newsfirstkannada.com

ಬೈಕ್ ಸರ್ವೀಸ್​ಗೆ ಬಂದಿದ್ದ ಗ್ರಾಹಕನಿಗೆ ಚೂಪಾದ ಆಯುಧದಿಂದ ಚುಚ್ಚಿದ​ ಮಾಲೀಕ.. ಯುವಕ ಸಾವು

Share :

Published February 6, 2024 at 8:48am

  ಬೈಕ್​ ಸರ್ವೀಸ್​ಗೆ ಬಂದಿದ್ದವನ ಮೇಲೆ ಹಲ್ಲೆ ಮಾಡಿದ್ದ ಮಾಲೀಕ

  ಮೈಸೂರು ರಸ್ತೆಯಲ್ಲಿರುವ ಕೊಡಗನ ಮೋಟಾರ್ಸ್ ಬಳಿ ಗಲಾಟೆ

  ಗಲಾಟೆ ವಿಕೋಪಕ್ಕೆ ತಿರುಗಿದಾಗ ಚೂಪಾದ ಆಯುಧದಿಂದ ಚುಚ್ಚಿದ

ಕೊಡಗು: ಬೈಕ್ ಸರ್ವೀಸ್​ಗೆ ಬಂದಿದ್ದ ಯುವಕನ ಮೇಲೆ ಶೋರೂಮ್​​ ಮಾಲೀಕ ಹಲ್ಲೆ ಮಾಡಿದ್ದ ವಿಚಾರಕ್ಕೆ ಸಂಬಂಧಸಿದ್ದಂತೆ ಯುವಕ ಸಾವನ್ನಪ್ಪಿದ್ದಾನೆ. ಈ ಘಟನೆ ಕುಶಾಲನಗರದ ಮೈಸೂರು ರಸ್ತೆಯಲ್ಲಿನ ಕೊಡಗನ ಮೋಟಾರ್ಸ್ ಬಳಿ ನಡೆದಿದೆ.

ಮಡಿಕೇರಿಯ ಗಣಪತಿ ಬೀದಿ‌ ನಿವಾಸಿ ವೆಲ್ಡರ್ ಸಾಜಿದ್ ( 22) ಮೃತ ದುರ್ದೈವಿ. ಶೋರೂಮ್ ಮಾಲೀಕ ಶ್ರೀನಿಧಿ ಹಲ್ಲೆ ಮಾಡಿದ್ದ ವ್ಯಕ್ತಿ. ಕುಶಾಲನಗರದ ಮೈಸೂರು ರಸ್ತೆಯಲ್ಲಿನ ಕೊಡಗನ ಮೋಟಾರ್ಸ್​ಗೆ ಯುವಕ ಬೈಕ್ ಸರ್ವೀಸ್​ಗೆ ಬಂದಿದ್ದನು. ಈ ವೇಳೆ ಯುವಕ ಮತ್ತು ಶೋರೂಂಮ್ ಮಾಲೀಕ ಮಧ್ಯೆ ಗಲಾಟೆ ನಡೆದಿದೆ. ಗಲಾಟೆ ವಿಕೋಪಕ್ಕೆ ತಿರುಗಿದ್ದರಿಂದ ಮಾಲೀಕ ಚೂಪಾದ ಆಯುಧದಿಂದ ಯುವಕನ ಎದೆಗೆ ಇರಿದಿದ್ದನು.

ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಯುವಕನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದ್ರೆ ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದ್ದಿದ್ದರಿಂದ ಗಾಯಾಳುವನ್ನು ಮೈಸೂರು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಕುಶಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೈಕ್ ಸರ್ವೀಸ್​ಗೆ ಬಂದಿದ್ದ ಗ್ರಾಹಕನಿಗೆ ಚೂಪಾದ ಆಯುಧದಿಂದ ಚುಚ್ಚಿದ​ ಮಾಲೀಕ.. ಯುವಕ ಸಾವು

https://newsfirstlive.com/wp-content/uploads/2024/02/MDK_Bike_showroom_Murder.jpg

Load More