Biparjoy: ಹಲವೆಡೆ ಲ್ಯಾಂಡ್ ಫಾಲ್​ ಆರಂಭ.. ಕರಾಚಿಯಲ್ಲಿ ಭಯದ ವಾತಾವರಣ

author-image
Harshith AS
Updated On
Biparjoy: ಹಲವೆಡೆ ಲ್ಯಾಂಡ್ ಫಾಲ್​ ಆರಂಭ.. ಕರಾಚಿಯಲ್ಲಿ ಭಯದ ವಾತಾವರಣ
Advertisment
  • ಭಾರತೀಯರ ನಿದ್ದೆಗೆಡಿಸಿದ ಮಹಾ ಅವಾಂತರಿ ಬಿಪರ್‌ಜಾಯ್​
  • ಹವಾಮಾನ ಇಲಾಖೆ ಹೊರಡಿಸಿದ ಮುನ್ಸೂಚನೆ ಏನು?
  • ಹೈ ಅಲರ್ಟ್​​ ಪ್ರದೇಶದ ನಿವಾಸಿಗಳಿಗೆ IMD ಎಚ್ಚರಿಕೆ

ಬಿಪರ್‌​ಜಾಯ್​ ಅಪ್ಪಳಿಸುವ ಪ್ರಕ್ರಿಯೆ ಆರಂಭಗೊಂಡಿದೆ. ಅರಬ್ಬಿ ಸಮುದ್ರದಿಂದ ಪ್ರಾರಂಭವಾದ ಬಿಪರ್​ ಜಾಯ್​ ಇದೀಗ ಭಾರತೀಯರ ನಿದ್ದೆಗೆಡಿಸಿದೆ. ಹವಮಾನ ಇಲಾಖೆ ಹೊರಡಿಸಿದ ಮುನ್ನೂಚನೆಯಂತೆ ಗುಜರಾತ್​​ನ ಕಛ್ ಕರಾವಳಿ ಭಾಗದಲ್ಲಿ ಗಾಳಿಯ ರಭಸ ಜೋರಾಗಿದೆ. ಮತ್ತೊಂದೆಡೆ ಲ್ಯಾಂಡ್ ಫಾಲ್​ ಪ್ರಕಿಯೆ ಆರಂಭಗೊಂಡಿದೆ.​

ಬಿಪರ್ ​ಜಾಯ್ ಸೈಕ್ಲೋನ್​ ಮಧ್ಯರಾತ್ರಿವರೆಗೂ ಮುಂದುವರೆಯುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಈಗಾಗಲೇ ಗುಜರಾತ್​ ಭಾಗದಲ್ಲಿ 120-130 ಕಿಮೀ ವೇಗದಲ್ಲಿ ಗಾಳಿ ರಭಸವಾಗಿ ಬೀಸುತ್ತಿದ್ದು, ಅದರೊಂದಿಗೆ ಗುಜರಾತ್​​ನ ಹಲವೆಡೆ ಮಳೆ ಬರುತ್ತಿದೆ.

ಬಿಪರ್​ ಜಾಯ್​ ಅವಾಂತರ ಸೃಷ್ಟಿಸುವ ಮೊದಲೇ ಸರ್ಕಾರ ಹೈ ಅಲರ್ಟ್​​ ಪ್ರದೇಶದ ನಿವಾಸಿಗಳಿಗೆ ಎಚ್ಚರಿಕೆ ನೀಡಿದೆ. ಮನೆಯಿಂದ ಹೊರಬರದಂತೆ ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ. ಇನ್ನು ಕರಾಚಿ ಭಾಗ ಸೇರಿ ರೆಡ್​​ ಅಲರ್ಟ್​ ಏರಿಯಾದ ನಿವಾಸಿಗಳನ್ನು ಈಗಾಗಲೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment