/newsfirstlive-kannada/media/post_attachments/wp-content/uploads/2025/01/RMG_ACCIDENT.jpg)
ರಾಮನಗರ: ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ನರೇಗಾ ಮಹಿಳಾ ಇಂಜಿನಿಯರ್ ಜೀವ ಕಳೆದುಕೊಂಡ ಘಟನೆ ರಾಮನಗರದ ಹಲಗೂರು ಸಮೀಪದ ಬಸಾಪುರ ಗೇಟ್ ಬಳಿ ನಡೆದಿದೆ.
ಶರಣ್ಯ ಗೌಡ (25) ಪ್ರಾಣ ಬಿಟ್ಟವರು. ಮೂಲತಃ ಮಂಡ್ಯದ ಮಳವಳ್ಳಿ ತಾಲೂಕಿನ ಬಳೆಹೊನ್ನಿಗನ ಗ್ರಾಮದ ಶರಣ್ಯ ಅವರು, ಕಳೆದ ಒಂದು ವರ್ಷದಿಂದ ನರೇಗಾ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಕನಕಪುರ ತಾಲೂಕಿನ ಸಾತನೂರು ಪಂಚಾಯತಿಯಲ್ಲಿ ನರೇಗಾ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕೆಲಸ ಮುಗಿಸಿ ಸ್ವಗ್ರಾಮದಿಂದ ಹಲಗೂರಿಗೆ ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ.
ಇದನ್ನೂ ಓದಿ:BDA ಫ್ಲ್ಯಾಟ್ ಖರೀದಿಗೆ ಮುಗಿಬಿದ್ದ ಜನ.. ಒಂದೇ ದಿನ 175 ಸೇಲ್, ಒಂದು ನಿವಾಸಕ್ಕೆ ಎಷ್ಟು ಲಕ್ಷ?
ಸ್ವಗ್ರಾಮ ಬಳೆಹೊನ್ನಿಗನಕ್ಕೆ ಬೈಕ್ನಲ್ಲಿ ಹೋಗುವಾಗ ಎರಡು ಬೈಕ್ಗಳ ನಡುವೆ ಭಯಾನಕವಾಗಿ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಇದರಿಂದ ತೀವ್ರ ರಸ್ತಸ್ರಾವದಿಂದ ಶರಣ್ಯ ಸ್ಥಳದಲ್ಲೇ ಕಣ್ಮುಚ್ಚಿದ್ದಾರೆ. ಸದ್ಯ ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಇನ್ನೊಂದು ನೋವಿನ ಸಂಗತಿ ಎಂದರೆ ಮುಂದಿನ ತಿಂಗಳು ಅಂದರೆ ಫೆಬ್ರುವರಿ 16ಕ್ಕೆ ಶರಣ್ಯ ಮದುವೆ ನಿಶ್ಚಯ ಆಗಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ