/newsfirstlive-kannada/media/post_attachments/wp-content/uploads/2024/12/BIKE-1.jpg)
ಬೆಂಗಳೂರು: ಲವ್ವರ್ ಜೊತೆ ಜಾಲಿ ರೈಡ್ ಹೋಗಲು ಬೈಕ್ ಕದ್ದು ಪೊಲೀಸರ ಕೈಗೆ ಲಾಕ್ ಆಗಿದ್ದಾನೆ. ಆಸೀಫ್ (32) ಬಂಧಿತ ಆರೋಪಿ.
ಅಂದ್ಹಾಗೆ ಇದು ಇತ್ತೀಚೆಗೆ ನಡೆದ ಪ್ರಕರಣ ಅಲ್ಲ. ಸುಮಾರು 10 ವರ್ಷಗಳ ಹಿಂದೆ ನಡೆದ ಪ್ರಕರಣವಾಗಿದೆ. 2014ರಲ್ಲಿ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಬೈಕ್ ಕಳ್ಳತನದ ಪ್ರಕರಣವೊಂದು ದಾಖಲಾಗಿತ್ತು. ದೀರ್ಘಕಾಲದಿಂದ ಪತ್ತೆಯಾಗದ ಪ್ರಕರಣಗಳನ್ನ ಪತ್ತೆ ಹಚ್ಚಲು ಪೊಲೀಸರು ತಂಡ ರಚಿಸಿದ್ದರು. ಈ ವೇಳೆ ಆರೋಪಿ ಆಸೀಫ್ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದರು.
ತನಿಖೆ ವೇಳೆ ಗೊತ್ತಾಗಿದ್ದು ಏನು?
ಸದ್ಯ ಆಸೀಫ್ ಮದುವೆಯಾಗಿ ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದ. ಮೆಜೆಸ್ಟಿಕ್ನಲ್ಲಿ ಆಟೋ ಓಡಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಸಿಕ್ಕ ಬೆನ್ನಲ್ಲೇ, ಪೊಲೀಸರು ಅಲ್ಲಿಗೆ ದೌಡಾಯಿಸಿ ಬಂಧಿಸಿದ್ದಾರೆ. 10 ವರ್ಷದ ಹಿಂದೆ ಆರೋಪಿಗೆ ಪ್ರೇಯಸಿ ಇದ್ದಳು. ಆಕೆಯ ಜೊತೆ ಮಜಾ ಮಾಡಲು ಬೈಕ್ಗಳನ್ನು ಕದಿಯುತ್ತಿದ್ದ. ಜಾಲಿ ರೈಡ್ ಮುಗಿದ ಮೇಲೆ ಬೇರೆ ಸ್ಥಳದಲ್ಲಿ ಬೈಕ್ ನಿಲ್ಲಿಸಿ ಎಸ್ಕೇಪ್ ಆಗ್ತಿದ್ದ. ಜೊತೆಗೆ ಮೋಜು ಮಸ್ತಿ ಮಾಡಲು ಸುಲಭವಾಗಿ ಹಣಗಳಿಸಲು ಕಳ್ಳತನ ಮಾಡುತ್ತಿದ್ದ ಅನ್ನೋದು ತಿಳಿದುಬಂದಿದೆ.
ಬಂಧನದ ಬೆನ್ನಲ್ಲೇ ಆಸೀಫ್ ಹಲವು ಪ್ರಕರಣಗಳಲ್ಲಿ ಇರೋದು ಬೆಳಕಿಗೆ ಬಂದಿದೆ. ಕೆ.ಆರ್.ಮಾರ್ಕೆಟ್, ಉಪ್ಪಾರಪೇಟೆ, ಕಲಾಸಿಪಾಳ್ಯ ಠಾಣೆಗಳ ಕಳ್ಳತನ ಪ್ರಕರಣಗಳು ದಾಖಲಾಗಿವೆ. ಈ ಎಲ್ಲಾ ಪ್ರಕರಣಗಳಲ್ಲೂ ಆಸೀಫ್ ಇರೋದು ಪಕ್ಕಾ ಆಗಿದೆ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ