ಮರು ಪರೀಕ್ಷೆಗಾಗಿ ಬೃಹತ್ ಹೋರಾಟ.. ಅಭ್ಯರ್ಥಿಗಳು ಮೇಲೆ ಸರ್ಕಾರ ದರ್ಪ, ಲಾಠಿ ಚಾರ್ಜ್, ಪರಿಸ್ಥಿತಿ ಉದ್ವಿಗ್ನ​​

author-image
Bheemappa
Updated On
ಮರು ಪರೀಕ್ಷೆಗಾಗಿ ಬೃಹತ್ ಹೋರಾಟ.. ಅಭ್ಯರ್ಥಿಗಳು ಮೇಲೆ ಸರ್ಕಾರ ದರ್ಪ, ಲಾಠಿ ಚಾರ್ಜ್, ಪರಿಸ್ಥಿತಿ ಉದ್ವಿಗ್ನ​​
Advertisment
  • ಸಾವಿರಾರು ವಿದ್ಯಾರ್ಥಿಗಳಿಂದ ಬೃಹತ್ ಹೋರಾಟ, ಲಾಠಿ ಏಟು
  • ಬಿಪಿಎಸ್​ಸಿ ಅಭ್ಯರ್ಥಿಗಳಿಗೆ ಸಿಪಿಐ ಕೂಡ ಬೆಂಬಲ ಘೋಷಣೆ
  • ರಾಜಧಾನಿ ಸೇರಿ ಹಲವು ಪ್ರದೇಶಗಳಲ್ಲಿ ಪೊಲೀಸರು ಹೈ ಅಲರ್ಟ್

ಬಿಹಾರದಲ್ಲಿ ಬಿಪಿಎಸ್​ಸಿ (Bihar Public Service Commission) ಪರೀಕ್ಷಾ ಅಭ್ಯರ್ಥಿಗಳು ಮತ್ತು ಸರ್ಕಾರದ ನಡುವಿನ ಜಟಾಪಟಿ ಹಿಂಸಾತ್ಮಕ ರೂಪ ಪಡೆದಿದೆ. ಸಿಎಂ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ ಅಭ್ಯರ್ಥಿಗಳಿಗೆ ಪೊಲೀಸರು ಲಾಠಿ ಏಟಿನ ರುಚಿ ತೋರಿಸಿದ್ದಾರೆ. ಇಂದು ಬಿಹಾರ ಬಂದ್​ಗೆ ಕರೆ ನೀಡಿರುವ ಹೋರಾಟಗಾರರು ಪೊಲೀಸರ ಟೆನ್ಶನ್​ ಹೆಚ್ಚಿಸಿದ್ದಾರೆ.

ಹೋರಾಟ, ಲಾಠಿಚಾರ್ಜ್, ​ಜಲಪಿರಂಗಿ ಪ್ರಯೋಗ, ಆಕ್ರೋಶ. ಇದು ಬಿಹಾರ ಪಾಟ್ನಾದ ದೃಶ್ಯಗಳು. ಬಿಹಾರದ 70ನೇ ಸಂಯೋಜಿತ ಸ್ಪರ್ಧಾತ್ಮಕ ಪರೀಕ್ಷೆ ಮರುಪರೀಕ್ಷೆಗೆ ಒತ್ತಾಯಿಸಿ ಪರೀಕ್ಷಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದುಕೊಂಡಿದೆ.

publive-image

ಬಿಪಿಎಸ್​ಸಿ ಮರುಪರೀಕ್ಷೆ ಪಟ್ಟು.. ಅಭ್ಯರ್ಥಿಗಳಿಗೆ ಲಾಠಿ ಪೆಟ್ಟು!

ಕಳೆದ ಕೆಲ ದಿನಗಳಿಂದ ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಬಿಪಿಎಸ್​ಸಿ ಅಭ್ಯರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದರು. ಬಿಹಾರ ಸಿಎಂ ನಿತೀಶ್‌ ಕುಮಾರ್‌ ಅವರೊಂದಿಗೆ ಮಾತುಕತೆಗಾಗಿ ಅವರ ನಿವಾಸಕ್ಕೆ ತೆರಳಲು ಗಾಂಧಿ ಮೈದಾನದಲ್ಲಿ ಜಮಾಯಿಸಿದ್ದರು. ನಿತೀಶ್‌ ಕುಮಾರ್‌ ಭೇಟಿ ಸಾಧ್ಯವಿಲ್ಲ ಎಂದಿದ್ದಕ್ಕೆ, ವಿದ್ಯಾರ್ಥಿಗಳು ಅವರ ಮನೆ ಮುತ್ತಿಗೆಗೆ ಮುಂದಾದರು. ಈ ವೇಳೆ ಬ್ಯಾರಿಕೇಡ್‌ಗಳನ್ನಿಟ್ಟು ವಿದ್ಯಾರ್ಥಿಗಳನ್ನ ತಡೆಯಲು ಪೊಲೀಸರು ಮುಂದಾದ್ರೂ ವಿದ್ಯಾರ್ಥಿಗಳ ಆಕ್ರೋಶಕ್ಕೆ ಬ್ಯಾರಿಕೇಡ್​ಗಳು​ ಚೆಲ್ಲಾಪಿಲ್ಲಿಯಾಗಿತ್ತು.

ಸಿಎಂ ನಿವಾಸಕ್ಕೆ ಎಂಟ್ರಿಕೊಡಲು ಯತ್ನಿಸಿದವರಿಗೆ ಲಾಠಿ ಏಟು

ಪೊಲೀಸರು ಎಷ್ಟೇ ಮನವಿ ಮಾಡಿದರು ವಿದ್ಯಾರ್ಥಿಗಳು ಬ್ಯಾರಿಕೇಡ್‌ ಕಿತ್ತೆಸೆದು ನಿತೀಶ್‌ ಕುಮಾರ್‌ ನಿವಾಸಕ್ಕೆ ನುಗ್ಗಲು ಮುಂದಾಗಿದ್ದರು. ಹೀಗಾಗಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಬಲಪ್ರಯೋಗ ಮಾಡಿದರು. ಮೊದಲಿಗೆ ಜಲಫಿರಂಗಿ ಬಳಸಿ ಪ್ರತಿಭಟನಾಕಾರರನ್ನು ಚದುರಿಸಲು ಯತ್ನಿಸಿದ್ದಾರೆ.

ಜಲಫಿರಂಗಿಯನ್ನು ಲೆಕ್ಕಿಸದೇ ಪ್ರತಿಭಟನೆಗೆ ಮುಂದಾದಾಗ ಪೊಲೀಸರು ಲಾಠಿ ಚಾರ್ಜ್‌ ಮಾಡಿದ್ದಾರೆ. ರಸ್ತೆ ಮೇಲೆ ಬಿದ್ದರೂ ಬಿಡದೆ ಮನೋ ಇಚ್ಛೆ ಪ್ರತಿಭಟನಾಕಾರರನ್ನು ಲಾಠಿಯಿಂದ ಥಳಿಸಿದ್ದಾರೆ. ಪೊಲೀಸರ ಲಾಠಿ ಚಾರ್ಜ್‌ನಿಂದ ಹಲವು ಅಭ್ಯರ್ಥಿಗಳು ಗಾಯಗೊಂಡು ಆಸ್ಪತ್ರೆಗೆ ದಾಖಲಾದರು.

ಇದನ್ನೂ ಓದಿ:600ಕ್ಕೂ ಅಧಿಕ ಉದ್ಯೋಗ.. 10th, ITI, PUC ಅಭ್ಯರ್ಥಿಗಳಿಗೆ ಸರ್ಕಾರಿ ಕೆಲಸ

publive-image

ಇಂದು ಬಿಹಾರ ಬಂದ್‌ಗೆ ಕರೆ.. ಪಾಟ್ನಾದಲ್ಲಿ ಹೈಅಲರ್ಟ್!

ಬಿಪಿಎಸ್​ಸಿ ಮರುಪರೀಕ್ಷೆ ಆಗ್ರಹಿಸಿ, ಮತ್ತು ಲಾಠಿ ಚಾರ್ಜ್​ ಖಂಡಿಸಿ ಇಂದು ಅಭ್ಯರ್ಥಿಗಳು ಬಿಹಾರ ಬಂದ್​ಗೆ ಕರೆನೀಡಿದ್ದಾರೆ. ಬಿಪಿಎಸ್​ಸಿ ಅಭ್ಯರ್ಥಿಗಳಿಗೆ ಸಿಪಿಐ ಕೂಡ ಬೆಂಬಲ ಘೋಷಿಸಿದೆ. ಇಂದಿನ ಬಂದ್​ ಹಿನ್ನೆಲೆ ಪಾಟ್ನಾ ಸೇರಿ ಹಲವೆಡೆ ಪೊಲೀಸರು ಅಲರ್ಟ್ ಆಗಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.

ಇಷ್ಟು ದಿನ ಶಾಂತಿಯುತವಾಗಿ ನಡೆಯುತ್ತಿದ್ದ BPSC ಮರುಪರೀಕ್ಷೆ ಹೋರಾಟ ಸದ್ಯ ಹಿಂಸಾತ್ಮಕ ರೂಪ ಪಡೆದುಕೊಂಡಿದೆ. ಪ್ರತಿಭಟನಾ ನಿರತರ ಆಗ್ರಹಕ್ಕೆ ಮಣಿದು ಸಿಎಂ ನಿತೀಶ್​ ಕುಮಾರ್​ ಬಿಪಿಎಸ್​ಸಿ ಮರುಪರೀಕ್ಷೆಗೆ ಹುಕುಂ ನೀಡ್ತಾರಾ ಅಥವಾ ವಿದ್ಯಾರ್ಥಿಗಳಿಗೆ ಸೆಡ್ಡು ಹೊಡೆದು ಮತ್ತಷ್ಟು ಕಿಚ್ಚಿಗೆ ಕಾರಣವಾಗ್ತಾರಾ ಅನ್ನೋದೆ ಮಿಲಿಯನ್​ ಡಾಲರ್​ ಪ್ರಶ್ನೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment