ರಾತ್ರಿಯಿಡಿ ಕಗ್ಗತ್ತಲಲ್ಲಿ ಮುಳುಗಿದ ಬಿಮ್ಸ್ ಆಸ್ಪತ್ರೆ! ಮೊಬೈಲ್ ಟಾರ್ಚ್​ ಹಿಡಿದು ರೋಗಿಗಳಿಗೆ ವೈದ್ಯರಿಂದ ಚಿಕಿತ್ಸೆ!

author-image
Gopal Kulkarni
Updated On
ರಾತ್ರಿಯಿಡಿ ಕಗ್ಗತ್ತಲಲ್ಲಿ ಮುಳುಗಿದ ಬಿಮ್ಸ್ ಆಸ್ಪತ್ರೆ! ಮೊಬೈಲ್ ಟಾರ್ಚ್​ ಹಿಡಿದು ರೋಗಿಗಳಿಗೆ ವೈದ್ಯರಿಂದ ಚಿಕಿತ್ಸೆ!
Advertisment
  • ಅವ್ಯವಸ್ಥೆಗಳ ಆಗರವಾಗಿರುವ ಬೆಳಗಾವಿ ಬಿಮ್ಸ್ ಆಸ್ಪತ್ರೆ
  • 20 ನಿಮಿಷ ಕರೆಂಟ್ ಇಲ್ಲದೇ ಕತ್ತಲಲ್ಲಿ ಮುಳುಗಿದ ಜಿಲ್ಲಾಸ್ಪತ್ರೆ
  • ಇಷ್ಟು ವರ್ಷವಾದರೂ ವಿದ್ಯುತ್​ ಪೂರೈಕೆಗೆ ಪರ್ಯಾಯ ವ್ಯವಸ್ಥೆ ಇಲ್ಲ

ಅದು ಬಡವರ ಆಸ್ಪತ್ರೆ. ನಿತ್ಯ ಸಾವಿರಾರು ರೋಗಿಗಳು ಬರ್ತಾರೆ. ಆದರೆ ನಿನ್ನೆ ರಾತ್ರಿ ಆಸ್ಪತ್ರೆಗೆ ಬಂದ ರೋಗಿಗಳಿಗೆ ಶಾಕ್ ಕಾದಿತ್ತು. ಯಾಕಂದ್ರೆ ವೈದ್ಯರ ಕೈಯಲ್ಲಿ ಸ್ಟೆತಸ್ಕೋಪ್ ಬದಲಿಗೆ ಮೊಬೈಲ್ ಟಾರ್ಚ್​ಗಳಿದ್ದವು. ಅಷ್ಟಕ್ಕೂ ವೈದ್ಯರು ಸ್ಟೆತಸ್ಕೋಪ್ ಬಿಟ್ಟು ಮೊಬೈಲ್ ಟಾರ್ಚ್ ಹಿಡಿಯಲು ಕಾರಣ ಎನು ಅಂತೀರಾ ಈ ಸ್ಟೋರಿ ನೋಡಿ.

ಕತ್ತಲಲ್ಲಿ ಮುಳುಗಿರೋ ಆಸ್ಪತ್ರೆ. ಸ್ಟೆತಸ್ಕೋಪ್ ಹಿಡಿಯುವ ಕೈಯಲ್ಲಿ ಮೊಬೈಲ್ ಹಿಡಿದು ಚಿಕಿತ್ಸೆ ಕೊಡ್ತಿರೋ ವೈದ್ಯರು. ರೋಗಿಗಳು ಪರದಾಡ್ತಿದ್ರೆ ಸಂಬಂಧಿಕರ ಕಳವಳ. ಈ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಬೆಳಗಾವಿಯ ಬಿಮ್ಸ್ ಆಸ್ಪತ್ರೆ.

publive-image

ಕಳೆದ ರಾತ್ರಿ ಚಿಕಿತ್ಸೆಗೆ ಅಂತ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ಬಂದಿದ್ದ ರೋಗಿಗಳಿಗೂ ಅವರ ಸಂಬಂಧಿಗಳಿಗೂ ಶಾಕ್ ಕಾದಿತ್ತು. ಇಡೀ ಆಸ್ಪತ್ರೆ ಕತ್ತಲಲ್ಲಿ ಮುಳುಗಿತ್ತು. ಆಸ್ಪತ್ರೆಯ ಐಸಿಯು ಸೇರಿದಂತೆ ಎಲ್ಲವೂ ಕಗ್ಗತ್ತಲಲ್ಲಿ ಮುಳುಗಿತ್ತು. ಇದೇ ವೇಳೆ ವಿಷ ಕುಡಿದು ಬಂದ ರೋಗಿಗೆ ಚಿಕಿತ್ಸೆ ನೀಡಲು ವೈದ್ಯರು ಹರಸಾಹಸವನ್ನೆ ಪಡಬೇಕಾಯ್ತು. ಕೈಯಲ್ಲಿ ಟಾರ್ಚ್ ಹಿಡಿದು ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡಿದರು‌. ಸತತ 20 ನಿಮಿಷಕ್ಕೂ ಹೆಚ್ಚು ಕಾಲ ರೋಗಿಗಳು ಹಾಗೂ ವೈದ್ಯರು ಪರದಾಡಿದ್ರು.

ಇದನ್ನೂ ಓದಿ:ಬೆಂಗಳೂರಲ್ಲಿ ಕಾಮುಕ ಬ್ಯಾಡ್ಮಿಂಟನ್ ಕೋಚ್‌.. ಮೊಬೈಲ್‌ನಲ್ಲಿ 8 ಬಾಲಕಿಯರ ನಗ್ನ ವಿಡಿಯೋಗಳು ಪತ್ತೆ!

ಯಾವುದೇ ಆಸ್ಪತ್ರೆ ಇರಲಿ ವಿದ್ಯುತ್ ಇಲ್ಲ ಅಂದಾಗ ಅಲ್ಲಿ ತುರ್ತಾಗಿ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕಾಗುತ್ತೆ. ಆದರೆ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯ ಆಡಳಿತ ಮಂಡಳಿಗೆ ಈ ವಿಷಯ ಗಮನಕ್ಕಿಲ್ಲವೋ ಅಥವಾ ಗಮನಕ್ಕಿದ್ದರೂ ತಾತ್ಸಾರ ಮನೋಭಾವವೋ ಗೊತ್ತಿಲ್ಲ. ತುರ್ತಾಗಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಾಗ ಸ್ಥಳೀಯವಾಗಿ ಜನರೇಟರ್ ವ್ಯವಸ್ಥೆ ಮಾಡಿಕೊಂಡು ರೋಗಿಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕಿದ್ದ ಆಡಳಿತ ಮಂಡಳಿ ಇದಕ್ಕೆ ಕ್ಯಾರೆ ಅಂತಿಲ್ಲ. ಶಾರ್ಟ್ ಸರ್ಕ್ಯೂಟ್​ನಿಂದ ವಿದ್ಯುತ್ ಪೂರೈಕೆ ಸ್ಥಗಿತಗೊಂಡು 20 ನಿಮಿಷವಾದ್ರೂ ಆಸ್ಪತ್ರೆಯಲ್ಲಿ ಹೇಳೋರು ಕೇಳೋರು ಗತಿ ಇರಲಿಲ್ಲ.‌

publive-image

ಇದನ್ನೂ ಓದಿ: 5 ಮಂದಿ ದಾರುಣ ಅಂತ್ಯ.. ಕಲಬುರಗಿಯಲ್ಲಿ ಒಂದೇ ಕುಟುಂಬದ ಘೋರ ದುರಂತ; ಕಾರಣವೇನು?

ರಾಜ್ಯದಲ್ಲಿರುವ ವಿಮ್ಸ್​, ಜಿಮ್ಸ್​, ಬಿಮ್ಸ್​ಗಳೆಲ್ಲದರ ಪರಿಸ್ಥಿತಿ ಇಂತದ್ದೇ. ಅಲ್ಲಲ್ಲಿ ಅದರದ್ದೇ ಸಮಸ್ಯೆಗಳ ರಾಶಿ. ಇಲ್ಲಿ ಆಸ್ಪತ್ರೆಗಳಿಗೆನೇ ಚಿಕಿತ್ಸೆ ಕೊಡಬೇಕಿದೆ. ಬಡವರ ಆಸ್ಪತ್ರೆಗಳು ಅಂತ ಕರೆಯಲ್ಪಡುವ ಸರ್ಕಾರಿ ಆಸ್ಪತ್ರೆಗಳ ಪರಿಸ್ಥಿತಿ ಹೀಗಾಗಿದ್ದರಿಂದಲೇ ಇಂದು ಖಾಸಗಿ ಆಸ್ಪತ್ರೆಗಳು ಬಡವರನ್ನು ದೋಚುತ್ತಿವೆ. ಒಟ್ಟಿನಲ್ಲಿ ಆಸ್ಪತ್ರೆಗೆ ವಿದ್ಯುತ್ ಪೂರೈಕೆ ಸ್ಥಗಿತವಾಗಿ 20 ನಿಮಿಷ ಕಳೆದರೂ ಆಸ್ಪತ್ರೆಗೆ ಸರಿಯಾದ ವಿದ್ಯುತ್ ಪೂರೈಕೆ ಮಾಡಿಸಲು ಬಿಮ್ಸ್ ಆಡಳಿತ ಮಂಡಳಿ ಹೆಣಗಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು ದುರಂತ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment