/newsfirstlive-kannada/media/post_attachments/wp-content/uploads/2024/07/accident-3.jpg)
ಮಂಡ್ಯ: ಬೈಕ್ ಹಾಗೂ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ ಸ್ಥಳದಲ್ಲೇ ಬೈಕ್ ಸವಾರ ದಾರುಣ ಸಾವನ್ನಪ್ಪಿರೋ ಘಟನೆ ಮಾರ್ಕಾಲು ಗೇಟ್ನ ಮೈಸೂರು-ಮಳವಳ್ಳಿ ಹೆದ್ದಾರಿಯಲ್ಲಿ ನಡೆದಿದೆ. ಕೊದೇನಕೊಪ್ಪಲು ಗ್ರಾಮದ ಮಾದೇಗೌಡ (63) ಮೃತ ಬೈಕ್ ಸವಾರ.
ಇದನ್ನೂ ಓದಿ:ರಾಮನಗರದಲ್ಲಿ ತಾಯಿ, ಮಗನ ದುರಂತ.. ಸಾವಿನಲ್ಲೂ ಒಂದಾದ ಇಬ್ಬರು; ಆ ಕೋಣೆಯಲ್ಲಿ ಆಗಿದ್ದೇನೆ?
ಒಂದೇ ಬೈಕ್ನಲ್ಲಿ ಮಾದೇಗೌಡ ಹಾಗೂ ಬಸವೇಗೌಡ ಹೋಗುತ್ತಿದ್ದರು. ಇದೇ ವೇಳೆ ಹಿಂಬದಿಯಿಂದ ವೇಗವಾಗಿ ಬಂದ ಲಾರಿ ಬೈಕ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಬೈಕ್ ಸವಾರ ಮಾದೇಗೌಡ ಲಾರಿ ಚಕ್ರದಡಿ ಸಿಲುಕಿದ ಅರ್ಧ ದೇಹ ಛಿದ್ರ ಛಿದ್ರಗೊಂಡಿದೆ. ಹಿಂಬದಿ ಸವಾರನ ಕಾಲುಗಳು ಕಟ್ ಆಗಿದೆ.
ಆದರೆ ಅಪಘಾತದಲ್ಲಿ ಕಾಲುಗಳನ್ನು ಕಳೆದುಕೊಂಡ ಬಸವೇಗೌಡ ರಸ್ತೆಯಲ್ಲಿಯೇ ನರಳಾಡುತ್ತಿದ್ದರು ಸಾರ್ವಜನಿಕರು ಸಹಾಯಕ್ಕೆ ಬಂದಿಲ್ಲ. ಆದರೆ ಕೂಡಲೇ ಸ್ಥಳಕ್ಕೆ ಆಗಮಿಸಿದ ಕಿರುಗಾವಲು ಠಾಣೆಯ ಪಿಎಸ್ಐ ಡಿ.ರವಿಕುಮಾರ್ ತಮ್ಮ ಕಾರಿನಲ್ಲಿ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ. ಈ ಘಟನೆ ಸಂಬಂಧ ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ