/newsfirstlive-kannada/media/post_attachments/wp-content/uploads/2025/02/BIKE-THIEF-1.jpg)
ಬೆಂಗಳೂರಿನಲ್ಲೊಬ್ಬ ಖತರ್ನಾಕ್​ ಬೈಕ್ ಕಳ್ಳನನ್ನು ಕೆ.ಆರ್​. ಪುರ ಪೊಲೀಸರು ಬಂಧಿಸಿದ್ದಾರೆ. ಈ ಕಳ್ಳ ಉಳಿದವರಂತೆ ಸಾಮಾನ್ಯ ಕಳ್ಳನಲ್ಲ. ಬೈಕ್ ಕದಿಯುವುದರಲ್ಲಿ ಇವನು ಸೆಂಚುರಿಯನ್ನೇ ಬಾರಿಸಿದ್ದಾನೆ. ಮೂರು ವರ್ಷದಲ್ಲಿ ಈತ ಕಳ್ಳತ ಮಾಡಿದ್ದು ಬರೋಬ್ಬರಿ ನೂರು ಬೈಕ್​ಗಳನ್ನು ಅಂದ್ರೆ ನೀವು ನಂಬಲೇಬೇಕು.
ಆಂಧ್ರಪ್ರದೇಶದ ಬಂಗಾರುಪಾಳ್ಯಂನ ನಿವಾಸಿಯಾದ ಪ್ರಸಾದಬಾಬು ಎಂದು ಈ ಬೈಕ್ ಖದೀಮನನ್ನು ಗುರುತಿಸಲಾಗಿದೆ. ದುಬಾರಿ ಬೈಕ್​ಗಳನ್ನೇ ಟಾರ್ಗೆಟ್​ ಮಾಡ್ತಿದ್ದ ಈತ, ಲಕ್ಷಾಂತರ ರೂಪಾಯಿಯ ಬೈಕ್​ಗಳನ್ನು ಕೇವಲ 15 ರಿಂದ 20 ಸಾವಿರ ರೂಪಾಯಿಗೆ ಮಾರಿಕೊಂಡು ದುಡ್ಡು ಮಾಡಿಕೊಳ್ಳುತ್ತಿದ್ದ. ಮನೆ ಮುಂದೆ ನಿಲ್ಲಿಸಿದ್ದ ಬೈಕ್​ಗಳ ಹ್ಯಾಂಡಲ್​ ಲಾಕ್ ಮುರಿದು ಕಳ್ಳತನ ಮಾಡಿ ಬಂದ ಹಣದಲ್ಲಿಯೇ ಮೋಜು ಮಸ್ತಿ ಮಾಡುತ್ತಿದ್ದ.
/newsfirstlive-kannada/media/post_attachments/wp-content/uploads/2025/02/BIKE-THIEF-2.jpg)
ಇದನ್ನೂ ಓದಿ: ನಟ ದರ್ಶನ್​ಗೆ ಹೈಕೋರ್ಟ್​​ನಿಂದ ಮತ್ತೊಂದು ಬಿಗ್ ರಿಲೀಫ್.. ಏನದು?
ಇನ್ನು ಒಂದು ವಿಚಿತ್ರ ಸಂಗತಿ ಅಂದ್ರೆ ಇವನು ಪ್ರತಿದಿನ ಸಂಜೆ ಬಸ್​​ನಲ್ಲಿ ಬೆಂಗಳೂರಿಗೆ ಬಂದು ತಲುಪುತ್ತಿದ್ದ. ನಂತರ ಕೆ.ಆರ್​.ಪುರ, ಟಿನ್​ ಫ್ಯಾಕ್ಟರಿ, ಮಹದೇವಪುರ ಜನವಸತಿ ಪ್ರದೇಶಗಳಲ್ಲಿ ಓಡಾಡುತ್ತಿದ್ದ. ಮನೆ ಮುಂದೆ ನಿಂತಿರುವ ಬೈಕ್​ಗಳನ್ನು ಕದ್ದು ಬಂದ ದಿನವೇ ಅದೇ ಬೈಕ್​ನಲ್ಲಿ ವಾಪಸ್ ಊರಿಗೆ ಎಸ್ಕೇಪ್ ಆಗುತ್ತಿದ್ದ. ಬೆಂಗಳೂರು, ಚಿತ್ತೂರು, ತಿರುಪತಿ ಸೇರಿ ಹಲವು ಕಡೆ ಈತ ತನ್ನ ಕೈಚಳಕ ತೋರಿಸಿದ್ದಾನೆ.
ಆರೋಪಿ ಪ್ರಸಾದ್​ ಬಾಬು ಸ್ಕ್ರೂಡ್ರೈವರ್​ ಬಳಸಿ ಬೈಕ್​ನ ಲಾಕ್ ಓಪನ್ ಮಾಡುತ್ತಿದ್ದ, ಹೆಡ್​​ಲೈಟ್​​ ಭಾಗದ ಒಳಗೆ ಇರುವ ಎರಡು ವೈರ್​ಗಳನ್ನು ಜೋಡಿಸಿ ಸೆಲ್ಫ್​ಸ್ಟಾರ್ಟ್ ಮಾಡಿ ಬೈಕ್​ ಕದ್ದು ಪರಾರಿಯಾಗುತ್ತಿದ್ದ. ಆತ ಹೇಗೆ ಬೈಕ್ ಕದಿಯುತ್ತಿದ್ದ ಎಂಬುದನ್ನ ಪೊಲೀಸರ ಮುಂದೆಯೇ ಒಂದು ಡೆಮೋ ಮಾಡಿ ತೋರಿಸಿದ್ದಾನೆ. ಒಟ್ಟು 20 ರಾಯಲ್ ಎನ್​​ಫಿಲ್ಡ್​, 30 ಪಲ್ಸರ್ ಬೈಕ್, 40 ಆ್ಯಕ್ಟಿವಾ ಬೈಕ್​ಗಳನ್ನು ಸೇರಿ ಇನ್ನುಳಿದ ಹಲವು ದುಬಾರಿ ಬೈಕ್​ಗಳನ್ನು ಕದ್ದಿದ್ದಾನೆ. ಸದ್ಯ ಪೊಲೀಸರು ಈ ಖತರ್ನಾಕ್ ಕಳ್ಳನನ್ನು ಬಂಧಿಸಿದ್ದು. ಸುಮಾರು 1.45 ಕೋಟಿ ರೂಪಾಯಿ ಮೌಲ್ಯದ 100 ಬೈಕ್ ವಶಕ್ಕೆ ಪಡೆದುಕೊಂಡಿದ್ದು. ಕೆ.ಆರ್​.ಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us