ನಾಗರ ಪಂಚಮಿ ವಿಶೇಷ.. ಈ ಪ್ರದೇಶದಲ್ಲಿ ಜೀವಂತ ನಾಗರ ಹಾವುಗಳನ್ನು ಹಿಡಿದು ಏನ್ ಮಾಡ್ತಾರೆ ಗೊತ್ತಾ?

author-image
Bheemappa
Updated On
ನಾಗರ ಪಂಚಮಿ ವಿಶೇಷ.. ಈ ಪ್ರದೇಶದಲ್ಲಿ ಜೀವಂತ ನಾಗರ ಹಾವುಗಳನ್ನು ಹಿಡಿದು ಏನ್ ಮಾಡ್ತಾರೆ ಗೊತ್ತಾ?
Advertisment
  • ಇಲ್ಲಿನ ಜನರಿಗೆ ನಾಗರಹಾವು ಕಚ್ಚಿದರೂ ಏನು ಆಗಲ್ವಂತೆ!
  • ಶಿವನಂತೆ ಕುತ್ತಿಗೆಯಲ್ಲಿ ಸುತ್ತಿಕೊಂಡು ಮೆರವಣಿಗೆ ಮಾಡ್ತಾರೆ
  • ಇಲ್ಲಿ ಬೇಡಿಕೊಂಡ್ರೆ ಮಕ್ಕಳು ಆಗದವರಿಗೆ ಮಕ್ಕಳು ಆಗ್ತಾವೆ!

ಹಾವುಗಳನ್ನು ಕಂಡರೇ ನಮಗೆಲ್ಲಾ ಭಯ. ಹಾವು ದೂರದಲ್ಲಿ ಕಂಡರೂ ಸಾಕು, ಓಡಿ ಹೋಗುತ್ತೇವೆ. ಆದರೇ ಬಿಹಾರದಲ್ಲಿ ಜನರು ಹಾವುಗಳನ್ನು ಕಂಡರೇ ಹೆದರಲ್ಲ, ಓಡಿಯೂ ಹೋಗಲ್ಲ. ಹಾವುಗಳನ್ನು ಕೈಯಲ್ಲಿ ಹಿಡಿದುಕೊಂಡು ಕುತ್ತಿಗೆಗೆ ಸುತ್ತಿಕೊಂಡು ದೇವರ ಜಾತ್ರೆಯ ಮೆರವಣಿಗೆ ಹೋಗುತ್ತಾರೆ.

ಬಿಹಾರದಲ್ಲಿ ನಾಗಪಂಚಮಿ ಹಬ್ಬ ನಡೆಯುತ್ತಿದ್ದು ಮಿಥಿಲಿಯಾ ಪ್ರಾಂತ್ಯದಲ್ಲಿ ಹಬ್ಬದ ಪ್ರಯುಕ್ತ ಜನರು ಹಾವುಗಳನ್ನು ಕೈಯಿಂದ ಹಿಡಿದು, ತಲೆ ಮೇಲೆ ಇಟ್ಟುಕೊಂಡು ಮೆರವಣಿಗೆ ಹೋಗುತ್ತಾರೆ. ಬೇಗುಸರಾಯ್, ಸಮಸ್ಟಿಪುರ, ಸಹಸ್ರಾ, ಮುಜಾಫರಪುರ, ಕಾಗಾರಿಯಾ ಜಿಲ್ಲೆಯಲ್ಲಿ ಈ ವಿಶೇಷ ನಾಗ ಪಂಚಮಿ ಹಬ್ಬ ಆಚರಿಸಲಾಗುತ್ತಿದೆ.

publive-image

ಸಮಸ್ಟಿಪುರದ ಸಿಂಘಿಯಾ ಘಾಟ್​​ನಲ್ಲಿ ನೂರಾರು ಮಂದಿ ಭಕ್ತರು ನಾಗರ ಪಂಚಮಿ ಹಬ್ಬದಲ್ಲಿ ಭಾಗಿಯಾಗಿದ್ದರು. ಧಾರ್ಮಿಕ ಸಂಪ್ರದಾಯದ ಭಾಗವಾಗಿ ಜೀವಂತ ಹಾವುಗಳನ್ನೇ ಹಿಡಿದುಕೊಂಡು ಧಾರ್ಮಿಕ ಆಚರಣೆ ಮಾಡಿದರು. ಸಿಂಘಿಯಾ ಬಜಾರ್​ನಲ್ಲಿರುವ ತಾಯಿ ಭಗವತಿ ದೇವಾಲಯದಿಂದ ವಾರ್ಷಿಕ ಜಾತ್ರೆ ಆರಂಭವಾಗುತ್ತೆ. ಬಳಿಕ ಬುದ್ದಿ ಗಂಡಕ್ ನದಿ ದಡಕ್ಕೆ ಭಕ್ತರು ಹೋಗುತ್ತಾರೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಹಾವುಗಳನ್ನು ಹಿಡಿದುಕೊಂಡು ಮೆರವಣಿಗೆ ಹೋಗುತ್ತಾರೆ. ಜನರ ಕುತ್ತಿಗೆಯ ಸುತ್ತ ಹಾವು ಇರುತ್ತೆ ಇಲ್ಲವೇ ಕೈಯಲ್ಲಿ ಹಾವು ಇರುತ್ತೆ. ಕೆಲವರು ತಲೆಯ ಮೇಲೆ ಹಾವು ಇಟ್ಟುಕೊಂಡರೇ, ಇನ್ನೂ ಕೆಲವರು ಕೈಯ ಮೇಲೆ ಹಾವು ಹಿಡಿದುಕೊಂಡು ಮೆರವಣಿಗೆ ಹೋಗುತ್ತಾರೆ. ಹಾವುಗಳ ಬಗ್ಗೆ ಯಾವುದೇ ಭಯವಿಲ್ಲದೇ ಜನರು, ಮಕ್ಕಳು, ಹುಡುಗರು ಹಾವುಗಳನ್ನು ಹಿಡಿದುಕೊಂಡು ಹಬ್ಬ ಆಚರಣೆ ಮಾಡುತ್ತಾರೆ. ಇದು ಸಾಮಾನ್ಯವಾಗಿ ದೇಶದಲ್ಲೆಡೆ ಕಂಡು ಬರುವ ಹಬ್ಬವಲ್ಲ. ಇದು ಪ್ರತಿ ವರ್ಷ ಬಿಹಾರದ ಮಿಥಿಲಿಯಾ ಪ್ರಾಂತ್ಯದಲ್ಲಿ ಮಾತ್ರ ನಡೆಯುವ ಹಬ್ಬ ಹಾಗೂ ಜಾತ್ರೆ.

ಆಚರಣೆಯ ಭಾಗವಾಗಿ ಭಕ್ತರು, ಮಾತಾ ವಿಷಹಾರಿ ಹೆಸರು ಅನ್ನು ಪಠಿಸುತ್ತಾರೆ. ಮಾತಾ ವಿಷಹಾರಿ ಸ್ಥಳೀಯ ನಾಗ ದೇವತೆ. ಇದಕ್ಕೆ ಪೂಜೆ, ಪ್ರಾರ್ಥನೆಯನ್ನು ಭಕ್ತರು ಸಲ್ಲಿಸುತ್ತಾರೆ. ಹೀಗೆ ಹಾವು ಅನ್ನು ಹಿಡಿದುಕೊಂಡು ಧಾರ್ಮಿಕ ವಿಧಿ ವಿಧಾನ, ಪೂಜೆ ಪ್ರಾರ್ಥನೆ ಸಲ್ಲಿಸಿದ ಬಳಿಕ, ಹಾವುಗಳನ್ನು ಮತ್ತೆ ಹತ್ತಿರದ ಅರಣ್ಯಕ್ಕೆ ಬಿಟ್ಟು ಬಿಡುತ್ತಾರೆ.

ಇದನ್ನೂ ಓದಿ:ಮುಂಬೈ ನಗರದ ಧಾರ್ಮಿಕ ಕಟ್ಟಡಗಳ ಮೇಲಿದ್ದ ಎಲ್ಲ ಧ್ವನಿವರ್ಧಕಗಳು ತೆರವು..!

publive-image

ಮಿಥಿಲಿಯಾ ಪ್ರಾಂತ್ಯದ ಎಲ್ಲೆಡೆಯಿಂದ ಜನರು ಬಂದು ಈ ಹಾವು ಅನ್ನು ಹಿಡಿದುಕೊಂಡು ಮೆರವಣಿಗೆ ಹೋಗುವ ಹಬ್ಬದ ಜಾತ್ರೆಯಲ್ಲಿ ಭಾಗಿಯಾಗುತ್ತಾರೆ. ಈ ಸಂಪ್ರದಾಯ ತಲೆ ತಲೆಮಾರುಗಳಿಂದ ನೂರಾರು ವರ್ಷಗಳಿಂದ ಮುಂದುವರಿದುಕೊಂಡು ಬಂದಿದೆ ಎಂದು ಸ್ಥಳೀಯರು ಹೇಳುತ್ತಾರೆ.

ಈ ಮೆರವಣಿಗೆಯ ಜೊತೆಗೆ ಮಹಿಳೆಯರು ಮಕ್ಕಳಾಗಲೆಂದು ನಾಗ ದೇವತೆಗೆ ಪ್ರಾರ್ಥನೆ ಸಲ್ಲಿಸಿ ಪೂಜೆ ಮಾಡುತ್ತಾರೆ. ಜೊತೆಗೆ ಕುಟುಂಬದ ಆರೋಗ್ಯ, ರಕ್ಷಣೆಗಾಗಿ ಪೂಜೆ ಮಾಡುತ್ತಾರೆ. ತಮ್ಮ ಇಷ್ಟಾರ್ಥ ಈಡೇರಿದ ಬಳಿಕ ಮುಂದಿನ ವರ್ಷದ ನಾಗ ಪಂಚಮಿಗೆ ಬಂದು ಪ್ರಸಾದವನ್ನು ದೇವರಿಗೆ ಅರ್ಪಿಸುತ್ತಾರೆ. ಹಾವುಗಳನ್ನು ಹಿಡಿದುಕೊಂಡು ಮೆರವಣಿಗೆ ನಡೆಸುವಾಗ ಯಾವುದೇ ಹಾವು ಕಚ್ಚಿದ ಘಟನೆ ನಡೆದಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.


">July 17, 2025

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment