/newsfirstlive-kannada/media/post_attachments/wp-content/uploads/2025/01/PUBG-GAME.jpg)
ಪಬ್​ಜಿ ಅತಿ ಹೆಚ್ಚು ಯುವಕರು ತಮ್ಮ ಖಾಲಿ ಸಮಯದಲ್ಲಿ ಆಡುವ ಗೇಮ್ ಇದು. ಅದರಲ್ಲಿ ಯಾವ ಮಟ್ಟಿಗೆ ಕಳೆದು ಹೋಗುತ್ತಾರೆ ಅಂದ್ರೆ ಊಟ, ನೀರು ನಿದ್ರೆ ಬಿಟ್ಟು ಅದರಲ್ಲಿಯೇ ಮುಳುಗಿ ಹೋಗ್ತಾರೆ. ನಾವು ಬಂದು ರೈಲು ಹಳಿಗಳ ಮೇಲೆ ಕುಳಿತಿದ್ದೇವೆ, ಎದುರಿಗೆ ಟ್ರೇನ್ ಬರುತ್ತಿದೆ ಎಂಬ ಅರಿವು ಕೂಡ ಇಲ್ಲದೇ ಕಳೆದು ಹೋದ ಯುವಕರು ಪ್ರಾಣ ಕಳೆದುಕೊಂಡ ಘಟನೆ ಬಿಹಾರದಲ್ಲಿ ನಡೆದಿದೆ.
ಬಿಹಾರದ ಪೂರ್ವ ಚಂಪರಣ ಜಿಲ್ಲೆಯಲ್ಲಿ ಇಂತಹದೊಂದು ಘಟನೆ ನೆಡೆದಿದೆ.ಜೀವ ಕಳೆದುಕೊಂಡ ಮೂವರು ಯುವಕರನ್ನು ಫಾರ್ಕುನ್ ಅಲಾಮ್, ಸಮೀರ್​ ಅಲಂ ಮತ್ತು ಹಬೀಬುಲ್ಲಾ ಅನ್ಸಾರಿ ಎಂದು ಗುರುತಿಸಲಾಗಿದೆ. ಮೂವರು ಯುವಕರು ಕಿವಿಗೆ ಹೆಡ್​ಫೋನ್ ಹಾಕಿಕೊಂಡು ಪಬ್​ಜಿ ಆಡುತ್ತಿದ್ದಾರೆ. ರೈಲ್ವೆ ಹಳಿಯ ಮೇಲೆ ಕುಳಿತು ಪಬ್​ಜಿ ಆಡುತ್ತಿದ್ದರು. ಕಿವಿಯಲ್ಲಿ ಇಯರ್​ ಬಡ್ಸ್ ಹಾಕಿದ ಕಾರಣ ರೈಲಿನ ಶಬ್ಧ ಹಾಗೂ ಅದರ ಹಾರ್ನ್​ ಅವರಿಗೆ ಕೇಳಿಲ್ಲ. ಪಬ್​ಜಿ ಆಡಲು ಅಂತ ಬಂದವರು ದುರಂತ ಅಂತ್ಯ ಕಂಡಿದ್ದಾರೆ.
ಈ ಒಂದು ಘಟನೆಯನ್ನು ವಿಷಯ ಕಾಡ್ಗಿಜ್ಜಿನಂತೆ ಹಬ್ಬಿ ಭೀಕರ ಅಪಾಘಾತವನ್ನು ನೋಡಲು ಜನರ ದಂಡೇ ಸೇರಿತ್ತು. ಸದ್ಯ ಮೃತರ ದೇಹವನ್ನು ಅವರ ಕುಟುಂಬದವರು ತೆಗೆದುಕೊಂಡು ಹೋಗಿದ್ದಾರೆ. ಆರಂಭದ ತನಿಖೆಯ ಪ್ರಕಾರ ಮೊಬೈಲ್​ನಲ್ಲಿ ಗೇಮ್ ಆಡುತ್ತಾ ರೈಲ್ವೆ ಹಳಿಗಳ ಮೇಲೆ ಕುಳಿತದ್ದಾಗ ಈ ಘಟನೆ ನಡೆದಿರುವ ಶಂಕೆಯಿದೆ ಎಂದು ಸದರ್ ಸಬ್ ಡಿವಿಜಿನಲ್ ಪೊಲೀಸ್ ಆಫೀಸರ್ ವಿವೇಕ್ ದೀಪ್ ಹೇಳಿದ್ದಾರೆ.
ಇದನ್ನೂ ಓದಿ:ಸಂಧ್ಯಾ ಥಿಯೇಟರ್ ಕಾಲ್ತುಳಿತ ಕೇಸ್; ನಟ ಅಲ್ಲು ಅರ್ಜುನ್​ಗೆ ಬಿಗ್ ರಿಲೀಫ್
ಈ ಒಂದು ಘಟನೆ ಅನೇಕರಿಗೆ ಎಚ್ಚರಿಕೆಯ ಘಂಟೆಯಾಗಬೇಕು ಎಂದು ಹಲವು ಹೇಳಿದ್ದಾರೆ. ರೈಲ್ವೆ ಟ್ರ್ಯಾಕ್​ಗಳ ಮೇಲೆ ಕುಳಿತು ಮೊಬೈಲ್​ನಲ್ಲಿ ಕಳೆದು ಹೋಗುವುದು ನಿಜಕ್ಕೂ ಅಪಾಯವನ್ನು ಎದೆಯ ಮೇಲೆ ಎಳೆದುಕೊಂಡಂತೆ ಇಂತಹ ಹುಚ್ಚು ಸಾಹಸಗಳಿಗೆ ಕೈಹಾಕಬಾರದು ಅಂತ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us