/newsfirstlive-kannada/media/post_attachments/wp-content/uploads/2024/10/Bihar-Hooch-Tragedy.jpg)
ಬಿಹಾರದ ಸರನ್ ಹಾಗೂ ಸಿವನ್ ಎಂಬ ಜಿಲ್ಲೆಯಲ್ಲಿ ಕಳ್ಳಬಟ್ಟಿ ಮದ್ಯ ಕುಡಿದು ಮೃತಪಟ್ಟವರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ. ಈ ಬಗ್ಗೆ ತನಿಖೆಯನ್ನು ಆರಂಭಿಸಿದ್ದೇವೆ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ. ಆರಂಭಿಕ ತನಿಖೆಯ ಪ್ರಕಾರ ಆಲ್ಕೋಹಾಲ್​ನಲ್ಲಿ ಮಿಥೈಲ್​ನ್ನು ಮಿಶ್ರಣ ಮಾಡಿದ ಕಾರಣ ಈ ಒಂದು ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ.
ಈ ದುರಂತದ ಕುರಿತಾಗಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಡಿಜಿಪಿ ಅಲೋಕ್ ರಾಜ್ ಮತ್ತು ಅಬಕಾರಿ ಇಲಾಖೆಯೊಂದಿಗೆ ಉನ್ನತ ಮಟ್ಟದ ಸಭೆಯನ್ನು ಕರೆದಿದ್ದಾರೆ. ಸಿಎಂ ನಿತಿಶ್ ಕುಮಾರ್ ಉನ್ನತ ಅಧಿಕಾರಿಗಳಿಗೆ ಕೂಡಲೇ ಸ್ಥಳಕ್ಕೆ ತೆರಳಿ ಪರಿಸ್ಥಿತಿಯನ್ನು ಪರಿಶೀಲಿಸಲು ಹೇಳಿದ್ದಾರೆ. ಅದರ ಜೊತೆಗೆ ಕಳ್ಳಬಟ್ಟಿ ಸರಾಯಿ ಪೂರೈಕೆ ಹಿಂದಿರುವ ಕೈಗಳ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳುವಂತೆ ಡಿಜಿಪಿಗೆ ಖಡಕ್ ಸೂಚನೆಯನ್ನು ನೀಡಿದ್ದಾರೆ.
ಇದನ್ನೂ ಓದಿ:ಷಡ್ಯಂತ್ರ ಮಾಡಿದವರ ಹೆಸರು ಜೈಲಿನ ಗೋಡೆ ಮೇಲೆ ಬರೆದು ಬಂದಿದ್ದೀನಿ.. ಬಿ ನಾಗೇಂದ್ರ ಕಣ್ಣೀರು
ಈ ಒಂದು ದುರಂತದ ಬಗ್ಗೆ ಸಂಪೂರ್ಣವಾಗಿ ತನಿಖೆ ಕೈಗೊಳ್ಳಲು ಎರಡು ವಿಶೇಷ ತಂಡವನ್ನು ರಚಿಸಲಾಗಿದೆ. ಒಂದು ತಂಡ ಈ ದುರಂತಕ್ಕೆ ಕಾರಣವಾದ ಸ್ಥಳೀಯ ಮಟ್ಟದ ಆರೋಪಿಗಳನ್ನು ಕಂಡು ಹಿಡಿಯಲು ನಿಯೋಜನೆ ಮಾಡಲಾಗಿದೆ. ಮತ್ತೊಂದು ತಂಡವನ್ನು ಮದ್ಯಪಾನ ನಿಷೇಧ ಮಾಡಿದ ಇಲಾಖೆಯಲ್ಲಿ ಸದ್ಯ ನಡೆದಿರುವ ಘಟನೆ ಹಾಗೂ ಈ ಹಿಂದೆ ನಡೆದಿರುವ ಇದೇ ರೀತಿಯ ಘಟನೆಯಗಳನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿ ವರದಿ ಸಲ್ಲಿಸಲು ಎಸ್​ಐಟಿ ರಚನೆ ಮಾಡಲಾಗಿದೆ.
ಇದನ್ನೂ ಓದಿ:ತಮನ್ನಾ ಭಾಟಿಯಾಗೆ ED ಮಾಸ್ಟರ್​ ಸ್ಟ್ರೋಕ್; ನಿರಂತರ ವಿಚಾರಣೆ..? ವಿಷಯ ಏನು?
ಮಾಧ್ಯಮಗಳೊಂದಿಗೆ ಮಾತನಾಡಿದ ಡಿಜಿಪಿ ಅಲೋಕ್ ರಾಜ್, ಈ ದುರಂತದಲ್ಲಿ ಒಟ್ಟು 25 ಜನರು ಜೀವ ಕಳೆದುಕೊಂಡಿದ್ದಾರೆ,49 ಜನರಿಗೆ ಇನ್ನೂ ಕೂಡ ಚಿಕಿತ್ಸೆ ಮುಂದುವರಿದಿದ್ದು./ ಈಗಾಗಲೇ ಈ ಒಂದು ಪ್ರಕರಣದಲ್ಲಿ 12 ಜನರನ್ನು ಬಂಧಿಸಲಾಗಿದೆ. ಈ ಕಳ್ಳಬಟ್ಟಿ ದುರಂತದಲ್ಲಿ 12 ಜನರ ಪಾತ್ರವಿರುವುದು ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ. ಮೃತರಲ್ಲಿ ಒಟ್ಟು 20 ಜನರು ಸಿವಾನ್ ಜಿಲ್ಲೆಯ ಭಗವಾನ್​ಪುರ್​, ಮಧರ್ ಹಾಗೂ ಕೌಡಿಯಾ ಪ್ರದೇಶಕ್ಕೆ ಸೇರಿದವರು ಉಳಿದ ಐದು ಜನರು ಸರನ್ ಜಿಲ್ಲೆಗೆ ಸೇರಿದವರು ಎಂದು ಡಿಜಿಪಿ ಹೇಳಿದ್ದಾರೆ.
ಇನ್ನು ಇದೇ ವಿಚಾರವಾಗಿ ವಿರೋಧಪಕ್ಷಗಳು ನಿತಿಶ್ ಕುಮಾರ್ ಸರ್ಕಾರದ ವಿರುದ್ಧ ಹರಿಹಾಯ್ದಿದೆ. ರಾಜ್ಯದಲ್ಲಿ ಲಿಕ್ಕರ್ ಬ್ಯಾನ್​ ಕಾರಣದಿಂದಲೇ ಇಂತಹ ಘಟನೆಗಳು ಪದೇ ಪದೇ ಮರುಕಳಿಸುತ್ತಿವೆ. ಕೂಡಲೇ ಈ ಬಗ್ಗೆ ಸರ್ಕಾರ ಚಿತ್ತ ಹರಿಸಬೇಕು ಎಂದು ಆಗ್ರಹಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us