/newsfirstlive-kannada/media/post_attachments/wp-content/uploads/2025/04/Vaibhav_Suryavanshi_100.jpg)
2025ರ ಐಪಿಎಲ್ ಟೂರ್ನಿಯಲ್ಲಿ ಈಗ ಎಲ್ಲಿ ನೋಡಿದರೂ ವೈಭವ್ ಸೂರ್ಯವಂಶಿ ಬಗ್ಗೆ ಮಾತುಗಳೇ ಕೇಳಿ ಬರುತ್ತಿವೆ. ಕಾರಣ ಕೇವಲ 14 ವರ್ಷಕ್ಕೆ 35 ಎಸೆತಕ್ಕೆ ಸಿಡಿಲಬ್ಬರದ ಸೆಂಚುರಿ ಬಾರಿಸಿದ್ದಾರೆ. ಇದರ ಬೆನ್ನಲ್ಲೇ ಉತ್ತರದ ರಾಜ್ಯವೊಂದರ ಮುಖ್ಯಮಂತ್ರಿ, ಈ ಯುವ ಆಟಗಾರನಿಗೆ 10 ಲಕ್ಷ ರೂಪಾಯಿಗಳನ್ನು ಘೋಷಣೆ ಮಾಡಿದ್ದಾರೆ.
ವೈಭವ್ ಸೂರ್ಯವಂಶಿ ಕ್ರಿಕೆಟ್ ಲೋಕದಲ್ಲಿ ಸಂಚಲನ ಸೃಷ್ಟಿಸಿದ ಅತ್ಯಂತ ಕಿರಿಯ ಆಟಗಾರ. ರಾಜಸ್ಥಾನ್ ರಾಯಲ್ಸ್ ತಂಡದ ಯುವ ಆಟಗಾರನಾಗಿರುವ ಸೆನ್ಸೇಷನಲ್ ಸ್ಟಾರ್ ಗುಜರಾತ್ ಟೈಟನ್ಸ್ ವಿರುದ್ಧ ಅಬ್ಬರಿಸಿದ್ದರು. ರಾಜಸ್ಥಾನ್ ಪರವಾಗಿ ಭರ್ಜರಿ ಬ್ಯಾಟಿಂಗ್ ಮಾಡಿದ್ದ ಸೂರ್ಯವಂಶಿ 265.79 ಸ್ಟ್ರೈಕ್ ರೇಟ್ನಲ್ಲಿ ರನ್ಸ್ ಚಚ್ಚಿದ್ದರು. 11 ಸಿಕ್ಸರ್, 7 ಬೌಂಡರಿಗಳಿಂದ ಕೇವಲ 35 ಎಸೆತದಲ್ಲಿ ಶತಕ ಬಾರಿಸೋ ಮೂಲಕ ಐಪಿಎಲ್ನಲ್ಲಿ ಐತಿಹಾಸಿಕ ದಾಖಲೆಗೆ ಕಾರಣರಾದರು.
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸ್ಫೋಟಕ ಶತಕ ಸಿಡಿಸಿದ 14 ವರ್ಷದ ವೈಭವ್ ಸೂರ್ಯವಂಶಿಗೆ ಬಿಹಾರ ರಾಜ್ಯ ಸರ್ಕಾರ ಬಂಪರ್ ಬಹುಮಾನ ಘೋಷಿಸಿದೆ. ವೈಭವ್ ಸೂರ್ಯವಂಶಿಯನ್ನ ಅಭಿನಂದಿಸಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು 10 ಲಕ್ಷ ರೂಪಾಯಿಗಳ ಬಹುಮಾನ ಘೋಷಣೆ ಮಾಡಿದ್ದಾರೆ. ಈ ವಿಚಾರವನ್ನು ಬಿಹಾರ ಸಿಎಂ ನಿತೀಶ್ ಕುಮಾರ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: 11 ಸಿಕ್ಸರ್ಗಳು.. ಅತಿ ವೇಗದ ಸೆಂಚುರಿ ಬಾರಿಸಿದ 14 ವರ್ಷದ ಬ್ಯಾಟರ್ ವೈಭವ್ ಸೂರ್ಯವಂಶಿ
2025ರ ಐಪಿಎಲ್ ಹರಾಜಿನಲ್ಲಿ ವೈಭವ್ಗಾಗಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ಪೈಪೋಟಿ ನಡೆಸಿದ್ದವು. ಆಗ ವೈಭವ್ಗೆ ಕೇವಲ 13 ವರ್ಷ ತುಂಬಿತ್ತು. ಈ 13 ವರ್ಷದ ಪೋರನ ಬೇಸ್ ಪ್ರೈಸ್ 30 ಲಕ್ಷ ಆಗಿತ್ತು. ಈ ಪೋರನಿಗಾಗಿ 2 ಫ್ರಾಂಚೈಸಿಗಳು ಜಿದ್ದಿಗೆ ಬಿದ್ದಿದ್ದವು. ಎಷ್ಟೇ ಖರ್ಚು ಆದರೂ ಸರಿ, ಆ ಬಾಲಕ ನಮಗೇ ಬೇಕು ಅಂತಾ ರಾಜಸ್ಥಾನ್ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಪಟ್ಟು ಹಿಡಿದಿದ್ದರು. ಹೀಗೆ ಬಿಡ್ ನಡೆಯುತ್ತಿದ್ದ ವೇಳೆ ದೆಹಲಿ ಫ್ರಾಂಚೈಸಿ ಕೊನೆಯದಾಗಿ 1 ಕೋಟಿ ರೂಪಾಯಿಗೆ ಹರಾಜು ಕರೆದಿತ್ತು. ಆದ್ರೆ ಕೊನೆಗೆ ರಾಜಸ್ಥಾನ್ 1.10 ಕೋಟಿ ನೀಡಿ ವೈಭನ ಖರೀದಿ ಮಾಡಿಯೇ ಬಿಟ್ಟಿತು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ