/newsfirstlive-kannada/media/post_attachments/wp-content/uploads/2025/03/AMIT-SHAH-1.jpg)
ಕೇಂದ್ರ ಗೃಹ ಸಚಿವ ಅಮಿತ್ ಶಾ ರವಿವಾರದಂದು ಬಿಹಾರದ ಮಿಥಿಲಾಂಚಲದಲ್ಲಿ ಬೃಹತ್ ಸೀತಾ ಮಂದಿರ ಕಟ್ಟುವುದಾಗಿ ಘೋಷಿಸಿದ್ದಾರೆ. ಸದ್ಯ ಬಿಹಾರದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಲಿದೆ. ಸದ್ಯ ಭರ್ಜರಿ ಪ್ರಚಾರ ಕಾರ್ಯಗಳು ಜೋರಾಗಿವೆ. ಚುನಾವಣಾ ಪ್ರಚಾರದ ಕಾರ್ಯದಲ್ಲಿ ಭಾಗಿಯಾಗಿ ಮಾತನಾಡಿದ ಅಮಿತ್ ಸಾ, ಆವು ಈ ಹಿಂದೆ ಲೋಕಸಭಾ ಚುನಾವಣೆ ವೇಳೆ ಬಿಹಾರಕ್ಕೆ ಭೇಟಿ ನೀಡಿದ ವಿಷಯನ್ನು ಪ್ರಸ್ತಾಪಿಸಿದರು.
ನಾನು ಈ ಹಿಂದೆ ಬಿಹಾರಕ್ಕೆ ಭೇಟಿ ನೀಡಿದಾಗ ನಾವು ಈಗಾಗಲೇ ರಾಮ ಮಂದಿರವನ್ನು ನಿರ್ಮಾಣ ಮಾಡಿದ್ದೇವೆ. ಸೀತಾದೇವಿಯ ಮಂದಿರ ನಿರ್ಮಿಸುವ ಸಮಯವೂ ಬಂದಾಗಿದೆ. ಇಂತಹ ಮಂದಿರವೊಂದು ಮಹಿಳೆಯ ಶಕ್ತಿಯನ್ನು ಇಡೀ ವಿಶ್ವಕ್ಕೆ ಪರಿಚಯಿಸುತ್ತದೆ ಮತ್ತು ಬದುಕಿನ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ತಿಳಿಸುತ್ತದೆ ಎಂದು ಹೇಳಿದ್ದೆ. ಅದು ಈಗ ನಿಜವಾಗುವ ಕಾಲ ಬಂದಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ತೇಜಸ್ವಿ ಸೂರ್ಯ-ಶಿವಶ್ರೀ ಅದ್ಧೂರಿ ರಿಸೆಪ್ಶನ್; ಯಾರೆಲ್ಲಾ ಭಾಗಿ.. ಫೋಟೋಸ್ ಇಲ್ಲಿವೆ!
ಸದ್ಯ ಬಿಹಾರಕ್ಕೆ ಮಿಥಿಲಾಂಚಲ ನೀಡುತ್ತಿರುವ ಕೊಡಗೆಯನ್ನು ನಾವು ಪರಿಗಣಿಸಬೇಕು. ಮಹಾತ್ಮ ಬುದ್ಧನು ಕೂಡ ಇದೇ ವಿಚಾರವಾಗಿ ಒಂದು ಮಾತು ಹೇಳಿದ್ದಾನೆ. ಎಲ್ಲಿಯರೆಗೂ ವಿದೇಹಾದ ಜನರು ಒಟ್ಟಿಗೆ ಇರುತ್ತಾರೋ ಅಲ್ಲಿಯವರೆಗೂ ಅವರನ್ನು ಯಾರಿಂದಲೂ ಸೋಲಿಸಲು ಸಾಧ್ಯವಿಲ್ಲ ಎಂದು. ಮಿಥಿಲಾಂಚಲ ಅದನ್ನು ಸಾಬೀತು ಮಾಡುತ್ತಿದೆ. ಒಂದು ಬಲಿಷ್ಠ ಪ್ರಜಾಪ್ರಭತ್ವದ ಸಂಕೇತವಾಗಿ ನಿಂತಿದೆ. ಇಡೀ ದೇಶಕ್ಕೆ ಹಲವು ವರ್ಷಳಿಂದ ಒಂದು ಸಂದೇಶವನ್ನು ನೀಡುತ್ತಲೇ ಇದೆ ಎಂದು ಅಮಿತ್ ಶಾ ಹೇಳಿದರು. ಹೀಗಾಗಿ ಸದ್ಯದಲ್ಲಿಯೇ ಬಿಹಾರದಲ್ಲಿ ಒಂದು ದೊಡ್ಡ ಸೀತಾಮಾತೆಯ ಮಂದಿರ ನಿರ್ಮಾಣ ಮಾಡಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ:ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಗೆ ಅನಾರೋಗ್ಯ.. ದೆಹಲಿ ಪ್ರವಾಸ ದಿಢೀರ್ ರದ್ದು
ಸದ್ಯ ಅಮಿತ್ ಶಾ ಈ ಮಾತಿಗೆ ಕಾಂಗ್ರೆಸ್ ನಾಯಕರಿಂದ ವಿರೋಧ ವ್ಯಕ್ತವಾಗಿದೆ. ಚುನಾವಣೆ ಶುರುವಾದ ಕೂಡಲೇ ರಾಜಕೀಯ ಹಿತಾಸಕ್ತಿಗೋಸ್ಕರ ಇಂತಹ ಮಾತುಗಳನ್ನಾಡಲು ಎನ್ಡಿಎ ನಾಯಕರು ಶುರು ಮಾಡುತ್ತಾರೆ. ಚುನಾವಣೆ ಸಮಯದಲ್ಲಿಯೇ ಎನ್ಡಿಎ ಈ ಬಾಬಾಗಳನ್ನು ರಾಜಕೀಯವಾಗಿ ಉಪಯೋಗಿಸಲು ನಿಂತುಬಿಡುತ್ತಾರೆ ಎಂದು ಇತ್ತೀಚೆಗೆ ಗೋಪಾಲಗಂಜ್ಗೆ ಭೇಟಿ ನೀಡಿದ ಭಗೇಶ್ವರ್ ಬಾಬಾ ವಿರುದ್ಧ ಮಾತನಾಡಿದ್ದಾರೆ. ನಮಗೆ ಧಾರ್ಮಿಕ ನಾಯಕರು ಎಲ್ಲಿಗಾದರೂ ಹೋಗಲಿ ಅದಕ್ಕ ತಕರಾರು ಇಲ್ಲ, ಅವರು ಸದಾ ಚುನಾವಣೆ ನಡೆಯುವ ಸ್ಥಳಗಳಿಗೆ ಹೋಗುವ ಕಷ್ಟವನ್ನು ತೆಗೆದುಕೊಳ್ಳುತ್ತಾರೆ ಇದೇ ನನ್ನನ್ನು ಆಶ್ಚರ್ಯಕ್ಕೆ ತಳ್ಳುತ್ತದೆ ಎಂದು ಕಾಂಗ್ರೆಸ್ ನಾಯಕ ತಾರಿಖ್ ಅನ್ವರ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ