ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದ ಬೈಕ್​.. ಮತ್ತೆ ಎರಡು ಜೀವ ಬಲಿ ಪಡೆದ ವಿಸಿ ನಾಲೆ

author-image
Bheemappa
Updated On
ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದ ಬೈಕ್​.. ಮತ್ತೆ ಎರಡು ಜೀವ ಬಲಿ ಪಡೆದ ವಿಸಿ ನಾಲೆ
Advertisment
  • ದುರಸ್ತಿ ಕಾಮಗಾರಿ ಹಿನ್ನೆಲೆಯಲ್ಲಿ ವಿಸಿ ನಾಲೆಯಲ್ಲಿ ನೀರು ಇರಲಿಲ್ಲ
  • ಮದ್ದೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ
  • ವಿಸಿ ನಾಲೆಯಲ್ಲಿ ನೀರಿಲ್ಲದ ಕಾರಣ ಬಲವಾದ ಪೆಟ್ಟುಗಳು ಬಿದ್ದಿವೆ

ಮಂಡ್ಯ: ಹೇಗಾದರೂ ಮಾಡಿ ಜನರನ್ನು ಬಲಿ ಪಡೆದುಕೊಳ್ಳುವ ವಿಸಿ ನಾಲೆಯೂ ಆಗಾಗ ಸುದ್ದಿಯಲ್ಲಿರುತ್ತದೆ. ಯಾವಾಗಲೂ ಸಾವು ನೋವಿನ ಘಟನೆಗಳಿಂದ ವಿಸಿ ನಾಲೆ ಹೆಸರು ಎಲ್ಲರಿಗೂ ಗೊತ್ತು. ಅದರಂತೆ ಇವತ್ತು ಒಂದು ಘಟನೆ ನಡೆದಿದ್ದು ವಿಸಿ ನಾಲೆಯಲ್ಲೇ ನಡೆದಿದ್ದು ಇಬ್ಬರು ಜೀವ ಕಳೆದುಕೊಂಡಿದ್ದಾರೆ.

ತುಮಕೂರು ಮೂಲದ ರಾಮಣ್ಣ ( 70), ಮದ್ದೂರಿನ ಸೋಮಹಳ್ಳಿ ಗ್ರಾಮದ ಭರತ್ (19) ಮೃತ ಬೈಕ್ ಸವಾರರು. ಇವರಿಬ್ಬರು ಬೈಕ್​ನಲ್ಲಿ ಸೋಮನಹಳ್ಳಿಯಿಂದ ಶಿವಪುರಕ್ಕೆ ಹೋಗುತ್ತಿದ್ದರು. ಈ ವೇಳೆ ಬೈಕ್ ನಿಯಂತ್ರಣ ತಪ್ಪಿ ನಾಲೆಗೆ ಬಿದ್ದ ಕಾರಣ ಸವಾರರು ಇಬ್ಬರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹೊಸಗಾವಿ ಬಳಿ ಈ ಘಟನೆ ನಡೆದಿದೆ.

ಇದನ್ನೂ ಓದಿ: CA ಪರೀಕ್ಷೆಯ ರಿಸಲ್ಟ್​ ಔಟ್​.. ಇಡೀ ದೇಶಕ್ಕೆ ಪ್ರಥಮ ಸ್ಥಾನ ಪಡೆದ ರಾಜನ್ ಕಬ್ರಾ!

publive-image

ವಿಸಿ ನಾಲೆಯ ತಡೆಗೆ ಡಿಕ್ಕಿ ಹೊಡೆದು ಸವಾರರು ಬಿದ್ದಿದ್ದಾರೆ. ನಾಲೆ ದುರಸ್ತಿ ಕಾಮಗಾರಿ ಹಿನ್ನೆಲೆಯಲ್ಲಿ ನೀರನ್ನು ನಿಲ್ಲಿಸಲಾಗಿತ್ತು. ಹೀಗಾಗಿ ಬೈಕ್​ನಿಂದ ಕಾಲುವೆ ಬಿದ್ದಿದ್ದರಿಂದ ಬಲವಾದ ಪೆಟ್ಟುಗಳು ದೇಹಕ್ಕೆ ತಗುಲಿ ಜೀವ ಕಳೆದುಕೊಂಡಿದ್ದಾರೆ. ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಈ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment