ಟ್ರಕ್ಕಿಂಗ್​ಗೆ ಹೋಗುವಾಗ ಬೊಲೆರೋ ವಾಹನಕ್ಕೆ ಬೈಕ್ ಡಿಕ್ಕಿ.. ಸ್ಥಳದಲ್ಲೇ ಯುವಕ ಸಾವು

author-image
Bheemappa
Updated On
ಟ್ರಕ್ಕಿಂಗ್​ಗೆ ಹೋಗುವಾಗ ಬೊಲೆರೋ ವಾಹನಕ್ಕೆ ಬೈಕ್ ಡಿಕ್ಕಿ.. ಸ್ಥಳದಲ್ಲೇ ಯುವಕ ಸಾವು
Advertisment
  • ವೀಕೆಂಡ್ ಮೋಜು ಮಸ್ತಿಗೆ ಬೈಕ್​ನಲ್ಲಿ​ ವೇಗವಾಗಿ ತೆರಳುತ್ತಿದ್ದರು
  • ಕಾಲೇಜು ಕ್ರಾಸ್ ಬಳಿ ಭೀಕರ ರಸ್ತೆ ಅಪಘಾತ, ಯುವಕ ಸಾವು
  • ಸುರಸದ್ಮಗಿರಿ ಬೆಟ್ಟಕ್ಕೆ ಟ್ರಕ್ಕಿಂಗ್​ಗೆ ಹೋಗುವಾಗ ನಡೆದ ಅಪಘಾತ

ಚಿಕ್ಕಬಳ್ಳಾಪುರ: ಬೊಲೆರೋ ವಾಹನಕ್ಕೆ ಭೀಕರವಾಗಿ ಬೈಕ್​ ಡಿಕ್ಕಿಯಾದ ಪರಿಣಾಮ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಪೆರೇಸಂದ್ರ -ಗುಡಿಬಂಡೆ ಮಾರ್ಗದ ಅಚ್ಚುತ್ ಕಾಲೇಜು ಕ್ರಾಸ್ ಬಳಿ ದುರ್ಘಟನೆ ನಡೆದಿದೆ.

ಇದನ್ನೂ ಓದಿ: ಮಾಜಿ ಸಚಿವ ನಾಗೇಂದ್ರ ED ಕಸ್ಟಡಿಗೆ.. 13 ಮಂದಿ ಅರೆಸ್ಟ್​, ಎಲ್ಲಿದ್ದಾರೆ ಇನ್ನೂ 8 ಆರೋಪಿಗಳು..?

ಹೊಸಕೋಟೆ ತಾಲೂಕಿನ ಬಿದರಹಳ್ಳಿ ಗ್ರಾಮದ ಮಲ್ಲಿಕಾರ್ಜುನ ರೆಡ್ಡಿ (23) ಮೃತ ದುರ್ದೈವಿ. ವೀಕೆಂಡ್ ಮೋಜು-ಮಸ್ತಿಗಾಗಿ ಟ್ರಕ್ಕಿಂಗ್​ಗೆ ಸ್ನೇಹಿತರೊಂದಿಗೆ ಹೋಗುತ್ತಿದ್ದ. ಗುಡಿಬಂಡೆ ಸುರಸದ್ಮಗಿರಿ ಬೆಟ್ಟಕ್ಕೆ ಟ್ರೆಕ್ಕಿಂಗ್​​ಗೆ ಎಂದು ಪೆರೇಸಂದ್ರ -ಗುಡಿಬಂಡೆ ಮಾರ್ಗದಲ್ಲಿ ವೇಗವಾಗಿ ಬೈಕ್​ನಲ್ಲಿ ಹೋಗುವಾಗ ಅಪಘಾತ ಸಂಭವಿಸಿದೆ. ಪರಿಣಾಮ ಸ್ಥಳದಲ್ಲೇ ಯುವಕ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ:ಟೀಮ್ ಇಂಡಿಯಾ ಪಾಕ್ ಪ್ರವಾಸ ಮಾಡುತ್ತಾ.. ಇಲ್ಲ, ಚಾಂಪಿಯನ್ಸ್ ಟ್ರೋಫಿಯಿಂದಲೇ ಹಿಂದೆ ಸರಿಯುತ್ತಾ?

ಅತಿ ವೇಗವಾಗಿ ಬಂದು ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಕೂಡ ನಜ್ಜುಗುಜ್ಜಾಗಿದೆ. ಯುವಕನ ಮೃತದೇಹವನ್ನು ಗುಡಿಬಂಡೆ ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮಲ್ಲಿಕಾರ್ಜುನ್ ಸಾವಿಗೆ ಸ್ನೇಹಿತರು ಕಂಬನಿ ಮಿಡಿದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment