newsfirstkannada.com

ದೆಹಲಿಯಲ್ಲಿ ಬಿರು ಬಿಸಿಲಿನ ಶಾಪ.. ದೇಹದ ಉಷ್ಣತೆಯ ತೀವ್ರತೆ 108°Fಗೆ ತಲುಪಿ ಸಾವು

Share :

Published May 31, 2024 at 11:16am

    79 ವರ್ಷಗಳ ಬಳಿಕ ದೆಹಲಿಯಲ್ಲಿ ಗರಿಷ್ಠ ಉಷ್ಣಾಂಶ ದಾಖಲು

    ದೆಹಲಿ, ಬಿಹಾರ್​ ಸೇರಿ ಹಲವು ಕಡೆ ದಾಖಲೆಯ ಉಷ್ಣಾಂಶ

    ಬಿರು ಬಿಸಿಲಿನ ಹೊಡೆತಕ್ಕೆ ಪ್ರಾಣಬಿಟ್ಟ 40 ವರ್ಷದ ವ್ಯಕ್ತಿ

ನವದೆಹಲಿ: ಈಗಾಗಲೇ ಕೆಲವು ಪ್ರದೇಶಗಳಲ್ಲಿ ಈ ಬಾರಿಯ ಮುಂಗಾರು ಅವಧಿಗೂ ಮುನ್ನವೇ ಮಳೆರಾಯನ ಆರ್ಭಟ ಜೋರಾಗಿದೆ. ಆದರೆ ದೆಹಲಿ, ಬಿಹಾರ್​, ಹರಿಯಾಣ, ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಓರಿಸ್ಸಾ ಸೇರಿ ಹಲವು ಕಡೆಗಳಲ್ಲಿ ಬಿಸಿಲಿನ ತಾಪಮಾನ 50 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

79 ವರ್ಷಗಳಲ್ಲೇ ಗರಿಷ್ಠ ಉಷ್ಣಾಂಶ ದೆಹಲಿಯಲ್ಲಿ ದಾಖಲಾಗಿದೆ. ಜೂನ್ 17, 1945ರಂದು 46.7 ಡಿಗ್ರಿ ಸೆಲ್ಸಿಯಸ್ ಇತ್ತು. ಈ ಬಾರಿ 49.1 ಡಿಗ್ರಿ ಸೆಲ್ಸಿಯಸ್​ ಉಷ್ಣಾಂಶ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಇದನ್ನೂ ಓದಿ: VIDEO: ಮಹಿಳೆ ಜತೆ ಅಕ್ರಮ ಸಂಬಂಧ; ಬೆಡ್​ ರೂಮ್​ನಲ್ಲಿ ಹೆಂಡತಿಗೆ ರೆಡ್​​ ಹ್ಯಾಂಡಾಗಿ ಸಿಕ್ಕಿಬಿದ್ದ ಗಂಡ!

ಹೀಗಾಗಿ 50 ಡಿಗ್ರಿ ಉಷ್ಣಾಂಶಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರೋ ಬಿಸಿಲಿಗೆ ಜನರು ತಂಪು ಪಾನೀಯಗಳತ್ತ ಮುಖ ಮಾಡಿದ್ದಾರೆ. ಆದರೆ ಇದರ ಮಧ್ಯೆ ಬಿಸಿ ಶಾಖದ ತಾಪಮಾನಕ್ಕೆ 40 ವರ್ಷದ ವ್ಯಕ್ತಿಯೊಬ್ಬರು ದಾರುಣವಾಗಿ ಮೃತ ಪಟ್ಟಿದ್ದಾರೆ. ರಾಮ್ ಮನೋಹರ್ ಲೋಹಿಯಾ ಮೃತ ದುರ್ದೈವಿ.

ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಬಿಹಾರ ಮೂಲದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರ ದೇಹದಲ್ಲಿ ಅತಿಯಾದ ಉಷ್ಣಾಂಶ ಮತ್ತಷ್ಟು ಹದಗೆಡಿಸಿತ್ತು. ಅವರ ದೆಹದಲ್ಲಿ ಜ್ವರದ ತೀವ್ರತೆಯು 108 ಟೆಂಪ್ರೆಚರ್​​ಗೆ ತಲುಪಿ ಸಾವನ್ನಪ್ಪಿದ್ದಾರೆ.

ಅತಿಯಾದ ದೇಹದ ಉಷ್ಣತೆಯಿಂದಾಗಿ ರೋಗಿಯ ಮೂತ್ರಪಿಂಡಗಳು ಮತ್ತು ಯಕೃತ್ತು ವಿಫಲವಾಗಿದೆ. ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಆಸ್ಪತ್ರೆಯು ಸರಿಯಾದ ಚಿಕಿತ್ಸೆ ನೀಡಲು ಎಲ್ಲಾ ಪ್ರಯತ್ನಗಳನ್ನು ಮಾಡಿದೆ. ಸಾಮಾನ್ಯವಾಗಿ ಮನುಷ್ಯನ ದೇಹದ ಉಷ್ಣಾಂಶ 98.6 ಡಿಗ್ರಿ ಫ್ಯಾರನ್‌ಹೀಟ್ (37 ಡಿಗ್ರಿ ಸೆಂಟಿಗ್ರೇಡ್) ಇರುತ್ತೆ. ಆದರೆ ಮೃತಪಟ್ಟ ವ್ಯಕ್ತಿಗೆ 108 ಡಿಗ್ರಿ ದೇಹದ ಉಷ್ಣಾಂಶ ಇತ್ತು. ಹೀಗಾಗಿ ಅತಿಯಾದ ಶಾಖವನ್ನು ತಾಳಲಾರದೇ ರೋಗಿ ಮೃತಪಟ್ಟಿದ್ದಾರೆ ಎಂದು ಆರ್‌ಎಂಎಲ್ ಆಸ್ಪತ್ರೆಯ ಡಾ ರಾಜೇಶ್ ಶುಕ್ಲಾ ಸ್ಥಳೀಯ ಸುದ್ದಿಗಾರರೊಂದಿಗೆ ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೆಹಲಿಯಲ್ಲಿ ಬಿರು ಬಿಸಿಲಿನ ಶಾಪ.. ದೇಹದ ಉಷ್ಣತೆಯ ತೀವ್ರತೆ 108°Fಗೆ ತಲುಪಿ ಸಾವು

https://newsfirstlive.com/wp-content/uploads/2024/03/heat-wave-1.jpg

Load More