ಇವನು ಮಗನೇ ಅಲ್ಲ.. ದರೋಡೆಕೋರ
ಐಫೋನ್ ಆಸೆಗೆ ಬಿದ್ದು ಮಾಸ್ಟರ್ ಪ್ಲಾನ್ ಹೆಣೆದ
ಪೋಷಕರನ್ನೇ ಯಾಮಾರಿಸಿ ನ್ನ ಮನೆಯಲ್ಲಿ ದರೋಡೆ ಮಾಡಿದ
ಪೋಷಕರು ಐಫೋನ್ ಕೊಡಿಸಲು ನಿರಾಕರಿಸಿದ ಹಿನ್ನೆಲೆ ತನ್ನ ಮನೆಯಲ್ಲಿ ತಾನೇ ದರೋಡೆ ನಡೆಸಿದ ಪ್ರಸಂಗ ಬೆಳಕಿಗೆ ಬಂದಿದೆ. ಕೊನೆಗೆ ಮನೆ ಮಗನೇ ಈ ದರೋಡೆಯ ಮಾಸ್ಟರ್ ಮೈಂಡ್ ಎಂದು ತಿಳಿದು ಅಚ್ಚರಿಗೊಂಡಿದ್ದಾರೆ.
ಬಿಹಾರದ ನಳಂದ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಶಿಕ್ಷಕ ತಂದೆ ಅಕ್ಟೋಬರ್ 22 ರಂದು ನನ್ನ ಮನೆಯಲ್ಲಿ ದರೋಡೆ ನಡೆದಿದೆ. ಮಗನನ್ನು ಮನೆಯೊಳಕ್ಕೆ ಬೀಗ ಹಾಕಿ ಯಾರೋ ದರೋಡೆ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಶಿಕ್ಷಕನ ದೂರಿನ ಅನ್ವಯ ಪೊಲೀಸರು ತನಿಖೆ ನಡೆಸಿದ್ದಾರೆ. ಈ ವೇಳೆ ಮನೆ ಮಗನ ಮುಖವಾಡ ಕಳಚಿದೆ.
ಇದನ್ನೂ ಓದಿ: ಐಫೋನ್ 16 ಇಂಡೋನೇಷ್ಯಾದಲ್ಲಿ ಬ್ಯಾನ್! ಪ್ರವಾಸಿಗರನ್ನು ತಲ್ಲಣಗೊಳಿಸಿದ ಹೊಸ ಕಾನೂನು
ಶಿಕ್ಷಕ ನೀಡಿದ ದೂರಿನ ಅನ್ವಯ ತನಿಖೆಗೆ ಇಳಿದ ಪೊಲೀಸರಿಗೆ ನಾಲ್ವರು ಮನೆಯೊಳಕ್ಕೆ ನುಗ್ಗಿ ದರೋಡೆ ಮಾಡಿದ್ದಾರೆ ಎಂಬ ಸಂಗತಿ ಬಯಲಾಗಿದೆ. ಚಿನ್ನಾಭರಣ ಮತ್ತು ಬೆಳ್ಳಿ ಆಭರಣ ದೋಚಿರುವುದು ಬೆಳಕಿಗೆ ಬಂದಿದೆ. ಬಳಿಕ ಕೌಟುಂಬಿಕ ಕಲಹದಿಂದಾಗಿ ಈ ದರೋಡೆ ನಡೆದಿರಬಹುದೇ ಎಂಬ ಅನುಮಾನ ಪೊಲೀಸರಿಗೆ ಕಾಡಿದೆ. ಆದರೆ ಕೊನೆಗೆ ಅಪ್ರಾಪ್ತ ಮಗನಿಂದಲೇ ಈ ದರೋಡೆ ನಡೆದಿದೆ ಎಂಬುದು ಗೊತ್ತಾಗಿದೆ.
ಇದನ್ನೂ ಓದಿ: BBK11: ಇಂದು ಕಿಚ್ಚನ ಬದಲು ಭಟ್ರು! ಬಿಗ್ ಬಾಸ್ ಮನೆಯೊಳಕ್ಕೆ ಕಾಲಿಟ್ಟ ವಿಕಟ ಕವಿ
ಮಗ ಐಫೋನ್ ಆಸೆಗೆ ಬಿದ್ದು ಪೋಷಕರಿಗೆ ಒತ್ತಾಯಿಸಿದ್ದಾನೆ. ಆದರೆ ಪೋಷಕರು ದುಬಾರಿ ಐಫೋನ್ ಕೊಡಿಸಲು ನಿರಾಕರಿಸಿದ್ದಾರೆ. ಕೊನೆಗೆ ಮಗ ತನ್ನ ಮೂವರು ಸ್ನೇಹಿತರನ್ನು ಕೂಡಿಸಿ ದರೋಡೆ ಮಾಸ್ಟರ್ ಪ್ಲಾನ್ ಹೆಣೆದಿದ್ದಾನೆ. ನಕಲಿ ಕೀ, ಕತ್ತರಿಸುವ ಸಾಧನವನ್ನು ಸ್ನೇಹಿತರಿಗೆ ನೀಡಿ ದರೋಡೆ ಮಾಡಿದ್ದಾನೆ. ಸದ್ಯ ಮನೆಮಗ ಮತ್ತು ಇಬ್ಬರು ಸ್ನೇಹಿತರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮತ್ತೋರ್ವ ತಪ್ಪಿಸಿಕೊಂಡಿದ್ದು, ಹುಡುಕಾಟ ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ