/newsfirstlive-kannada/media/post_attachments/wp-content/uploads/2024/12/VIJ_YOUTH_1.jpg)
10 ದಿನದಲ್ಲಿ ಹಸೆಮಣೆ ಏರಬೇಕಿದ್ದ ಯುವಕ ಆದರೆ, ವಿಧಿಯಾಟ ಬೇರೆ ಇತ್ತು ಅನಿಸುತ್ತೆ. ಮದುವೆ ಸಂಭ್ರಮದಲ್ಲಿದ್ದ ಆ ಯುವಕನ ಕುಟುಂಬದಲ್ಲಿ ಶೋಕತಪ್ತವಾಗಿದೆ. ಕಾರಣ ವಿಐಪಿ ಮಗನ ಬರ್ತಡೇ ಪಾರ್ಟಿಗೆ ಹೋಗಿದ್ದ ಆ ಯುವಕ ಇನ್ನಿಲ್ಲವಾದ್ದಾನೆ. ಇದನ್ನ ಆ್ಯಕ್ಸಿಡೆಂಟ್ ಅಂತ ಹೇಳಿದರೂ ತಂದೆ ಬೇರೆಯದ್ದೆ ಅನುಮಾನ ವ್ಯಕ್ತಪಡಿಸಿದ್ದಾರೆ.
ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಬೈಕ್ ಸಮೇತ ಯುವಕ 7 ರಿಂದ 8 ಆಳದ ಗುಂಡಿಗೆ ಬಿದ್ದಿದ್ದ. ಹಗರಿಬೊಮ್ಮನಹಳ್ಳಿ ಪುರಸಭೆ ವಾರ್ಡ್ ನಂಬರ್ 1ರ ಸದಸ್ಯೆ ಸರಸ್ವತಿ ಹಾಗೂ ಹನುಮಂತಪ್ಪ ದಂಪತಿಯ ಪುತ್ರ ಮನೋಜ್ ಈ ದುರಂತ ವಿಧಿಯಾಟಕ್ಕೆ ಬಲಿಯಾದವ. ಹಸೆಮಣೆ ಏರಬೇಕಿದ್ದವ ಜೀವ ಕಳೆದುಕೊಂಡಿದ್ದು ಭಯ ಹುಟ್ಟಿಸಿದೆ.
ಯುವಕ ಮನೋಜ್ಗೆ ಇದೇ ಡಿಸೆಂಬರ್ 20ರಂದು ಮದುವೆ ಫಿಕ್ಸ್ ಆಗಿತ್ತು.. ಮದುವೆ ಹಿನ್ನೆಲೆ ಆ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿತ್ತು. ಮನೆಯವರೆಲ್ಲರೂ ಮದುವೆ ಆಮಂತ್ರಣ ಕಾರ್ಡ್ ಹಂಚಿಕೆ ಹಿಡಿದು ಮದುವೆ ಸಿದ್ಧತೆ ಭರದಿಂದ ಸಾಗಿತ್ತು. ಆದ್ರೆ, ಮನೆಯವ್ರಿಗೆ ಬರಸಿಡಿಲಿನಂತೆ ಬಂದೆರಗಿತ್ತು ಮಗನ ಸುದ್ದಿ.
ಸಣ್ಣ ಪುಟ್ಟ ಗಲಾಟೆ ಆಗುತ್ತಿದ್ದವು. ಹುಟ್ಟು ಹಬ್ಬಕ್ಕೆ ನಾನೇ ಕಳಿಸಿದ್ದೆ. ಭೀಮಾನಾಯ್ಕ್ ಅವರ ಮಗನ ಬರ್ತ್ಡೇಗೆ ನಾನೇ ಕಳಿಸಿದ್ದೆ.
ಸರಸ್ವತಿ, ಮನೋಜ್ ತಾಯಿ
ಡಿಸೆಂಬರ್ 8.. ರಾತ್ರಿ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಪುತ್ರ ಅಶೋಕ ನಾಯ್ಕ್ ಬರ್ತಡೇ. ಪಟ್ಟಣದ ಹೊರಭಾಗದ ಪಾರ್ಮ್ ಹೌಸ್ನಲ್ಲಿ ಪಾರ್ಟಿ ಇತ್ತು. ಪಾರ್ಟಿಗೆ ಹೋಗಿದ್ದ ಮನೋಜ್ನನ್ನ ರಾತ್ರಿ 8 ಘಂಟೆಗೆ ಸ್ನೇಹಿತರಿಬ್ಬರು ಬೈಕ್ನಲ್ಲಿ ಕರೆದೊಯ್ದು ವಾಪಸ್ ಬಿಟ್ಟಿದ್ದರು. ಆದ್ರೆ, ರಾತ್ರಿ 10.30ರ ಸುಮಾರಿಗೆ ಮತ್ಯಾಕೆ ಪಾರ್ಟಿ ಜಾಗಕ್ಕೆ ಹೋದನೋ ಅನ್ನೋದೆ ಗೊತ್ತಿಲ್ಲ. ಈಗ ಅತಿಯಾದ ವೇಗದಿಂದ ನಿಯಂತ್ರಣ ತಪ್ಪಿ 8 ಅಡಿಯ ರಸ್ತೆ ಪಕ್ಕದ ಆಳಕ್ಕೆ ಬೈಕ್ ಬಿದ್ದು ಈ ದುರಂತ ಸಂಭವಿಸಿದೆ. ಇದೇ ಈಗ ಅನುಮಾನಕ್ಕೆ ಕಾರಣ ಆಗಿದೆ.
ಇದನ್ನೂ ಓದಿ:ದರ್ಶನ್ ಜಾಮೀನಿಗೆ ಸರ್ಕಾರ ಬಿಗ್ ಟ್ವಿಸ್ಟ್ ಕೊಡುತ್ತಾ.. ಪೂರ್ಣಾವಧಿ ಬೇಲ್, ಮುಂದೇನು ಪ್ಲಾನ್..?
ಬೈಕ್ ಅನ್ನು ವೇಗವಾಗಿ ಚಾಲನೆ ಮಾಡಿಕೊಂಡು ಹೋಗಿ ಆಳಕ್ಕೆ ಬಿದ್ದಿದ್ದಾರೆ. ಬಂಡೆಗೆ ತಲೆ ಬಡಿದು, ಮೊಣಕೈಗೆ ಒಳ ಪೆಟ್ಟು ಆಗಿ, ಸ್ಥಳದಲ್ಲಿ ಜೀವ ಕಳೆದುಕೊಂಡಿರಬಹುದು ಎಂದು ಅನುಮಾನ ವ್ಯಕ್ತಪಡಿಸಲಾಗಿದೆ.
ಶ್ರೀಹರಿ ಬಾಬು, ವಿಜಯನಗರ ಜಿಲ್ಲಾ ಎಸ್ಪಿ
ಸದ್ಯ ತಂದೆ ಹನುಂಮತಪ್ಪ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ತನಿಖೆ ಬಳಿಕವಷ್ಟೇ ಮನೋಜ್ ಸಾವಿನ ಸತ್ಯ ಹೊರಬರಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ