ಬಿಕ್ಲು ಶಿವ ಕೊಲೆ ಕೇಸ್‌- ಶಾಸಕ ಭೈರತಿ ಬಸವರಾಜುರನ್ನು ಪೊಲೀಸ್ ಕಸ್ಟಡಿ ಬಗ್ಗೆ ನಾಳೆ ಆದೇಶ ನೀಡುವ ಕೋರ್ಟ್

ಬೆಂಗಳೂರಿನ ಕೆ.ಆರ್‌.ಪುರ ಕ್ಷೇತ್ರದ ಶಾಸಕ ಭೈರತಿ ಬಸವರಾಜುರನ್ನು ಪೊಲೀಸ್ ಕಸ್ಟಡಿಗೆ ನೀಡಬೇಕೋ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬೇಕೋ ಎಂಬ ಬಗ್ಗೆ ನಾಳೆ ಕೋರ್ಟ್ ಆದೇಶ ನೀಡಲಿದೆ. ಕೆ.ಆರ್‌.ಪುರ ಕ್ಷೇತ್ರದಲ್ಲಿ ಅನಭಿಷಕ್ತ ನಾಯಕರಾಗಿದ್ದ ಭೈರತಿ ಬಸವರಾಜು ಈಗ ಪೊಲೀಸರ ಅತಿಥಿಯಾಗಿದ್ದಾರೆ.

author-image
Chandramohan
Updated On
BYARTHI BASAVARAJ ARREST IN MURDER CASE

ಶಾಸಕ ಭೈರತಿ ಬಸವರಾಜುರನ್ನು 14 ದಿನ ಪೊಲೀಸ್ ಕಸ್ಟಡಿಗೆ ನೀಡಿದ ಕೋರ್ಟ್

Advertisment
  • ರೌಡಿಶೀಟರ್ ಬಿಕ್ಲುಶಿವ ಕೊಲೆ ಕೇಸ್ ನಲ್ಲಿ ಆರೋಪಿಯಾಗಿ ಬಂಧನ
  • ದೇಶ ಸುತ್ತಿ ಕೊನೆಗೆ ಬೆಂಗಳೂರಿಗೆ ಬಂದು ಆರೆಸ್ಟ್ ಆದ ಭೈರತಿ ಬಸವರಾಜು

ಬಿಕ್ಲು ಶಿವನ ಮರ್ಡರ್​ ಕೇಸ್​​ನಲ್ಲಿ ಶಾಸಕ ಬೈರತಿ ಲಾಕ್​ ಆಗಿದ್ದಾರೆ.. ನಿನ್ನೆ ರಾತ್ರಿ ಜೈಲಿನಲ್ಲಿ ನಿದ್ರೆಯಿಲ್ಲದ ಜಾಗರಣೆ ಆಗಿದೆ.. ಮಧ್ಯೆ ಮಧ್ಯೆ ವಿಚಾರಣೆ, ಪ್ರಶ್ನೆಗಳು, ತಲೆ ಬಿಸಿ ತಂದಿವೆ.. ಇನ್ನು, ಇವತ್ತು ಮೆಡಿಕಲ್​ ಚೆಕಪ್​​ ಬಳಿಕ ಕೋರ್ಟ್​ಗೆ ಹಾಜರು ಪಡಿಸಿದ ಪೊಲೀಸರು, ತನಿಖೆಗಾಗಿ ತಮ್ಮ ಕಸ್ಟಡಿಗೆ ಪಡೆದಿದ್ದಾರೆ..
ಬೈರತಿ ಬಸವರಾಜ್.. ಮಾಜಿ ಸಚಿವರು, ಕೆ.ಆರ್. ಪುರಂನ ಫುಲ್ ಪವರ್ ಲೀಡರ್​​​.. ಆದ್ರೆ, ವಿಧಿಯಾಟ ನೋಡಿ, ಬೈರತಿಗೆ ಅದೊಂದು ಕೊಲೆ ಕೋಳ ತೊಡಿಸಿದೆ.. ಬಿಕ್ಲು ಶಿವನ ಮರ್ಡರ್​​ ಕೇಸ್​​ನಲ್ಲಿ ಎಷ್ಟೇ ಎಸ್ಕೇಪ್ ಆದ್ರೂ, ಕೋರ್ಟ್ ಮಾತ್ರ ಸಾಹೇಬ್ರೆ, ಒಂದು ಸಲಿ ಬಂದು ಹೋಗಿ ಅಂತ ವಾರೆಂಟ್ ಕಳಿಸ್ತಾನೆ ಇತ್ತು.. ಯಾವಾಗ ವಾರೆಂಟ್​​ಗೆ ಬಗ್ಗಲಿಲ್ಲವೋ ಬೇಲ್​​​ ವಜಾಗೊಳಿಸಿ ಬಗ್ಗಿಸುವ ಕೆಲಸ ಆಗಿದೆ..
 
ಬಿಕ್ಲು ಶಿವ ಮರ್ಡರ್​​ ಕೇಸ್​​ಗೆ ಸುತ್ತಿದ ಏನಿದು ಬೀದರಹಳ್ಳಿ ಭೂಚಕ್ರ?
ಮಿಸ್ಸಾಗಿದ್ದ ಲಿಂಕ್​​ ಕೆದಕಲಿದೆ ಸಿಐಡಿ, ಬೈರತಿಗೆ ಬೆಂಡೆತ್ತಲು ತಯಾರಿ!
ನೋಡಿ ಸ್ವಾಮಿ, ನನಗೂ ಇದಕ್ಕೂ ಸಂಬಂಧ ಇಲ್ಲ ಅಂತಿದ್ದ ಬೈರತಿಗೆ ಫೋನ್​​ನಲ್ಲಿ ಪಿಸುಗುಟ್ಟಿದ ಮಾತುಗಳೇ ದುಬಾರಿ ಆಗಿಸಿದೆ.. ಸಿಡಿಆರ್​​​ ತೆಗೆಸಿದ ಪೊಲೀಸರು, ಸುಪ್ರೀಂನಿಂದ ಆರ್ಡರ್ ಬಂದಿದ್ದೇ ತಡ, ಫೀಲ್ಡಿಗಿಳಿದು ಬಂಧಿಸಿದ್ದಾರೆ.. ಸಾಹೇಬ್ರು ನೀಟ್​​​ ಆಗಿ ವಿಮಾನ ನಿಲ್ದಾಣಕ್ಕೆ ಬಂದಿಳಿತ್ತಿದ್ದಂತೆ ಪೊಲೀಸ್ರು ಹಾಜರ್ ಆಗಿದ್ರು.. ನೋಡೋಷ್ಟ್ರಲ್ಲೇ ಸೀನ್ ಫುಲ್ ಚೇಂಜ್.. ವಾರೆಂಟ್ ಹಿಡ್ಕೊಂಡು ಬಂದ ಪೊಲೀಸ್ರು ಸಾಹೇಬ್ರನ್ನ ಗಾಡಿಗೆ ಹತ್ತಿಸಿಕೊಂಡು, ಸಿಐಡಿ ಕಚೇರಿಗೆ ತಂದು ಬಿಟ್ಟಿದ್ರು.

ಬೈರತಿಗೆ ವಿಚಾರಣೆ ಬಿಸಿ!
ಶಾಸಕ ಬೈರತಿ ಬಸವರಾಜ್​​​ಗೆ ತಟ್ಟಿದ ಅಸಲಿ ವಿಚಾರಣೆಯ ಬಿಸಿ 
ಭಾರತಿ ನಗರ ಪೊಲೀಸ್ರ ವಿಚಾರಣೆ ವೇಳೆ ಹಾದಿ ತಪ್ಪಿಸಿದ್ದ ಬೈರತಿ
A1 ಜಗ್ಗ ಪರಿಚಯವೇ ಇಲ್ಲ, ಕೊಲೆ ಕೇಸ್​​ ತಮಗೂ ಸಂಬಂಧವಿಲ್ಲ
ಆದ್ರೆ, ಬೈರತಿ ವಿರುದ್ಧ ಸಾಕ್ಷ್ಯಗಳ ಸಂಗ್ರಹಿಸಿದ್ದ ಸಿಐಡಿ ಅಧಿಕಾರಿಗಳು
ಇಬ್ಬರ ಫೋಟೋಗಳು, ಕಾಲ್ ಡೀಟೆಲ್ಸ್, ಟವರ್ ಡಂಪ್ ಸಾಕ್ಷಿ
ಈ ಎಲ್ಲವನ್ನೂ ಮುಂದಿಟ್ಟು ಬೈರತಿಗೆ ವಿಚಾರಣೆ ನಡೆಸುವ ಸಿಐಡಿ  

ಬೈರತಿ ಅಸಲಿ ವಿಚಾರಣೆಯ ಬಿಸಿ ಮುಟ್ಟಿದೆ.. ಭಾರತಿ ನಗರ ಪೊಲೀಸ್ರ ವಿಚಾರಣೆ ವೇಳೆ ತನಿಖಾ ಹಾದಿ ತಪ್ಪಿಸಿದ್ದ ಬೈರತಿ.. A1 ಜಗ್ಗ ಪರಿಚಯವೇ ಇಲ್ಲ ಎಂದು ಹೇಳಿಕೆ ನೀಡಿದ್ರು.. ಕೊಲೆ ಪ್ರಕರಣಕ್ಕೂ ತಮಗೂ ಸಂಬಂಧವಿಲ್ಲ ಅಂತ ಪುಂಗಿದ್ರು.. ಆದ್ರೆ, ಬೈರತಿ ವಿರುದ್ಧ ಹಲವು ಸಾಕ್ಷ್ಯ ಸಂಗ್ರಹಿಸಿದ ಸಿಐಡಿ, ಇಬ್ಬರ ಫೋಟೋಗಳು, ಕಾಲ್ ಡೀಟೆಲ್ಸ್, ಟವರ್ ಡಂಪ್ ಸೇರಿ ಹಲವು ಎವಿಡೆನ್ಸ್ ಕಲೆಹಾಕಿದೆ.. ಈ ಎಲ್ಲವನ್ನೂ ಮುಂದಿಟ್ಟು ಸಿಐಡಿ ಅಧಿಕಾರಿಗಳು ಪ್ರಶ್ನೆ ಮಾಡ್ತಿದ್ದಾರೆ.. 

ರೌಡಿಶೀಟರ್ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಬೈರತಿ
ಜಮೀನು ವಿಚಾರಕ್ಕೆ ಬೈರತಿ-ಬಿಕ್ಲು ಶಿವು ಮಧ್ಯೆ ಆಗಿದ್ದ ಗಲಾಟೆ!
ಬಿಕ್ಲು ಶಿವನ ಜೊತೆ ಬಿಕ್ಕಟ್ಟು ಸೃಷ್ಟಿಸಿಕೊಂಡಿದ್ದ ಬೈರತಿ, ಗಲಾಟೆ ಮಾಡ್ಕೊಂಡಿದ್ರಂತೆ.. ಈ ಕುರಿತು ಬೈರತಿ ವಿರುದ್ಧ ದೂರು ಕೊಟ್ಟ 4 ತಿಂಗಳಲ್ಲಿ ರೌಡಿಶೀಟರ್ ಹತ್ಯೆ ಆಗೋಗಿದೆ.. ಎ1 ಜಗದೀಶ್​ ಅಲಿಯಾಸ್ ಜಗ್ಗನ ಜೊತೆಯಲ್ಲೂ ಬೈರತಿ ಸಂಪರ್ಕ ಹೊಂದಿದ್ದು, ಕೇಸ್​​​ನಲ್ಲಿ ಎ-5 ಆಗೋಗಿದ್ದಾರೆ.. 


ಶಿವ ಶಿವ.. ಢವ ಢವ!
ಜಮೀನು ವಿಚಾರಕ್ಕೆ ಬಿಕ್ಲು ಶಿವ - ಬೈರತಿ ಬೆಂಬಲಿಗರ ಮಧ್ಯೆ ಗಲಾಟೆ
ಬಿದರಹಳ್ಳಿ ಹೋಬಳಿ ಕಿತ್ತಗನೂರು ಸಿಂಗಾರೆಡ್ಡಿಗೆ ಸೇರಿದ ಜಮೀನು
ಸರ್ವೇ ನಂಬರ್ 212 ಅನ್ನ ಜಿಪಿಎ ಮಾಡಿಸಿಕೊಂಡಿದ್ದ ಶಿವಪ್ರಕಾಶ್​​​
ಜಿಪಿಎ ಕ್ಯಾನ್ಸಲ್ ಮಾಡಿ, ಪೊಸಿಷನ್ ಬಿಟ್ಟುಕೊಡಲು ಜಗ್ಗ ಬೆದರಿಕೆ 
ಈ ಬಗ್ಗೆ ಕಳೆದ ವರ್ಷ ಫೆಬ್ರವರಿಯಲ್ಲಿ ಕಮಿಷನರ್​ಗೆ ಬಿಕ್ಲು ಶಿವ ದೂರು
ಬೈರತಿ & ಗ್ಯಾಂಗ್​ನಿಂದ ಜೀವಬೆದರಿಕೆ ಅಂತ ಆರೋಪಿಸಿದ್ದ ಬಿಕ್ಲು ಶಿವ
ಬೆದರಿಕೆ ಹಾಕಿದ್ದ ವಿಡಿಯೋ ಸಮೇತ ದೂರು ನೀಡಿದ್ದ ರೌಡಿಶೀಟರ್
ದೂರಿನಲ್ಲಿ ಶಾಸಕ ಬೈರತಿ, ಜಗ್ಗ, ಕಿರಣ್ ಸಹಚರರ ಹೆಸರು ಉಲ್ಲೇಖ 
ಬಿಕ್ಲು ಶಿವನ ದೂರಿನನ್ವಯ ಭಾರತಿನಗರ ಠಾಣೆಯಲ್ಲಿ ಎಫ್ಐಆರ್ 
ದೂರು ಕೊಟ್ಟ ನಾಲ್ಕೇ ತಿಂಗಳಲ್ಲಿ ಜುಲೈ 15ರಂದು ಬಿಕ್ಲು ಶಿವ ಕೊಲೆ 


ಜಮೀನು ವಿಚಾರಕ್ಕೆ ಬಿಕ್ಲು ಶಿವ & ಬೈರತಿ ಬೆಂಬಲಿಗರ ಮಧ್ಯೆ ಗಲಾಟೆ ಆಗಿತ್ತು.. ಬೀದರಹಳ್ಳಿ ಹೋಬಳಿ ಕಿತ್ತಗನೂರು ಸಿಂಗಾರೆಡ್ಡಿಗೆ ಸೇರಿದ ಜಮೀನು, ಸರ್ವೇ ನಂಬರ್ 212ಅನ್ನ ಬಿಕ್ಲು ಶಿವ ಜಿಪಿಎ ಮಾಡಿಸಿಕೊಂಡಿದ್ದ.. ಈ ಬಗ್ಗೆ ಗಲಾಟೆ ಆಗಿದ್ದು, ಜಿಪಿಎ ಕ್ಯಾನ್ಸಲ್ ಮಾಡಿ, ಪೊಸಿಷನ್ ಬಿಟ್ಟುಕೊಡಲು ಜಗ್ಗನ ಗ್ಯಾಂಗ್ ಬೆದರಿಕೆ ಹಾಕಿದೆ.. ಬೆದರಿಕೆ ಬಗ್ಗೆ ಕಳೆದ ವರ್ಷದ ಫೆಬ್ರವರಿಯಲ್ಲಿ ಕಮಿಷನರ್​ಗೆ ಬಿಕ್ಲು ಶಿವ ದೂರು ನೀಡಿದ್ದ.. ಬೈರತಿ & ಗ್ಯಾಂಗ್​ನಿಂದ ಜೀವಬೆದರಿಕೆ ಅಂತ ಆರೋಪಿಸಿದ್ದ.. ಬೆದರಿಕೆ ಹಾಕಿದ್ದ ವಿಡಿಯೋ ಸಮೇತ ದೂರು ನೀಡಿದ್ದ ರೌಡಿಶೀಟರ್, ಅಲ್ಲಿ ಬೈರತಿ ಬಸವರಾಜ್, ಜಗ್ಗ, ಕಿರಣ್ ಸಹಚರರ ಹೆಸರು ಹೇಳಿದ್ದ.. ನಂತರ ಭಾರತಿನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.. ಆದ್ರೆ, ದೂರು ಕೊಟ್ಟ ನಾಲ್ಕೇ ತಿಂಗಳಲ್ಲಿ ಅಂದ್ರೆ ಜುಲೈ 15ರಂದು ಶಿವಪ್ರಕಾಶ್ ಕೊಲೆ ಆಗಿದ್ದ.. 

Byrathi basavaraj arrested by police





ನಿನ್ನೆ ಬಂಧನಕ್ಕೆ ಒಳಗಾದ ಬೈರತಿಯನ್ನ ಇವತ್ತು ಬೌರಿಂಗ್ ಆಸ್ಪತ್ರೆಯಲ್ಲಿ ಮೆಡಿಕಲ್ ಚೆಕಪ್ ಮಾಡಲಾಗಿದೆ.. ವೈದ್ಯಕೀಯ ಪರೀಕ್ಷೆ ಬಳಿಕ ಜಡ್ಜ್ ಎದುರು ಹಾಜರು ಪಡಿಸಲಾಯ್ತು..ಕೋರ್ಟ್ ನಲ್ಲಿ ವಾದ- ಪ್ರತಿವಾದ ನಡೆದಿದೆ. ಭೈರತಿ ಬಸವರಾಜುರನ್ನು ಪೊಲೀಸ್ ವಶಕ್ಕೆ ನೀಡಬೇಕೋ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬೇಕೋ ಎಂಬ ಬಗ್ಗೆ ನಾಳೆ ಕೋರ್ಟ್ ಆದೇಶ ನೀಡಲಿದೆ. 
 ಇನ್ನೂ ಮುಂದೆ ಕಳೆದ ವರ್ಷ ನಡೆದ ಮರ್ಡರ್​​​ ಕೇಸ್​​​​ ಅಸಲಿ ಕಥೆ ಬಿಚ್ಚಿಕೊಳ್ಳಲಿದೆ. 
 ಇನ್ನು, ಶಾಸಕ ಬೈರತಿ ಬಸವರಾಜ್​ ಬಂಧನವನ್ನ ಬಿಜೆಪಿ ರಾಜಕಾರಣದ ಕಣ್ಣಿನಿಂದ ನೋಡಿದೆ.. ಚಿತ್ರದುರ್ಗದಲ್ಲಿ ಮಾತ್ನಾಡಿದ ಅಶೋಕ್​​, ಇದು ರಾಜಕೀಯ ಪ್ರೇರಿತ ಷಡ್ಯಂತ್ರ ಅಂತ ಕರೆದಿದ್ದಾರೆ..
ಒಟ್ಟಾರೆ, CIDಯಿಂದ ತನಿಖೆ ಚುರುಕಾಗಿದ್ದು, ಸ್ಥಳೀಯ ಪೊಲೀಸರಿಗೂ ಢವಢವ ಶುರುವಾಗಿದೆ.. ಈ ಕೇಸ್​​​ನಲ್ಲಿ ಸ್ಥಳೀಯ ಪೊಲೀಸರ ಕೈವಾಡದ ಶಂಕೆ ಇದೆ.. ಈ ಹಿಂದೆ ಬಿಕ್ಲು ಶಿವ ದೂರು ನೀಡಿದ್ರು, ತನಿಖೆ ಸರಿಯಾಗಿ ನಡೆಸದ ಆರೋಪ ಇದೆ.. 


ಅಂಕಿತಾ ರೈ, ಕ್ರೈಂ ಬ್ಯೂರೋ, ನ್ಯೂಸ್​ಫಸ್ಟ್​ 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.

Byrathi Basavaraj
Advertisment