/newsfirstlive-kannada/media/post_attachments/wp-content/uploads/2025/04/Bike-taxi.jpg)
ಬೆಂಗಳೂರು: ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಅನ್ನೋ ಹಾಗೆ ರಾಜಧಾನಿ ರಸ್ತೆಗಳಲ್ಲಿ ರಾರಾಜಿಸ್ತಿದ್ದ ಬೈಕ್ ಟ್ಯಾಕ್ಸಿಗಳು ಮರೆಯಾಗೋ ಕಾಲ ಬಂದಿದೆ. ಬೈಕ್ ಟ್ಯಾಕ್ಸಿಗಳಿಗೆ ಬ್ರೇಕ್ ಹಾಕಲು ಹೈಕೋರ್ಟ್ ಆದೇಶ ನೀಡಿದೆ. ಇಂದಿನಿಂದ ಬೈಕ್ ಟ್ಯಾಕ್ಸಿಗಳು ರಸ್ತೆಯಲ್ಲಿ ಕಾಣಿಸಿಕೊಂಡ್ರೆ ಸಾರಿಗೆ ಇಲಾಖೆ ಬೇಟೆಗೆ ಬಲಿಯಾಗೋದು ಖಚಿತವಾಗಿದೆ.
ಬೈಕ್ ಟ್ಯಾಕ್ಸಿ.. ರಾಜಧಾನಿಯ ಆಟೋ ಮತ್ತು ಕ್ಯಾಬ್ ಚಾಲಕರ ಕೆಂಗಣ್ಣಿಗೆ ಗುರಿಯಾದ ವ್ಯವಸ್ಥೆ ಇದು. 2021ರಲ್ಲಿ ಆರಂಭವಾಗಿದ್ದ ಈ ಬೈಕ್ ಟ್ಯಾಕ್ಸಿ ಆಟೋ ಚಾಲಕರು ಮತ್ತು ಕ್ಯಾಬ್ ಚಾಲಕರ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲಲ್ಲಿ ಬೈಕ್ ಟ್ಯಾಕ್ಸಿ ಸವಾರರ ಮೇಲೆ ಹಲ್ಲೆ ಸಹ ನಡೆದಿತ್ತು. ಇಷ್ಟೆಲ್ಲಾ ವಿವಾದದ ಮಧ್ಯೆ ಬೈಕ್ ಟ್ಯಾಕ್ಸಿಗಳಿಗೆ ಬೈ ಬೈ ಹೇಳೋ ಕಾಲ ಬಂದೇ ಬಿಟ್ಟಿದೆ.
ಇದನ್ನೂ ಓದಿ: ಕಾಂತಾರ-1 ಸಿನಿಮಾಗೆ ಸಾಲು, ಸಾಲು ಅವಘಡ.. ಮಾಸ್ತಿ ಕಟ್ಟೆಯಲ್ಲಿ ಮತ್ತೆ ಶೂಟಿಂಗ್ ಆರಂಭ
ಬೈಕ್ ಟ್ಯಾಕ್ಸಿ ಸವಾರರೇ ಕೇರ್ ಫುಲ್.. ಬೀ ಕೇರ್ ಫುಲ್
ಇಂದಿನಿಂದ ರಸ್ತೆಗಿಳಿದ್ರೆ ಸೀಜ್ ಆಗಲಿದೆ ನಿಮ್ಮ ವಾಹನ
ಬೈಕ್ ಟ್ಯಾಕ್ಸಿ ಓಡಾಟಕ್ಕೆ ಹೈಕೋರ್ಟ್ ನೀಡಿದ್ದ ಗಡುವು ನಿನ್ನೆಗೆ ಮುಕ್ತಾಯಗೊಂಡಿದೆ. ಇಂದಿನಿಂದ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳನ್ನ ಸ್ಥಗಿತಗೊಳಿಸುವ ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ.
ಬೆಂಗಳೂರಲ್ಲಿ ಬೈಕ್ ಟ್ಯಾಕ್ಸಿಗೆ ಬ್ರೇಕ್!
ಕಳೆದ ಏಪ್ರಿಲ್ 2ರಂದು ನ್ಯಾಯಾಲಯ ಎಲ್ಲಾ ಬೈಕ್ ಟ್ಯಾಕ್ಸಿ ಸೇವೆಗಳನ್ನು 6 ವಾರಗಳ ಒಳಗೆ ನಿಲ್ಲಿಸುವಂತೆ ಆದೇಶಿಸಿತ್ತು. ನ್ಯಾಯಾಲಯ ನೀಡಿದ್ದ 6 ವಾರಗಳ ಗಡುವು ಮೇ ತಿಂಗಳಲ್ಲಿ ಮುಕ್ತಾಯಗೊಳ್ಳಬೇಕಿತ್ತು. ಅದಾಗ್ಯೂ, ರಾಪಿಡೋ, ಓಲಾ ಮತ್ತು ಉಬರ್ ಸೇರಿದಂತೆ ಬೈಕ್ ಟ್ಯಾಕ್ಸಿ ನಿರ್ವಾಹಕರು ಆದೇಶ ವಿಸ್ತರಣೆ ಕೋರಿ ನ್ಯಾಯಾಲಯದ ಮೆಟ್ಟಿಲೇರಿದರು.
ಈ ವಿನಂತಿಯನ್ನು ಪರಿಗಣಿಸಿದ ನ್ಯಾಯಾಧೀಶರು, ಅಂತಿಮವಾಗಿ ಬೈಕ್ ಟ್ಯಾಕ್ಸಿ ಕಾರ್ಯಾಚರಣೆಯನ್ನ ಸ್ಥಗಿತಗೊಳಿಸಲು ಗಡುವನ್ನು ಜೂನ್ 15ರವರೆಗೆ ವಿಸ್ತರಿಸಿದ್ರು. ಆದರೆ ಬೈಕ್ ಟ್ಯಾಕ್ಸಿಗಳಿಗೆ ಹೊಸ ನಿಯಮಗಳನ್ನು ರೂಪಿಸದ ಕಾರಣ ಮತ್ತೆ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ. ಮುಂದಿನ ವಿಚಾರಣೆಯನ್ನು ಜೂನ್ 24ಕ್ಕೆ ನಿಗದಿಪಡಿಸಲಾಗಿದೆ.
ಈ ಹಿನ್ನೆಲೆ ಅನಧಿಕೃತ ಬೈಕ್ ಟ್ಯಾಕ್ಸಿ ವಿರುದ್ದ ಕ್ರಮಕ್ಕೆ ಮುಂದಾದ ಸಾರಿಗೆ ಇಲಾಖೆ ಮುಂದಾಗಿದೆ. ಇಂದಿನಿಂದ ಕಾರ್ಯಾಚರಣೆಗೆ ಸಾರಿಗೆ ಇಲಾಖೆ ತಂಡ ರಚಿಸಿದೆ. 10 ರಿಂದ 15 ತಂಡಗಳ ರಚನೆ ಮಾಡಿರುವ ಸಾರಿಗೆ ಇಲಾಖೆ ರಸ್ತೆಗಳಿದ ಬೈಕ್ ಟ್ಯಾಕ್ಸಿಗಳನ್ನ ಸೀಜ್ ಮಾಡಲು ಸಿದ್ದತೆ ನಡೆಸಿದೆ.
ರೂಲ್ಸ್ಗಳನ್ನ ಫಾಲೋ ಮಾಡದೇ ಬೇಕಾ ಬಿಟ್ಟಿ ಸವಾರಿ ಮಾಡಿದ ಬೈಕ್ ಟ್ಯಾಕ್ಸಿಗಳಿಗೆ ಇಂದಿನಿಂದ ಬ್ರೇಕ್ ಬೀಳೋದು ಖಚಿತ. ಹಲವರ ಹೊಟ್ಟೆಪಾಡಿಗೆ ದಾರಿಯಾಗಿ, ಕೆಲವರ ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕಿದ್ದ ಬೈಕ್ ಟ್ಯಾಕ್ಸಿಗೆ ಬ್ರೇಕ್ ಬೀಳುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ