಯಿದೆ. ಇನ್ನು ಭೋಜನ ಮಾಡುವ ಎಲ್ಲಾ ಭಕ್ತಾದಿಗಳ ನೆಲೆದ ಮೇಲೆಯೇ ಕುಳಿತು ಊಟ ಮಾಡಬೇಕು. ಇದು ಸಿಖ್​ ಧರ್ಮದ ಸಿದ್ಧಾಂತ.

ಇದನ್ನೂ ಓದಿ:ಇದು ಭಾರತದ ಏಕೈಕ ರೈಲ್ವೆ ನಿಲ್ದಾಣ.. ಇಲ್ಲಿಂದ ನೀವು ದೇಶದ ಪ್ರತಿ ನಗರಗಳಿಗೂ ಪ್ರಯಾಣ ಬೆಳೆಸಬಹುದು

publive-image

ಇನ್ನು ಈ ಲಂಗರ್​ನಲ್ಲಿ ಊಟ ಸಿದ್ಧಪಡಿಸಲು ಹೈಟೆಕ್ ಮಷಿನ್​ಗಳನ್ನು ಅಳವಡಿಸಲಾಗಿದೆ. ಇಲ್ಲಿ ಅಳವಡಿಸಲಾಗಿರುವ ಒಂದು ಮಷಿನ್ ಒಂದು ಗಂಟೆಗೆ ಸುಮಾರು 25 ಸಾವಿರ ರೊಟ್ಟಿಗಳನ್ನು ಸಿದ್ಧಗೊಳಿಸುತ್ತದೆ. ಇಲ್ಲಿ ನಿತ್ಯ 5 ಸಾವಿರ ಕೆಜಿ ಗೋಧಿ, 2ಸಾವಿರ ಕಿಲೋ ಬೇಳೆ, 1400ಕಿಲೋ ಅಕ್ಕಿ 700 ಕೆಜಿಯಷ್ಟು ಹಾಲು ಹಾಗೂ ನಿತ್ಯ ನೂರು ಸಿಲಿಂಡರ್​ಗಳನ್ನು ಪ್ರಸಾದ ತಯಾರಿಕೆಗೆ ಉಪಯೋಗಿಸಲಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment