newsfirstkannada.com

ಬ್ಯಾರಿಕೇಡ್​​​ಗೆ ಗುದ್ದಿ ಸೇತುವೆಯಿಂದ ಕೆಳಗೆ ಬಿದ್ದ ಬೈಕ್​ ಸವಾರರು.. ಸ್ಥಳದಲ್ಲೇ ಸಾವು

Share :

Published July 3, 2024 at 10:27am

Update July 3, 2024 at 10:38am

  ಅಪಘಾತದಲ್ಲಿ ಸೇತುವೆಯಿಂದ ಕೆಳಗೆ ಬಿದ್ದ ಬೈಕ್​ ಸವಾರರು

  ಬ್ಯಾರಿಕೇಡ್​ಗೆ ಗುದ್ದಿದ ಪರಿಣಾಮ ಇಬ್ಬರು ಯುವಕರು ಸಾವು

  ಸೇತುವೆಯಿಂದ ಕೆಳಕ್ಕೆ ಬಿದ್ದವರನ್ನು ಕಂಡು ಪೊಲೀಸರಿಗೆ ತಿಳಿಸಿದ ಸ್ಥಳೀಯರು

ಬೈಕ್​ ಸವಾರರಿಬ್ಬರು ಅಪಘಾತದಲ್ಲಿ ಸೇತುವೆಯಿಂದ ಕೆಳಗೆ ಬಿದ್ದು ಪ್ರಾಣ ಚೆಲ್ಲಿದ ಘಟನೆ ಮುಂಬೈನ ಗೋರೆಗಾಂವ್​ನಲ್ಲಿ ನಡೆದಿದೆ. ಸೇತುವೆ ಮೇಲಿದ್ದ ಬ್ಯಾರಿಕೇಡ್​ಗೆ ಗುದ್ದಿದ ಪರಿಣಾಮ ಇಬ್ಬರು ಸವಾರರು ಸೇತುವೆಯಿಂದ ಕೆಳಕ್ಕೆ ಬಿದ್ದಿದ್ದಾರೆ. ಪರಿಣಾಮ ಅಲ್ಲೇ ಉಸಿರು ನಿಲ್ಲಿಸಿದ್ದಾರೆ.

ಸಾವನ್ನಪ್ಪಿದವರನ್ನು 28 ವರ್ಷದ ವೈಭವ್​ ಗ್ರಾಮೆ ಮತ್ತು 21 ವರ್ಷದ ಆನಂದ್​ ಇಂಗಳೆ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ನಾಯಿಗೆ ಡಿಕ್ಕಿ ಹೊಡೆದಿದ್ದೀರಿ ಎಂದು ಹಲ್ಲೆ.. ಕಣ್ಣಿಗೆ ಖಾರದ ಪುಡಿ ಎರಚಿ ಲಕ್ಷಾಂತರ ರೂಪಾಯಿ ದರೋಡೆ

ಸೇತುವೆ ಕೆಳಗೆ ಬಿದ್ದಿರುವ ವ್ಯಕ್ತಿಗಳನ್ನು ಕಂಡು ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ. ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ಸಾವನ್ನಪ್ಪಿದ ಇಬ್ಬರನ್ನು  ಜೋಗೇಶ್ವರಿನಲ್ಲಿರುವ HBT ಟ್ರಾಮಾ ಕೇರ್​ ಸೆಂಟರ್​ಗೆ ಸಾಗಿಸಿದರು.

ಇಬ್ಬರನ್ನು ಪರಿಶೀಲಿಸಿದ ವೈದ್ಯರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು. ಪೊಲೀಸರು ವೈಭವ್​ ಗಾಮ್ರೆ ಮತ್ತು ಆನಂದ್​ ಇಂಗಳೆ ಆಕಸ್ಮಿಕವಾಗಿ ಸಾವನ್ನಪ್ಪಿದ್ದಾರೆ ಎಂದು ದೂರು ದಾಖಲಿಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬ್ಯಾರಿಕೇಡ್​​​ಗೆ ಗುದ್ದಿ ಸೇತುವೆಯಿಂದ ಕೆಳಗೆ ಬಿದ್ದ ಬೈಕ್​ ಸವಾರರು.. ಸ್ಥಳದಲ್ಲೇ ಸಾವು

https://newsfirstlive.com/wp-content/uploads/2024/07/Mumbai.jpg

Load More