/newsfirstlive-kannada/media/post_attachments/wp-content/uploads/2025/07/BNG-BYRATHI.jpg)
ರೌಡಿ ಶೀಟರ್ ಶಿವಪ್ರಕಾಶ್​ ಅಲಿಯಾಸ್​ ಬಿಕ್ಲು ಶಿವ ಪ್ರಕರಣದ ಅಸಲಿ ರಹಸ್ಯ ಪತ್ತೆ ಹಚ್ಚಲು ಪೊಲೀಸರು ಅಖಾಡಕ್ಕಿಳಿಸಿದ್ದಾರೆ. ಕೇಸ್​ನಲ್ಲಿ ಪ್ರಭಾವಿ ಶಾಸಕ ಭೈರತಿ ಹೆಸರು ತಳುಕು ಹಾಕಿಕೊಂಡಿರೋದು, ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಹೀಗಾಗಿ ಬಹಳ ಎಚ್ಚರಿಕೆಯಿಂದ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಈಗಾಗಲೇ ಪೊಲೀಸರು ಐವರು ಶಂಕಿತರನ್ನು ಬಂಧಿಸಿ, ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಇದರ ಬೆನ್ನಲ್ಲೇ ಪ್ರಕರಣ ಬಹಳ ಗಂಭೀರವಾಗಿರುವ ಕಾರಣ ಪ್ರಕರಣದ ತನಿಖಾಧಿಕಾರಿಯನ್ನಾಗಿ ಕೆಜಿಹಳ್ಳಿ ಠಾಣೆಯ ಎಸಿಪಿ ಪ್ರಕಾಶ್ ರಾಥೋಡ್​ರನ್ನು ನೇಮಕ ಮಾಡಲಾಗಿದೆ. ತನಿಖಾಧಿಕಾರಿಯನ್ನಾಗಿ ನೇಮಕ ಮಾಡ್ತಿದ್ದಂತೆ ಎಸಿಪಿ ಪ್ರಕಾಶ್​ ರಾಥೋಡ್​, ಭಾರತೀನಗರ ಪೊಲೀಸರಿಂದ ಕೇಸ್ ಫೈಲ್ ತೆಗೆದುಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.
ಇದನ್ನೂ ಓದಿ: ಸಿಎಂ, ಡಿಸಿಎಂ ಜೊತೆ ಸಮಾಲೋಚನೆ.. ಸಿದ್ದು, ಡಿಕೆಶಿಗೆ ಸುರ್ಜೇವಾಲಾ ಹೇಳಿದ ಕಿವಿ ಮಾತುಗಳು ಏನೇನು..?
ಶಿವಪ್ರಕಾಶ್​ ತಾಯಿಯ ದೂರಿನನ್ವಯ ಶಾಸಕ ಬೈರತಿ ಬಸವರಾಜ್ ಅವರನ್ನು 5ನೇ ಆರೋಪಿಯನ್ನಾಗಿ ಮಾಡಲಾಗಿದೆ. ಸದ್ಯ ಕೆಲವರನ್ನ ವಶಕ್ಕೆ ಪಡೆದು ತನಿಖೆ ಮಾಡಲಾಗುತ್ತಿದ್ದು, ಸಾಕ್ಷಿಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತೆ.. ಸದ್ಯ ಬೇರೆ ಬೇರೆ ಅಯಾಮಗಳಲ್ಲಿ ತನಿಖೆ ಮಾಡಲಾಗುತ್ತಿದೆ…ಎಂದು ನಗರ ಪೊಲೀಸ್ ಆಯುಕ್ತ ಸಿಮಂತ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ.
ಪ್ರಕರಣದಲ್ಲಿ ಬೈರತಿ ಬಸವರಾಜ್ ತಳುಕು ಹಾಕಿಕೊಂಡಿದ್ದು, ಅವರ ರಾಜಕೀಯ ಹಾದಿಗೆ ದೊಡ್ಡ ಸಂಕಷ್ಟವನ್ನು ತಂದೊಡ್ಡಿದೆ. ಸದ್ಯ ಬಂಧನದ ಭೀತಿಯಲ್ಲಿರುವ ಶಾಸಕ ಭೈರತಿ ಬಸವರಾಜ್​, ತಮ್ಮ ಹೆಸರನ್ನ ಆರೋಪಿ ಸ್ಥಾನದಿಂದ ಕೈಬಿಡುವಂತೆ ಕೋರ್ಟ್​ ಮೊರೆ ಹೋಗಿದ್ದಾರೆ. ಕೊ*ಲೆ ಪ್ರಕರಣದಲ್ಲಿ ಬೈರತಿ ಬಸವರಾಜ್ ಸೇರಿಸಿರೋದು ರಾಜಕೀಯ ಪಿತೂರಿ ವಕೀಲ ಪ್ರಶಾಂತ್ ವಾಗ್ದಾಳಿ ನಡೆಸಿದ್ದಾರೆ.
ಒಟ್ಟಾರೆ.. ರೌಡಿ ಶೀಟರ್​ ಬಿಕ್ಲು ಶಿವನ ಹ*ತ್ಯೆ ಹಿಂದಿರುವ ಅಸಲಿ ಕಾರಣವನ್ನು ಪತ್ತೆ ಹಚ್ಚಲು ಪೊಲೀಸರು ಶ್ರಮಿಸುತ್ತಿದ್ದ, ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಇದನ್ನೂ ಓದಿ: ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಿಥುನ ರಾಶಿ ಖ್ಯಾತಿಯ ಯದುಶ್ರೇಷ್ಠ; ಫೋಟೋಸ್​ ಇಲ್ಲಿವೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ