ಬೈಕ್​ ಪಾರ್ಕಿಂಗ್​ ಗಲಾಟೆ; ವಿಜ್ಞಾನಿಯ ಉಸಿರನ್ನೇ ನಿಲ್ಲಿಸಿದ ಖದೀಮ.. ಅಸಲಿಗೆ ಏನಾಯಿತು?

author-image
Bheemappa
Updated On
ಬೈಕ್​ ಪಾರ್ಕಿಂಗ್​ ಗಲಾಟೆ; ವಿಜ್ಞಾನಿಯ ಉಸಿರನ್ನೇ ನಿಲ್ಲಿಸಿದ ಖದೀಮ.. ಅಸಲಿಗೆ ಏನಾಯಿತು?
Advertisment
  • ವಿದೇಶದಲ್ಲಿ ಸಖತ್ ಹೆಸರು ಮಾಡಿ ಭಾರತಕ್ಕೆ ವಾಪಸ್ ಆಗಿದ್ದರು
  • ಕೇಸ್​ ದಾಖಲಿಸಿಕೊಂಡ ಪೊಲೀಸರು ತನಿಖೆ ಶುರು ಮಾಡಿದ್ದಾರೆ
  • ಪಾರ್ಕಿಂಗ್ ವಿಚಾರಕ್ಕೆ ಅಕ್ಕಪಕ್ಕದ ಮನೆಯವರ ನಡುವೆ ಗಲಾಟೆ

ಪಾರ್ಕಿಂಗ್ ವಿಚಾರಕ್ಕೆ ಅನೇಕ ಕಡೆಗಳಲ್ಲಿ ಆಗಾಗ ಗಲಾಟೆಗಳಾಗಿ ಪೊಲೀಸ್ ಠಾಣೆಗೆ ಹೋಗಿರೋದನ್ನ ನೋಡಿದ್ದೇವೆ. ಇದೀಗ ಬಾಡಿಗೆ ಮನೆಯ ಬಳಿ ಪಾರ್ಕಿಂಗ್‌ ವಿಚಾರಕ್ಕೆ ಆದ ಗಲಾಟೆಯಲ್ಲಿ ನೆರೆ ಮನೆಯವನಿಂದ ಹಲ್ಲೆಗೊಳಗಾಗಿದ್ದ ವಿಜ್ಞಾನಿಯೊಬ್ಬರ ಉಸಿರನ್ನೇ ನಿಲ್ಲಿಸಿದೆ. ಆ ರಾತ್ರಿ ಆಗಿದ್ದೇನು?.

ವಿಜ್ಞಾನಿಯೊಬ್ಬರ ಜೀವ ಅಂತ್ಯವಾಗಿರುವ ಘಟನೆ ಪಂಜಾಬ್​​ನಲ್ಲಿ ನಡೆದಿದೆ. ಮನೆಯ ಬಳಿ ಅಷ್ಟೆ ಪಾರ್ಕಿಂಗ್ ವಿಚಾರಕ್ಕೆ ಅಕ್ಕಪಕ್ಕದ ಮನೆಯವರ ನಡುವೆ ಗಲಾಟೆ ನಡೆದಿದೆ. ಆ ಜಗಳ ವಿಕೋಪಕ್ಕ ತಿರುಗಿ ಜೀವ ನಿಲ್ಲಿಸುವಲ್ಲಿ ಅಂತ್ಯವಾಗಿದೆ.

publive-image

ಅಭಿಷೇಕ್ ಸ್ವರ್ಣಕರ್, ವಿದೇಶದಲ್ಲಿ ಸಖತ್ ಹೆಸರು ಮಾಡಿದ್ದ ವಿಜ್ಞಾನಿ. ರಾತ್ರಿ ಅಭಿಷೇಕ್ ಸ್ವರ್ಣಕರ್ ತಮ್ಮ ಬೈಕ್ ನಿಲ್ಲಿಸುತ್ತಿದ್ದಾಗ ನೆರೆಮನೆಯ ಮಾಂಟಿ ಕಿರಿಕ್​ ಮಾಡಿದ್ದಾನೆ. ಇಬ್ಬರ ನಡುವೆ ವಾಗ್ವಾದ ಶುರುವಾಗಿದೆ. ಸ್ವರ್ಣಕರ್​ರನ್ನ ಮಾಂಟಿ ತಳ್ಳಿದ್ದಾನೆ. ಜೋರಾಗಿ ತಳ್ಳಿದ್ರಿಂದ ಸ್ವರ್ಣಕರ್ ರಸ್ತೆಗೆ ಬಿದ್ದಿದ್ದಾರೆ. ಇನ್ನೂ ಜಗಳವಾಗ್ತಿರೊ ಸೌಂಡ್​ ಕೇಳ್ತಿದ್ದಂತೆ ಮನೆಯವರೆಲ್ಲ ಹೊರಗೆ ಬಂದಿದ್ದಾರೆ. ಅಷ್ಟರಲ್ಲಿ ಮಾಂಟಿ ಓಡಿ ಹೋಗಿದ್ದ.

ವಿಜ್ಞಾನಿ ಸ್ವರ್ಣಕರ್, ಮೊದಲು ಕೆಲವರ ಸಹಾಯದಿಂದ ಎದ್ದು ನಿಂತಿದ್ದರು. ಆದ್ರೆ, ಮತ್ತೆ ಕುಸಿದು ಬಿದ್ದಿದ್ದಾರೆ. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಷ್ಟೊತ್ತಿಗೆ ಸ್ವರ್ಣಕರ್​​​​ ಉಸಿರು ನಿಂತೋಗಿದೆ.

ಪಾರ್ಕಿಂಗ್​​ಗಾಗಿ ವಿಜ್ಞಾನಿಯ ಜೀವ ಅಂತ್ಯ

  • ಪೋಷಕರ ಜೊತೆಯಲ್ಲಿ ಮೊಹಾಲಿಯ ಸೆಕ್ಟರ್ 67ರಲ್ಲಿ ವಾಸ
  • ಮಾಂಟಿ ಎಂಬಾತನ ಜೊತೆ ಪಾರ್ಕಿಂಗ್ ವಿಚಾರಕ್ಕೆ ವಾಗ್ವಾದ
  • ಧನ್ಬಾದ್‌ನವರಾದ ಅಭಿಷೇಕ್ ಸ್ವರ್ಣಕರ್​ ಒಬ್ಬ ವಿಶಿಷ್ಟ ವಿಜ್ಞಾನಿ
  • ಸ್ವಿಟ್ಜರ್‌ಲ್ಯಾಂಡ್​ನಿಂದ ಭಾರತಕ್ಕೆ ವಾಪಸ್, IISERನಲ್ಲಿ ಕೆಲಸ
  • ಕಿಡ್ನಿ ಕಸಿ ಚಿಕಿತ್ಸೆಗೆ ಒಳಗಾಗಿದ್ದ ವಿಜ್ಞಾನಿ ಅಭಿಷೇಕ್ ಸ್ವರ್ಣಕರ್
  • ಅಭಿಷೇಕ್​ ಸ್ವರ್ಣಕರ್​ಗೆ ಸಹೋದರಿ ಕಿಡ್ನಿ ದಾನ ಮಾಡಿದ್ದರು
  • ಆಪರೇಷನ್​ ಆಗಿದ್ದ ಕಾರಣ ಸ್ವರ್ಣಕರ್ ಡಯಾಲಿಸಿಸ್‌ನಲ್ಲಿದ್ರು
  • ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿತ್ತಾದ್ರೂ ಆಸ್ಪತ್ರೆಯಲ್ಲಿ ನಿಧನ

ಇದನ್ನೂ ಓದಿ: ಇಂದು ಅಪ್ಪು ಸಿನಿಮಾ ರೀ ರಿಲೀಸ್, ಕ್ರೇಜ್ ಏನು ಕಡಿಮೆ ಇಲ್ಲ.. ಪುನೀತ್ ರಾಜ್​ಕುಮಾರ್ ಫ್ಯಾನ್ಸ್​ ಸಂಭ್ರಮ

publive-image

ಸದ್ಯ ಆರೋಪಿ ಮಾಂಟಿ ಎಸ್ಕೇಪ್​ ಆಗಿದ್ದಾನೆ. ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ವಿಜ್ಞಾನಿ ಕುಟುಂಬ ಒತ್ತಾಯಿಸಿದೆ. ಬಿಎನ್​​ಎಸ್​​ 105 ಅಡಿ ಉದ್ದೇಶ ಪೂರ್ವಕವಲ್ಲದ ಹತ್ಯೆ ಪ್ರಕರಣ ಎಂದು ದಾಖಲಿಸಲಾಗಿದೆ. ಕೇಸ್​ ದಾಖಲಿಸಿಕೊಂಡಿರೋ ಪೊಲೀಸರು ತನಿಖೆ ಶುರು ಮಾಡಿದ್ದಾರೆ.

ವಿಜ್ಞಾನಿಯ ದುರಂತ ಅಂತ್ಯವೂ ಪ್ರಮುಖ ನಗರಗಳಲ್ಲಿ ಪಾರ್ಕಿಂಗ್ ವಿಚಾರಕ್ಕೆ ನಡೆಯುವ ಗಲಾಟೆಗಳು ಹೇಗೆ ಹಿಂಸಾತ್ಮಕವಾಗುತ್ತಿವೆ ಎಂಬುದಕ್ಕೆ ಮತ್ತೊಂದು ಉದಾಹರಣೆಯಾಗಿದೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment