Advertisment

ಬೈಕ್, ಆಟೋ, ಕಾರು, ಜೀಪ್‌.. ರೇಣುಕಾಸ್ವಾಮಿ ಕೊಲೆ ಕೇಸ್‌ಗೆ ಟ್ವಿಸ್ಟ್ ಕೊಟ್ಟ ವಾಹನಗಳು ಜಪ್ತಿ; ಮುಂದೇನು?

author-image
admin
Updated On
ಬೈಕ್, ಆಟೋ, ಕಾರು, ಜೀಪ್‌.. ರೇಣುಕಾಸ್ವಾಮಿ ಕೊಲೆ ಕೇಸ್‌ಗೆ ಟ್ವಿಸ್ಟ್ ಕೊಟ್ಟ ವಾಹನಗಳು ಜಪ್ತಿ; ಮುಂದೇನು?
Advertisment
  • ಬೈಕ್, ಕಾರಿನಲ್ಲಿ ಪಟ್ಟಣಗೆರೆ ಶೆಡ್‌ಗೆ ಬಂದಿದ್ದ ಆರೋಪಿಗಳು
  • ಆರೋಪಿಗಳು ಓಡಾಡಿದ್ದ ಬೈಕ್​​ಗಳು, ಶವ ಸಾಗಿಸಿದ ಕಾರು ಜಪ್ತಿ
  • 5 RTO ಅಧಿಕಾರಿಗಳಿಗೆ ಪತ್ರ ಬರೆದ ಪೊಲೀಸ್ ಅಧಿಕಾರಿಗಳು

ಬೆಂಗಳೂರು: ದರ್ಶನ್ ಅಂಡ್ ಗ್ಯಾಂಗ್​ನಿಂದ ಕೊಲೆಯಾದ ರೇಣುಕಾಸ್ವಾಮಿ ಪ್ರಕರಣದ ತನಿಖೆ ಮತ್ತಷ್ಟು ಚುರುಕಾಗಿದೆ. ಕೊಲೆ ಕೇಸ್​ ಸಂಬಂಧ ಇದುವರೆಗೂ 9 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. 9 ವಾಹನಗಳನ್ನು ಆರೋಪಿಗಳು ಕೊಲೆ ಹಾಗೂ ಕೊಲೆಯ ಬಳಿಕ ಮೃತದೇಹ ಸಾಗಿಸಲು ಬಳಕೆ ಮಾಡಿದ್ದಾರೆ. ಕೆಲವು ವಾಹನಗಳು ಆರೋಪಿಗಳ ಹೆಸರಲ್ಲಿದ್ದರೆ ಉಳಿದ ವಾಹನಗಳ ಮಾಲೀಕರೇ ಬೇರೆ, ಬೇರೆ ಆಗಿದ್ದಾರೆ.

Advertisment

ರೇಣುಕಾಸ್ವಾಮಿ ಕೊಲೆ ವೇಳೆ ಆರೋಪಿಗಳು ಬೈಕ್ ಹಾಗೂ ಕಾರಿನಲ್ಲಿ ಪಟ್ಟಣಗೆರೆ ಶೆಡ್‌ಗೆ ಬಂದಿದ್ದರು. ಆಮೇಲೆ ಬೇರೆ, ಬೇರೆ ಬೈಕ್​​ಗಳಲ್ಲಿ ಆರೋಪಿಗಳು ಓಡಾಡಿದ್ದಾರೆ. ಹೀಗೆ ಕೊಲೆ ಆರೋಪಿಗಳು ಓಡಾಡಿದ್ದ ಬೈಕ್​​ಗಳು, ಶವ ಸಾಗಿಸಿದ ಕಾರನ್ನು ಜಪ್ತಿ ಮಾಡಲಾಗಿದೆ.

ಇದನ್ನೂ ಓದಿ: BREAKING: ಜೈಲೂಟ ಸಾಕಪ್ಪ ಸಾಕು.. ಹೈಕೋರ್ಟ್‌ ಮೆಟ್ಟಿಲೇರಿದ ದರ್ಶನ್‌; ಮನೆ ಊಟದ ಜೊತೆ ಏನೇನು ಕೇಳಿದ್ರು? 

ಆರೋಪಿಗಳಾದ ಧನರಾಜ್​ನ ಡಿಯೋ ಬೈಕ್​​, ನಂದೀಶ್ ಹೋಂಡಾ ಆ್ಯಕ್ಟಿವಾ ಬೈಕ್, ದೀಪಕ್​ಗೆ ಸೇರಿದ ಆ್ಯಕ್ಟಿವಾ ಬೈಕ್, ಪವನ್​ನ​​ ಜ್ಯೂಪಿಟರ್ ಬೈಕ್, ​​​ಪ್ರದೂಷ್​​ಗೆ ಸೇರಿದ ಕಾರು, ವಿನಯ್​ಗೆ ಸೇರಿದ ಒಂದು ಜೀಪ್‌ ಅನ್ನು ವಶಪಡಿಸಿಕೊಳ್ಳಲಾಗಿದೆ.

Advertisment

publive-image

ಕೊಲೆ ವೇಳೆ ಆರೋಪಿಗಳು ಧನರಾಜ್ & ನಂದೀಶ್ ತಮ್ಮ ಹೆಸರಿನಲ್ಲಿರುವ ಸ್ವಂತ ಬೈಕ್‌ಗಳನ್ನೇ ಬಳಕೆ ಮಾಡಿದ್ದಾರೆ. ಉಳಿದ ಆರೋಪಿಗಳು ಬೇರೆಯವರ ಹೆಸರಲ್ಲಿದ್ದ ಬೈಕ್​ ಬಳಸಿದ್ದಾರೆ. ಹೀಗಾಗಿ ಇಷ್ಟು ವಾಹನಗಳ ಮೂಲ ಮಾಲೀಕರ ಮಾಹಿತಿ ನೀಡುವಂತೆ ಪತ್ರ ಪೊಲೀಸರು ಆರ್‌ಟಿಓ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ಇದನ್ನೂ ಓದಿ: ದರ್ಶನ್ ಜೈಲು ಸೇರಿದಕ್ಕೆ ನೋವಲ್ಲಿರೋ ಡೈನಾಮಿಕ್ ಫ್ಯಾಮಿಲಿ.. ದಾಸನ ಪರ ಬ್ಯಾಟ್​ ಬೀಸ್ತಿರೋ ಸ್ಯಾಂಡಲ್​ವುಡ್ 

ಜಪ್ತಿ ಮಾಡಿರೋ ವಾಹನಗಳ ಮೂಲ ಮಾಲೀಕರಿಗೆ ನೋಟಿಸ್ ನೀಡಲು ಮುಂದಾಗಿರುವ ಪೊಲೀಸರು ವಿಚಾರಣೆ ನಡೆಸಲು ಸಿದ್ಧತೆ ನಡೆಸಿದ್ದಾರೆ. ಜಪ್ತಿಯಾದ ವಾಹನಗಳ ಮಾಹಿತಿ ಕೇಳಿ ರಾಜಾಜಿನಗರ, ಯಶವಂತಪುರ, ಕೋರಮಂಗಲ, ಇಂದಿರಾನಗರ, ತುಮಕೂರು RTO ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಯಾರ ಹೆಸರಲ್ಲಿ ವಾಹನ ಇದೆ ಅಂತ ಮಾಹಿತಿ ನೀಡುವಂತೆ ಕೋರಲಾಗಿದೆ. ಕೊಲೆ ಆರೋಪಿಗಳಿಗೆ ಬೈಕ್ ಕೊಡಲು ಕಾರಣವೇನು? ಆರೋಪಿಗೂ ನಿಮಗೂ ಏನು ಸಂಬಂಧ? ಯಾವ ಕಾರಣಕ್ಕೆ ಬೈಕ್ ಕೊಟ್ಟಿದ್ರಿ ಎಂದು ವಿಚಾರಣೆ ನಡೆಸಲಾಗುತ್ತಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment