Advertisment

ಆಯೋಗದ ವರದಿಯಿಂದ ಬಿಗ್ ಶಾಕ್.. ಮತದಾರರ ಪಟ್ಟಿಯಿಂದ 52 ಲಕ್ಷ ವೋಟರ್ಸ್​ ಔಟ್​

author-image
Bheemappa
Updated On
ಆಯೋಗದ ವರದಿಯಿಂದ ಬಿಗ್ ಶಾಕ್.. ಮತದಾರರ ಪಟ್ಟಿಯಿಂದ 52 ಲಕ್ಷ ವೋಟರ್ಸ್​ ಔಟ್​
Advertisment
  • ಬೇರೆ ಬೇರೆ ಸ್ಥಳಗಳಿಗೆ ಹೋಗಿರುವ ಮತದಾರರು ಎಷ್ಟು ಲಕ್ಷ ಇದ್ದಾರೆ?
  • ವರದಿ ಪ್ರಕಾರ 18 ಲಕ್ಷಕ್ಕೂ ಅಧಿಕ ಮತದಾರರು ಜೀವಂತವಾಗಿಲ್ಲ
  • ಕರಡು ಮತದಾರರ ಪಟ್ಟಿಯಲ್ಲಿ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ?

ಪಾಟ್ನಾ: ವಲಸೆ ಹಾಗೂ ಮೃತ ಪಟ್ಟಿರಬಹುದು ಎಂದು ಸುಮಾರು 52 ಲಕ್ಷ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈ ಬಿಡಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಉಳಿದಂತೆ ಎಲ್ಲಾ ಅರ್ಹ ಮತದಾರರನ್ನು ಕರಡು ಮತದಾರರ ಪಟ್ಟಿಗೆ ಸೇರಿಸಿ, ಆಗಸ್ಟ್​ 1 ರಂದು ಪಟ್ಟಿ ಪ್ರಕಟಿಸಲಾಗುವುದು ಎಂದು ತಿಳಿಸಿದೆ.

Advertisment

ಮತದಾರರಿಗೆ ಸಂಬಂಧಿಸಿದಂತೆ ಬಿಹಾರದ ವಿಶೇಷ ತೀವ್ರ ಪರಿಷ್ಕರಣೆ (ಎಸ್​ಐಆರ್)ಯಿಂದ ಹೊರ ಬಂದ ಕೆಲವು ವಿಷ್ಯಗಳು ಎಂದರೆ 18 ಲಕ್ಷಕ್ಕೂ ಹೆಚ್ಚು ಮತದಾರರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. 26 ಲಕ್ಷ ಮತದಾರರು ಬೇರೆ ಬೇರೆ ಸ್ಥಳಗಳಿಗೆ ಹೋಗಿದ್ದಾರೆ. 7 ಲಕ್ಷ ಜನರು ಎರಡು ಸ್ಥಳಗಳಲ್ಲಿ ಇದ್ದಾರೆ ಎಂದು ದಾಖಲಾಗಿದ್ದಾರೆ ಎಂದು ಹೇಳಲಾಗಿದೆ.

52 ಲಕ್ಷಕ್ಕೂ ಅಧಿಕ ಮತದಾರರು ಅವರವರ ವಿಳಾಸದಲ್ಲಿ ಕಂಡು ಬಂದಿಲ್ಲ. 18 ಲಕ್ಷ ಮತದಾರರು ವರದಿಯ ಪ್ರಕಾರ ನಿಧನ ಹೊಂದಿದ್ದಾರೆ. 26,01,031 ಮತದಾರರು ಬೇರೆ ಸ್ಥಳಕ್ಕೆ ಶಾಶ್ವತವಾಗಿ ಸ್ಥಳಾಂತರವಾಗಿದ್ದಾರೆ. ಒಬ್ಬರೇ ಬೇರೆ ಬೇರೆ ಸ್ಥಳಗಳಲ್ಲಿ ದಾಖಲಾಗಿರುವಂತವರು 7,50,742 ಜನರು ಇದ್ದಾರೆ. ಇಷ್ಟೇ ಅಲ್ಲದೇ ಹಲವು ಜನರನ್ನು ಯಾರೆಂಬುದೇ ಪತ್ತೆ ಹಚ್ಚಲು ಆಗಿಲ್ಲ. ಅಂತಹ ಜನರು 11,484 ಮಂದಿ ಇದ್ದಾರೆ ಎಂದು ಎಸ್​​ಐಆರ್ ಅಂಕಿ ಅಂಶಗಳು ಹೇಳುತ್ತವೆ.

ಇದನ್ನೂ ಓದಿ: ಕುಸುಮ್ ಬಿ ಯೋಜನೆಯಡಿ ನೀರಾವರಿ ಪಂಪ್ ಸೆಟ್.. ಕೇಂದ್ರ, ರಾಜ್ಯ ಸರ್ಕಾರ ಎಷ್ಟು ಸಬ್ಸಿಡಿ ನೀಡುತ್ತವೆ?

Advertisment

publive-image

ಬಿಹಾರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಮತದಾರರ ಪರಿಷ್ಕರಣೆಯನ್ನು ನಡೆಸಲಾಗುತ್ತಿದೆ. ಇದು ಸಾಂವಿಧಾನಿಕ ಜವಾಬ್ದಾರಿ ಆಗಿದೆ ಎಂದು ಎಸ್​ಐಆರ್ ಹೇಳಿದೆ. ಹೀಗಾಗಿ 324ನೇ ವಿಧಿ ಅಡಿ ತನ್ನ ಅಧಿಕಾರ ಉಲ್ಲೇಖಿಸುತ್ತದೆ. ಎಸ್​ಐಆರ್ ಪ್ರಕಾರ ಜೂನ್ 24 ರಂದು ಹೊರಡಿಸಲಾದ ಆದೇಶದಂತೆ ಸಾರ್ವಜನಿಕರು ಕರಡು ಮತದಾರರ ಪಟ್ಟಿಯಲ್ಲಿ ಆಕ್ಷೇಪಣೆ ಸಲ್ಲಿಸಲು ಅಥವಾ ಬದಲಾವಣೆಗಾಗಿ ಒಂದು ತಿಂಗಳು ಸಮಯ ನೀಡಲಾಗಿದೆ.

ಅಂದರೆ ಆಗಸ್ಟ್ 1 ರಿಂದ ಸೆಪ್ಟೆಂಬರ್ 1 ರವರೆಗೆ ಆಕ್ಷೇಪಣೆ ಸಲ್ಲಿಸಲು ಅಥವಾ ಬದಲಾವಣೆಗಾಗಿ ಅವಕಾಶ ಇರುತ್ತದೆ ಎಂದು ಹೇಳಿದೆ. ಬಿಹಾರದ ವಿಧಾನಸಭಾ ಚುನಾವಣೆ ಅಕ್ಟೋಬರ್ ಅಥವಾ ನವೆಂಬರ್​ನಲ್ಲಿ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ ಚುನಾವಣಾ ಆಯೋಗ ಅಧಿಕೃತವಾಗಿ ಹೇಳಿದ ಮೇಲೆಯೇ ಎಲ್ಲದಕ್ಕೂ ಉತ್ತರ ಸಿಗಲಿದೆ. ಸದ್ಯ ಬಿಹಾರದ ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment