ಫ್ಲೈಓವರ್​ಗೆ ಭಯಾನಕವಾಗಿ ಬೈಕ್ ಡಿಕ್ಕಿ.. ಗಾಳಿಯಲ್ಲಿ ರೈಡರ್ಸ್​ ಹಾರಿ, ಕೆಳಗಿನ ರಸ್ತೆಗೆ ಬಿದ್ದು ಸಾವು

author-image
Bheemappa
Updated On
ಫ್ಲೈಓವರ್​ಗೆ ಭಯಾನಕವಾಗಿ ಬೈಕ್ ಡಿಕ್ಕಿ.. ಗಾಳಿಯಲ್ಲಿ ರೈಡರ್ಸ್​ ಹಾರಿ, ಕೆಳಗಿನ ರಸ್ತೆಗೆ ಬಿದ್ದು ಸಾವು
Advertisment
  • ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ್ದ ಪೊಲೀಸರು
  • ಕೆಲಸದ ನಿಮಿತ್ತ ಹೋಗುತ್ತಿದ್ದವ್ರು ಮೇಲ್ಸೇತುವೆ ಮೇಲಿಂದ ಬಿದ್ದರು
  • ಗಾಳಿಯಲ್ಲಿ ಹಾರಿಕೊಂಡು ಹೋಗಿ ರಸ್ತೆ ಬಿದ್ದ ಯುವಕರು, ಸಾವು

ಹೈದರಾಬಾದ್: ಕೊತಗುಡ ಫ್ಲೈಓವರ್ ಮೇಲೆ ವೇಗವಾಗಿ ತೆರಳುತ್ತಿದ್ದ ಬೈಕ್​ವೊಂದು ಕೆಳಗೆ ಬಿದ್ದು ಇಬ್ಬರು ಯುವಕರು ಮೃತಪಟ್ಟಿದ್ದಾರೆ. ಹೈದರಾಬಾದ್​ ಸಿಟಿಯಲ್ಲಿರುವ ಕೊತಗುಡ ಮೇಲ್ಸೇತುವೆಯಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ:KL ರಾಹುಲ್​ ಸೇರಿ ಈ ಪ್ಲೇಯರ್ಸ್​ ಓವರ್​ಟೇಕ್​ ಮಾಡ್ತಾರಾ.. ಕಿಶನ್ ಮುಂದಿರೋ 4 ಚಾಲೆಂಜ್​ಗಳೇನು?

ಆಂಧ್ರ ಪ್ರದೇಶದ ಗುಂಟೂರು ಮೂಲದ ಕೆ.ರೋಹಿತ್ (27), ಬಾಲ ಪ್ರಸನ್ (26) ಮೃತಪಟ್ಟ ದುರ್ದೈವಿಗಳು. ಇವರಿಬ್ಬರು ಮಸೀದಿ ಬಂಡಾದಿಂದ ಹಫೀಜ್‌ಪೇಟೆಗೆ ಬೈಕ್​ನಲ್ಲಿ ಕೊತಗುಡ ಫ್ಲೈಓವರ್ ಮೇಲೆ ವೇಗವಾಗಿ ತೆರಳುತ್ತಿದ್ದರು. ಈ ವೇಳೆ ಫ್ಲೈಓವರ್ ಪ್ಯಾರಪೆಟ್‌ಗೆ ಬೈಕ್​ ಡಿಕ್ಕಿಯಾದ ಪರಿಣಾಮ ಮೇಲಿನಿಂದ ಗಾಳಿಯಲ್ಲಿ ಹಾರಿಕೊಂಡು ಇಬ್ಬರು ಕೆಳಗಿನ ರಸ್ತೆಗೆ ಬಿದ್ದಿದ್ದಾರೆ. ಇದರಿಂದ ಸ್ಥಳದಲ್ಲೇ ಯುವಕರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಕೇರಳದ ಕಣ್ಣೀರು.. ಮೃತದೇಹದ ಜೊತೆ ಲಕ್ಷ, ಲಕ್ಷ ಮೌಲ್ಯದ ಮಾಂಗಲ್ಯ ಸರ, ಚಿನ್ನಾಭರಣ ಪತ್ತೆ; ಆಮೇಲೇನಾಯ್ತು?

publive-image

ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಗಚಿಬೌಲಿ ನಗರದ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಯುವಕರು ಹೈದರಾಬಾದ್​ನ ಮಿಯಾಪುರ್​ನಲ್ಲಿ ವಾಸವಿದ್ದರು. ಫ್ಲೈಓವರ್​ ಮೇಲೆ ಅತಿ ವೇಗವಾಗಿ ಬರುವಾಗ ಈ ದುರ್ಘಟನೆ ನಡೆದಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು ಮೃತದೇಹಗಳ ಮರಣೋತ್ತರ ಪರೀಕ್ಷೆಯ ಬಳಿಕ ಕುಟುಂಬಸ್ಥರಿಗೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment