newsfirstkannada.com

ರಸ್ತೆ ದಾಟಲು ವೇಗವಾಗಿ ಓಡಿ ಬಂದ ನೀಲಗಾಯ್,​ ಬೈಕ್​ಗೆ ಡಿಕ್ಕಿ.. ಸವಾರ ಸಾವು

Share :

Published April 16, 2024 at 10:16am

  ತನ್ನ ಪಾಡಿಗೆ ತಾನು ಹೋಗ್ತಿದ್ದಾಗ ನೀಲಗಾಯ್ ಓಡಿ ಬಂದು ಡಿಕ್ಕಿ

  ಘೋರ ಸಾವು! ರಸ್ತೆಯಲ್ಲಿ ವ್ಯಕ್ತಿಯನ್ನ ಬಲಿ ಪಡೆದ ನೀಲಗಾಯ್

  ನೀಲಗಾಯ್ ಡಿಕ್ಕಿ ಹೊಡೆದ ರಭಸಕ್ಕೆ ವ್ಯಕ್ತಿಗೆ ಕೊಂಬು ಚುಚ್ಚಿವೆ

ಮುಂಬೈ: ಬೈಕ್​ಗೆ ನೀಲ​ಗಾಯ್​ ಡಿಕ್ಕಿ ಹೊಡೆದ ಪರಿಣಾಮ ಸವಾರ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಇನಾಯತ್ ನಗರ ಠಾಣಾ ವ್ಯಾಪ್ತಿಯ ಮಿಥೆ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ವಿಜಯಿ ಪಾಠಕ್ ಗ್ರಾಮದ ಮುಕೇಶ್​ ಪಾಂಡ್ಯ (28) ಸಾವನ್ನಪ್ಪಿದ ದುರ್ದೈವಿ. ಬೈಕ್ ಸವಾರ ಪಾಂಡ್ಯ ಇನಾಯತ್ ನಗರ ಮಾರುಕಟ್ಟೆಗೆ ಬೈಕ್​ನಲ್ಲಿ ಹೋಗುತ್ತಿದ್ದರು. ಈ ವೇಳೆ ಮಿಥೆ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಗುತ್ತಿರುವಾಗ ಸಡನ್ ಆಗಿ ನೀಲಗಾಯ್ ರಸ್ತೆ ದಾಟಲು ವೇಗವಾಗಿ ಓಡಿ ಬಂದು ಬೈಕ್​ಗೆ ಡಿಕ್ಕಿ ಹೊಡೆದಿದೆ. ಇದರಿಂದ ಬೈಕ್ ಸವಾರ ರಸ್ತೆಯಲ್ಲೇ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಡಿಕ್ಕಿ ವೇಳೆ ನೀಲಗಾಯ್ ಪ್ರಾಣಿಯ ಕೊಂಬುಗಳು ಸವಾರನ ಎದೆಗೆ ಬಲವಾಗಿ ಚುಚ್ಚಿಕೊಂಡಿದ್ದರಿಂದ ತೀವ್ರವಾಗಿ ಗಾಯಗೊಂಡಿದ್ದನು ಎಂದು ಹೇಳಲಾಗಿದೆ.

ಇದನ್ನೂ ಓದಿ: ಸಂಯುಕ್ತಾ, ಶಶಿಕಲಾ ಜೊಲ್ಲೆ ಗಂಡನಿಗಿಂತ ಶ್ರೀಮಂತರು.. ಇಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರನೂ ಕೋಟ್ಯಾಧಿಪತಿ..!

ಇದನ್ನೂ ಓದಿ: ಚರ್ಚ್ ಒಳಗೆ ಮಾರಣಾಂತಿಕ ಅಟ್ಯಾಕ್, ಧರ್ಮೋಪದೇಶ ಮಾಡ್ತಿದ್ದ ಬಿಷಪ್ ಮೇಲೆ ಚೂರಿ ಇರಿತ

ತಕ್ಷಣ ಸ್ಥಳೀಯರು ಗಾಯಾಳುವನ್ನು ಆಂಬ್ಯುಲೆನ್ಸ್ ಮೂಲಕ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. 5 ವರ್ಷಗಳ ಹಿಂದೆ ಮದುವೆಯಾಗಿದ್ದ ಮುಖೇಶ್​ಗೆ 4 ವರ್ಷದ ಮಗಳಿದ್ದಾಳೆ. ಇನ್ನು ಆಕ್ಸಿಡೆಂಟ್​​ನಲ್ಲಿ ನೀಲ​ಗಾಯ್ ಕೂಡ ಗಾಯಗೊಂಡಿದ್ದು ಹಾಗೇ ಓಡಿ ಹೋಗಿದೆ ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಸ್ತೆ ದಾಟಲು ವೇಗವಾಗಿ ಓಡಿ ಬಂದ ನೀಲಗಾಯ್,​ ಬೈಕ್​ಗೆ ಡಿಕ್ಕಿ.. ಸವಾರ ಸಾವು

https://newsfirstlive.com/wp-content/uploads/2024/04/MH_Nilgai.jpg

Load More