/newsfirstlive-kannada/media/post_attachments/wp-content/uploads/2025/07/BIHAR_BJP_LEADER_New.jpg)
ಪಾಟ್ನಾ: ಬಿಹಾರದ ಬಿಜೆಪಿ ನಾಯಕ ಹಾಗೂ ಹೆಸರಾಂತ ಉದ್ಯಮಿ ಗೋಪಾಲ್ ಖೇಮ್ಕಾ ಅವರ ಮೇಲೆ ಅಪರಿಚಿತರು ಗುಂಡಿನ ದಾಳಿ ಮಾಡಿ ಉಸಿರು ನಿಲ್ಲಿಸಿದ್ದಾರೆ. ನಗರದ ಗಾಂಧಿ ಮೈದಾನ ಪೊಲೀಸ್ ಠಾಣೆ ಪ್ರದೇಶದ ಪನಾಚೆ ಹೋಟೆಲ್ ಬಳಿ ಈ ಘಟನೆ ನಡೆದಿದೆ.
ಹೆಸರಾಂತ ಉದ್ಯಮಿ ಗೋಪಾಲ್ ಖೇಮ್ಕಾ ಅವರು ತಮ್ಮ ಮನೆಗೆ ವಾಪಸ್ ಆಗುತ್ತಿದ್ದರು. ಈ ವೇಳೆ ಆರೋಪಿಗಳು ಅವರ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಬುಲೆಟ್ ತಗುಲಿದ್ದರಿಂದ ಗೋಪಾಲ್ ಖೇಮ್ಕಾ ಅವರು ಸ್ಥಳದಲ್ಲೇ ಉಸಿರು ಚೆಲ್ಲಿದ್ದಾರೆ. ಪನಾಚೆ ಹೋಟೆಲ್ ಪಕ್ಕದಲ್ಲಿರುವ ಟ್ವಿನ್ ಟವರ್ ಸೊಸೈಟಿಯಲ್ಲಿ ಗೋಪಾಲ್ ಖೇಮ್ಕಾ ಮನೆ ಇದೆ. ಮನೆಗೆ ಹೋಗಬೇಕಾದರ ಆರೋಪಿಗಳು ಅವರಿಗೆ ಗುಂಡು ಹಾರಿಸಿ ಎಸ್ಕೇಪ್ ಆಗಿದ್ದಾರೆ.
ಇದನ್ನೂ ಓದಿ: ನಟಿ ರನ್ಯಾಗೆ ಬಿಗ್ ಶಾಕ್.. ಕೋಟಿ ಕೋಟಿ ಮೌಲ್ಯದ ಯಾವೆಲ್ಲ ಪ್ರಾಪರ್ಟಿ ED ಜಪ್ತಿ ಮಾಡಿದೆ?
/newsfirstlive-kannada/media/post_attachments/wp-content/uploads/2025/07/BIHAR_BJP_LEADER.jpg)
ಮಾಹಿತಿ ತಿಳಿದು ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಗೋಪಾಲ್ ಖೇಮ್ಕಾ ಅವರಿಗೆ ತಗುಲಿದ್ದ ಬುಲೆಟ್​ ಹಾಗೂ ಶೆಲ್ ಕವರ್​ ಅನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಜುಲೈ 4ರ ರಾತ್ರಿ 11 ಗಂಟೆ ಸುಮಾರಿಗೆ ನಮಗೆ ಮಾಹಿತಿ ಬಂತು. ಕೂಡಲೇ ಘಟನಾ ಸ್ಥಳಕ್ಕೆ ತೆರಳಿ ಇಡೀ ಏರಿಯಾವನ್ನ ಸುತ್ತುವರೆಯಲಾಗಿದೆ. ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ಮಾಡಲಾಗುತ್ತಿದೆ. ತನಿಖೆ ಮುಂದುವರೆದಿದೆ. ಆರೋಪಿಗಳು ಯಾರು ಎಂದು ಸದ್ಯದಲ್ಲೇ ಪತ್ತೆ ಹಚ್ಚಲಾಗುವುದು ಎಂದು ನಗರದ ಎಸ್​ಪಿ ದಿಕ್ಷಾ ಅವರು ಹೇಳಿದ್ದಾರೆ.
ಗೋಪಾಲ್​ ಖೇಮ್ಕಾ ಕುಟುಂಬದ ಮೇಲೆ ಈ ರೀತಿ ಗುಂಡಿನ ದಾಳಿ ಮಾಡಿರುವುದು ಇದೇ ಮೊದಲಲ್ಲ. ಈ ಹಿಂದೆ ಅಂದರೆ 2018 ಡಿಸೆಂಬರ್ 20 ರಂದು ಗೋಪಾಲ್ ಖೇಮ್ಕಾ ಅವರ ಮಗ ಗುಂಜನ್ ಖೇಮ್ಕಾ ಮೇಲೆ ಹಾಜಿಪುರ ಕೈಗಾರಿಕಾ ಪ್ರದೇಶದಲ್ಲಿ ಗುಂಡಿ ದಾಳಿ ಮಾಡಿ ಜೀವ ತೆಗೆಯಲಾಗಿತ್ತು. ಬರೋಬ್ಬರಿ 7 ವರ್ಷಗಳ ಬಳಿಕ ಈಗ ತಂದೆಯ ಉಸಿರು ಕೂಡ ನಿಲ್ಲಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us