/newsfirstlive-kannada/media/post_attachments/wp-content/uploads/2023/10/BIHAR_CM_NITISH_KUMAR.jpg)
ಪಾಟ್ನಾ: ಸಿಎಂ ನಿತೀಶ್​ ಕುಮಾರ್ ನೇತೃತ್ವದ ಸರ್ಕಾರ ಜಾತಿಗಣತಿ ಬಿಡುಗಡೆ ಮಾಡಿದ್ದು, ಭಾರೀ ವಿವಾದಕ್ಕೆ ತಿರುಗಿದೆ. ಬಿಹಾರದ ಮುಖ್ಯ ಕಾರ್ಯದರ್ಶಿ ಬಿಡುಗಡೆ ಮಾಡಿರುವ ಜಾತಿ ಆಧಾರಿತ ಸಮೀಕ್ಷೆಯ ಫಲಿತಾಂಶದಲ್ಲಿ ರಾಜ್ಯದ ಜನಸಂಖ್ಯೆಯ ಶೇ.63 ರಷ್ಟು ಇತರೆ ಹಿಂದುಳಿದ (OBC) ಜಾತಿಗಳನ್ನು ಹೊಂದಿದೆ ಎಂದು ಉಲ್ಲೆಖಿಸಲಾಗಿದೆ. ​
ಸಿಎಂ ನಿತೀಶ್ ಕುಮಾರ್ ಆಡಳಿತದಲ್ಲಿ ನಡೆಸಲಾದ ಈ ಸಮೀಕ್ಷೆಯು ಸದ್ಯ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ಈ ಸಮೀಕ್ಷೆಯನ್ನು ‘ಬಿಹಾರ ಜಾತಿ ಆಧಾರಿತ ಗಣನಾ’ ಎನ್ನುವ ಹೆಸರಿನಲ್ಲಿ ಗಣತಿ ಮಾಡಲಾಗಿತ್ತು. ಈ ಗಣತಿಯ ಮಾಹಿತಿಯಂತೆ ಬಿಹಾರದಲ್ಲಿ ಒಟ್ಟು 13 ಕೋಟಿಗೂ ಹೆಚ್ಚು ಜನಸಂಖ್ಯೆ ಇದೆ. ಇದರಲ್ಲಿ ಹಿಂದುಳಿದ ವರ್ಗ ಶೇ.27 ರಷ್ಟು ಇದ್ದಾರೆ. ಅತ್ಯಂತ ಹಿಂದುಳಿದ ವರ್ಗ 36 ಪ್ರತಿ ಶತದಷ್ಟಿದೆ. ಈ ಎರಡು ವರ್ಗದವರು ರಾಜ್ಯದಲ್ಲಿ ಒಟ್ಟು ಶೇ.63 ರಷ್ಟು ಜನಸಂಖ್ಯೆ ಇದ್ದಾರೆ ಎಂದು ವರದಿ ಹೇಳುತ್ತಿದೆ.
ಜಾತಿ ಸಮೀಕ್ಷೆಯಲ್ಲಿ ಯಾವ ಜಾತಿ ಎಷ್ಟು ಸಂಖ್ಯೆಯಲ್ಲಿದೆ..?
- ಬಿಹಾರದ ಒಟ್ಟು 13,07,25,310 ಜನಸಂಖ್ಯೆ
- ಹಿಂದುಳಿದ ಮತ್ತು ಅತಿ ಹಿಂದುಳಿದ ಸಮಯದಾಯ ಶೇಕಡಾ 63
- ಹಿಂದುಳಿದ ವರ್ಗ ಶೇಕಡಾ 27.12, ಅತಿ ಹಿಂದುಳಿದ ಶೇಕಡಾ 36.01
- ಪರಿಶಿಷ್ಟ ಜಾತಿ ಶೇಕಡಾ 19.65, ಪರಿಶಿಷ್ಟ ಪಂಗಡ ಶೇಕಡಾ 1.68
- ಮೀಸಲಾತಿಯಿಂದ ಹೊರಗಿರುವ ಜನಸಂಖ್ಯೆ ಶೇಕಡಾ 15.52
- ಭೂಮಿಹಾರ್​ಗಳು ಶೇಕಡಾ 2.86 ಜನಸಂಖ್ಯೆ ಇದ್ದಾರೆ.
- ಬ್ರಾಹ್ಮಣರು ಶೇಕಡಾ 3.66 ರಷ್ಟು, ಕುರ್ಮಿಸ್ 2.87, ಮುಸಾಹರ್ಸ್​ ಶೇ.3 ರಷ್ಟಿದ್ದಾರೆ.
- ಶೇಕಡಾ 81.99 ರಷ್ಟು ಹಿಂದೂ ಧರ್ಮದವರು
- ಭೂಮಿಹಾರ ಸಮುದಾಯ ಶೇಕಡಾ 2.86 ರಷ್ಟು ಜನಸಂಖ್ಯೆ
- ಕುರ್ಮಿ ಸಮುದಾಯ ಶೇ.2.77 ರಷ್ಟು ವಾಸವಿದ್ದಾರೆ
- ಶೇ.17.7 ರಷ್ಟು ಮುಸ್ಲಿಂ ಸಮುದಾಯದ ಜನಸಂಖ್ಯೆ ಇದೆ
- ಯಾದವ್ ಸಮುದಾಯದ ಜನಸಂಖ್ಯೆ ಶೇ.14 ರಷ್ಟಿದೆ
- ರಜಪೂತ್ ಶೇಕಡಾ 3.45 ರಷ್ಟಿದ್ದಾರೆ
[caption id="attachment_21734" align="alignnone" width="800"]
CM ನಿತೀಶ್ ಕುಮಾರ್[/caption]
ಸಿಎಂ ನಿತೀಶ್​ ಕುಮಾರ್ ನೇತೃತ್ವದ ಸರ್ಕಾರ ಜಾತಿಗಣತಿಯನ್ನು ಇದೇ ವರ್ಷ ಜನವರಿಯಿಂದ ಆರಂಭಿಸಿತ್ತು. ರಾಜ್ಯದ್ಯಾಂತ ಗಣತಿ ಮಾಡಲು ಸರ್ಕಾರ ಒಟ್ಟು 500 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us