newsfirstkannada.com

×

ಕರೆಂಟ್​ ಕಂಬಕ್ಕೆ ಎಲೆಕ್ಟ್ರಿಕ್ ಬೈಕ್ ಡಿಕ್ಕಿ.. ಸ್ಥಳದಲ್ಲೇ ಉಸಿರು ಚೆಲ್ಲಿದ ಇಬ್ಬರು ಯುವಕರು

Share :

Published October 17, 2024 at 7:28am

    ನಗರದಲ್ಲಿ ನಡೆದ ಭೀಕರವಾದ ಬೈಕ್ ಅಪಘಾತಕ್ಕೆ ಇಬ್ಬರು ಬಲಿ

    ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿರುವ ಪೊಲೀಸರು

    ರಾತ್ರಿ ವೇಳೆ ವಿದ್ಯುತ್ ಕಂಬಕ್ಕೆ ಭಯಾನಕವಾಗಿ ಡಿಕ್ಕಿಯಾದ ಬೈಕ್

ಬೆಂಗಳೂರು: ರಾತ್ರಿ ವಿದ್ಯುತ್ ಕಂಬಕ್ಕೆ ಭೀಕರವಾಗಿ ಬೈಕ್ ಡಿಕ್ಕಿಯಾದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಗರದ ಹೆಬ್ಬಾಳದ ದೇವಿನಗರ ಬಸ್ ನಿಲ್ದಾಣ ಬಳಿ ನಡೆದಿದೆ.

ಮೃತಪಟ್ಟಿರುವ ಇಬ್ಬರು ಯುವಕರು ರಾತ್ರಿ 1 ಗಂಟೆ ಸುಮಾರಿಗೆ ಎಲೆಕ್ಟ್ರಿಕ್ ಸ್ಕೂಟರ್​ನಲ್ಲಿ‌ ಬಿಇಎಲ್ ಕಡೆಯಿಂದ ಹೆಬ್ಬಾಳಕ್ಕೆ ಬರುತ್ತಿದ್ದರು. ಈ ವೇಳೆ ದೇವಿನಗರ ಬಸ್ ನಿಲ್ದಾಣ ಬಳಿ ಬೈಕ್ ನಿಯಂತ್ರಣ ತಪ್ಪಿ ಕರೆಂಟ್ ಕಂಬಕ್ಕೆ ಭಯಾನಕವಾಗಿ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಇಬ್ಬರು ರಸ್ತೆಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಇಂದು ಕೂಡ ಧಾರಾಕಾರ ಮಳೆ.. ಹವಾಮಾನ ಇಲಾಖೆಯಿಂದ ಆರೆಂಜ್ ಅಲರ್ಟ್

ಇನ್ನು ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ‌ ಹೆಬ್ಬಾಳ‌ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಂಬ್ಯುಲೆನ್ಸ್ ಮೂಲಕ ಮೃತದೇಹಗಳನ್ನು ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮೃತರ ಬಳಿ ಟೂಲ್ಸ್ ಹಾಗೂ ಚಾಕು ಪತ್ತೆ ಆಗಿದ್ದರಿಂದ ರಾಬರಿ ಮಾಡುತ್ತಿದ್ದ ಯುವಕರ ಎನ್ನುವ ಅನುಮಾನ ವ್ಯಕ್ತವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕರೆಂಟ್​ ಕಂಬಕ್ಕೆ ಎಲೆಕ್ಟ್ರಿಕ್ ಬೈಕ್ ಡಿಕ್ಕಿ.. ಸ್ಥಳದಲ್ಲೇ ಉಸಿರು ಚೆಲ್ಲಿದ ಇಬ್ಬರು ಯುವಕರು

https://newsfirstlive.com/wp-content/uploads/2024/10/BNG_BIKE.jpg

Load More