Advertisment

ನಿಂತಿದ್ದ ಲಾರಿಗೆ ಹಿಂಬದಿಯಿಂದ ಬಂದ ಬೈಕ್​ ಡಿಕ್ಕಿ​.. ಸ್ಥಳೀಯ ಪತ್ರಿಕೆ ವರದಿಗಾರ ಸಾವು

author-image
Bheemappa
Updated On
ನಿಂತಿದ್ದ ಲಾರಿಗೆ ಹಿಂಬದಿಯಿಂದ ಬಂದ ಬೈಕ್​ ಡಿಕ್ಕಿ​.. ಸ್ಥಳೀಯ ಪತ್ರಿಕೆ ವರದಿಗಾರ ಸಾವು
Advertisment
  • ಕೆಲಸ ಮುಗಿಸಿ ರಾತ್ರಿ 9 ಗಂಟೆಗೆ ಊರಿಗೆ ಹೋಗುವಾಗ ಘಟನೆ
  • ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಬೈಕ್ ಸವಾರ ಸಾವು
  • ಡಿಕ್ಕಿ ರಭಸಕ್ಕೆ ಸವಾರನ ತಲೆಗೆ ಬಲವಾದ ಪೆಟ್ಟು ಬಿದ್ದು ರಕ್ತಸ್ರಾವ

ಮಂಡ್ಯ: ಸ್ಥಳೀಯ ಪತ್ರಿಕಾ ವರದಿಗಾರನೊಬ್ಬ ಬೈಕ್​ನಲ್ಲಿ ವೇಗವಾಗಿ ಬಂದು ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದು ಸಾವನ್ನಪ್ಪಿರುವ ಘಟನೆ ಮಂಡ್ಯದ ಮದ್ದೂರು ಪಟ್ಟಣದಲ್ಲಿ ನಡೆದಿದೆ.

Advertisment

ಇದನ್ನೂ ಓದಿ:ಧಾರಾಕಾರ ಮಳೆಗೆ 100ಕ್ಕೂ ಹೆಚ್ಚು ರಸ್ತೆಗಳು ಬಂದ್.. ಭಾರೀ ಅನಾಹುತಕ್ಕೆ 13ಕ್ಕೂ ಹೆಚ್ಚು ಜನ ಸಾವು

ಬೆಸಗರಹಳ್ಳಿ ಗ್ರಾಮದ ಬಿ.ಎ ಮಧು ಕುಮಾರ್ (34) ಮೃತ ದುರ್ದೈವಿ. ಇವರು ಕೆಲಸ ಮುಗಿಸಿಕೊಂಡು ರಾತ್ರಿ 9 ಗಂಟೆಗೆ ತಮ್ಮ ಊರಿಗೆ ಹೋಗುತ್ತಿದ್ದರು. ಈ ವೇಳೆ ಮದ್ದೂರು ಪಟ್ಟಣದ ಟಿಬಿ ವೃತ್ತದ ಬಳಿ ಲಾರಿಯೊಂದು ನಿಂತಿತ್ತು. ಹಿಂಬದಿಯಿಂದ ವೇಗವಾಗಿ ಬಂದು ಬೈಕ್​​ನಿಂದ ಲಾರಿಗೆ ಡಿಕ್ಕಿ ಹೊಡೆದು ನೆಲಕ್ಕೆ ಬಿದ್ದಿದ್ದ. ಡಿಕ್ಕಿಯಾದ ರಭಸಕ್ಕೆ ತಲೆಗೆ ಗಂಭೀರವಾದ ಪೆಟ್ಟು ಬಿದ್ದು ರಕ್ತ ಸ್ರಾವ ಆಗುತ್ತಿತ್ತು.

ಇದನ್ನೂ ಓದಿ: ದರ್ಶನ್​​ಗಾಗಿ ಶಕ್ತಿ ದೇವತೆಯ ಮೊರೆ ಹೋದ ವಿಜಯಲಕ್ಷ್ಮಿ.. ಬಂಧನಕ್ಕೂ ಮೊದಲು ನಟ ಅದೇ ದೇಗುಲಕ್ಕೆ ಹೋಗಿದ್ದರು..!

Advertisment

ತಕ್ಷಣ ಆತನನ್ನು ಮದ್ದೂರು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯದ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ. ಈ ಸಂಬಂಧ ಮದ್ದೂರು ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment