ಸಿಎಂ ಹುದ್ದೆ ಕೊಟ್ರೆ ರಾಜಕೀಯಕ್ಕೆ ಬರ್ತಾರಾ ಗಂಗೂಲಿ..? ಬಯೋಪಿಕ್ ನಿರ್ಮಾಣದ ಡೇಟ್ ಅನೌನ್ಸ್..!

author-image
Ganesh
Updated On
ಬಯಲಾಯ್ತು ಗಂಗೂಲಿ ಅಸಲಿ ಮುಖವಾಡ.. ಕ್ರೆಡಿಟ್ ಆಸೆಗಾಗಿ ಸತ್ಯ ಒಪ್ಪಿಕೊಂಡ ದಾದಾ..!
Advertisment
  • ರಾಜಕೀಯ ಎಂಟ್ರಿ ಬಗ್ಗೆ ಏನಂದ್ರು ದಾದಾ..?
  • 2026ಕ್ಕೆ ಗಂಗೂಲಿ ಜೀವನಾಧಾರಿತ ಚಿತ್ರ
  • ದಾದಾ ಪಾತ್ರಕ್ಕೆ ಬಣ್ಣ ಹಚ್ಚುವ ನಟ ಯಾರು?

ಪಶ್ಚಿಮ ಬಂಗಾಳ ರಾಜ್ಯದಲ್ಲಿ ಸಿಎಂ ಮಮತಾ ಬ್ಯಾನರ್ಜಿ ಹೊರತುಪಡಿಸಿ ಅತಿ ಹೆಚ್ಚು ಜನಪ್ರಿಯತೆ ಇರುವ ವ್ಯಕ್ತಿ ಅಂದರೆ ಅದು ಸೌರವ್ ಗಂಗೂಲಿ. ಭಾರತ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಸೌರವ್ ಗಂಗೂಲಿ ಪಶ್ಚಿಮ ಬಂಗಾಳದ ದೊಡ್ಡ ಐಕಾನ್. ಕ್ರಿಕೆಟ್ ಲೋಕದ ದಂತಕಥೆ. ಬಂಗಾಳದಲ್ಲಿ ದೊಡ್ಡ ಮಟ್ಟದಲ್ಲಿ ಫ್ಯಾನ್ ಫಾಲೋಯಿಂಗ್ ಹೊಂದಿರುವ ನಾಯಕ. ಬಂಗಾಳಿಗರು ಸೌರವ್ ಗಂಗೂಲಿರನ್ನು ದಾದಾ ಎಂದೇ ಪ್ರೀತಿಯಿಂದ ಕರೆಯುತ್ತಾರೆ.

ಇದನ್ನೂ ಓದಿ: 75 ಕೋಟಿ ಸಂಬಳ ಬಿಟ್ಟು ಸನ್ಯಾಸತ್ವ ಸ್ವೀಕರಿಸಿದ ಅಂಬಾನಿ ಬಲಗೈ ಭಂಟ..!

publive-image

ಸೌರವ್ ಗಂಗೂಲಿ ರಾಜಕೀಯಕ್ಕೆ ಬರುತ್ತಾರೆ ಅಂತ ಎಲೆಕ್ಷನ್ಸ್​ ಬಂದಾಗೆಲ್ಲಾ ವದಂತಿಗಳು ಹರಡುತ್ತವೆ. ಗಂಗೂಲಿ ಈಗಾಗಲೇ ಕ್ರಿಕೆಟ್ ಅಸೋಸಿಯೇಷನ್ ಆಫ್ ಬಂಗಾಳದ ಅಧ್ಯಕ್ಷರಾಗಿದ್ದರು. ಬಿಸಿಸಿಐ ಅಧ್ಯಕ್ಷರೂ ಕೂಡ ಆಗಿದ್ದರು. ಪಶ್ಚಿಮ ಬಂಗಾಳದಲ್ಲಿ ಮುಂದಿನ ವರ್ಷ ಅಸೆಂಬ್ಲಿ ಚುನಾವಣೆ ನಡೆಯಲಿದೆ. ಹೀಗಾಗಿ ಈಗ ಸೌರವ್ ಗಂಗೂಲಿ ರಾಜಕೀಯಕ್ಕೆ ಬರುತ್ತಾರಾ ಎಂಬ ಚರ್ಚೆ ಕೂಡ ನಡೆಯುತ್ತಿದೆ. ಈ ಪ್ರಶ್ನೆಯನ್ನು ಈಗ ನೇರವಾಗಿ ಸೌರವ್ ಗಂಗೂಲಿಗೆ ಪಿಟಿಐ ಸುದ್ದಿಸಂಸ್ಥೆ ಕೇಳಿದೆ. ನೀವು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಹುದ್ದೆಯನ್ನು ನೀಡಿದರೆ ಒಪ್ಪಿಕೊಳ್ಳುತ್ತೀರಾ ಎಂದು ಸೌರವ್ ಗಂಗೂಲಿಗೆ ಪ್ರಶ್ನಿಸಿದಾಗ, ಸೌರವ್ ಗಂಗೂಲಿ, ನಾನು ರಾಜಕೀಯದ ಬಗ್ಗೆ ಆಸಕ್ತಿ ಹೊಂದಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಸಲ್ಮಾನ್ ಖಾನ್​ಗೆ ಗಂಭೀರ ಕಾಯಿಲೆ.. ಆತಂಕಕಾರಿ ವಿಚಾರ ಹಂಚಿಕೊಂಡ ಬಾಲಿವುಡ್ ಸ್ಟಾರ್..

publive-image

ರಾಜಕೀಯಕ್ಕೆ ಸಂಬಂಧಿಸಿದ ಯಾವುದೇ ಹುದ್ದೆ, ಆಫರ್​ಗಳ ಬಗ್ಗೆ ನಾನು ಆಸಕ್ತಿ ಹೊಂದಿಲ್ಲ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ. ರಾಜಕೀಯ ನೀವು ಹೇಳುವಷ್ಟು ಸುಲಭ ಅಲ್ಲ. ನನಗೆ ಪ್ರತಿ ವರ್ಷ ರಾಜಕೀಯ ರಂಗ ಪ್ರವೇಶಿಸುವ ಆಫರ್ ಗಳು ಬರುತ್ತವೆ. ಆದರೆ ಅದು ನನ್ನ ಫೀಲ್ಡ್ ಅಲ್ಲ. ಅದು ನನ್ನ ಕಪ್ ಆಫ್ ಟೀ ಅಲ್ಲ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ. ನಾನು ರಾಜಕೀಯದ ಬೆಳವಣಿಗೆಗಳನ್ನು ಗಮನಿಸುತ್ತೇನೆ. ಒಂದು ದೇಶ, ರಾಜ್ಯದ ಪ್ರಗತಿಯು ನೇರವಾಗಿ ಆ ದೇಶವನ್ನು ಯಾರು ಮುನ್ನಡೆಸುತ್ತಾರೆ ಎಂಬುದನ್ನು ಅವಲಂಬಿಸಿದೆ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.

ಇದೇ ವೇಳೆ ತಮ್ಮ ಜೀವನ ಆಧರಿತ ಸಿನಿಮಾ ನಿರ್ಮಾಣವಾಗುವುದನ್ನು ಸೌರವ್ ಗಂಗೂಲಿ ಖಚಿತಪಡಿಸಿದ್ದಾರೆ. ಸೌರವ್ ಗಂಗೂಲಿ ಪಾತ್ರದಲ್ಲಿ ನಟ ರಾಜಕುಮಾರ್ ರಾವ್ ನಟಿಸಲಿದ್ದಾರೆ. 2026ರ ಜನವರಿಯಲ್ಲಿ ಸಿನಿಮಾ ನಿರ್ಮಾಣದ ಶೂಟಿಂಗ್ ಆರಂಭವಾಗಲಿದೆ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ. ಪ್ರೀ ಪ್ರೊಡಕ್ಷನ್, ಸ್ಕ್ರೀಪ್ಟಿಂಗ್, ಸ್ಟೋರಿ ರೈಟಿಂಗ್ ಬಹಳಷ್ಟು ಸಮಯವನ್ನು ತೆಗೆದುಕೊಳ್ಳುತ್ತೆ. ಶೂಟಿಂಗ್ ಜಾಸ್ತಿ ಸಮಯವನ್ನು ತೆಗೆದುಕೊಳ್ಳಲ್ಲ ಎಂದು ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಹೇಳಿದ್ದರು.

ಇದನ್ನೂ ಓದಿ: ಅಟ್ಟರ್​​ ಫ್ಲಾಪ್​ ಫೀಲ್ಡಿಂಗ್.. ಒಂದೇ ಇನ್ನಿಂಗ್ಸ್​ನಲ್ಲಿ ಭಾರತ ಕೈಚೆಲ್ಲಿದ ಕ್ಯಾಚ್​​​ಗಳ ಸಂಖ್ಯೆ ಎಷ್ಟು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment