/newsfirstlive-kannada/media/post_attachments/wp-content/uploads/2025/02/BIRD-FLUE.jpg)
ನೆರೆ ರಾಜ್ಯದಿಂದ ಕರ್ನಾಟಕಕ್ಕೆ ಬರುವ ಕೋಳಿ ಹಾಗೂ ಮೊಟ್ಟೆಗಳಿಗೆ ಈಗಾಗಲೇ ನಿರ್ಬಂಧ ಹೇರಲಾಗಿದೆ. ಆಂಧ್ರಪ್ರದೇಶ, ತೆಲಂಗಾಣ ಹಾಗೂ ಮಹಾರಾಷ್ಟ್ರದಲ್ಲಿ ಹಕ್ಕಿಜ್ವರ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೇರೆ ರಾಜ್ಯಗಳಿಂದ ಕೋಳಿ ಖರೀದಿಗೆ ರಾಜ್ಯ ಸರ್ಕಾರ ನಿರ್ಬಂಧ ಹೇರಿದೆ.
ಕರ್ನಾಟಕದಲ್ಲಿ ಇಲ್ಲಿಯವರೆರೆಗೂ ಯಾವುದೇ ಹಕ್ಕಿಜ್ವರ ಪತ್ತೆಯಾಗಿಲ್ಲವಾದರೂ ಆತಂಕದ ಕಾರ್ಮೊಡವೊಂದು ಕವಿದಿದೆ. ರಾಜ್ಯದ ಹಲವೆಡೆ ಈಗಾಗಲೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.ಹೊರ ರಾಜ್ಯಗಳ ಕೋಳಿ, ಮೊಟ್ಟೆಗಳ ಖರೀದಿ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಬೆಂಗಳೂರಿನಲ್ಲೂ ಚಿಕನ್ ವ್ಯಾಪಾರಿಗಳು ಅಲರ್ಟ್ ಆಗಿದ್ದಾರೆ.
ಇದನ್ನೂ ಓದಿ:ಬೆಂಗಳೂರಿಗರೇ ಇವತ್ತೇ ಅಲರ್ಟ್ ಆಗಿ.. ನಾಳೆ ನೀವು 12 ಗಂಟೆ ಕಾಲ ತೊಂದರೆಗೆ ಸಿಲುಕಬಹುದು..!
ತೆಲಂಗಾಣದಲ್ಲಿ H5N1 ವೈರಸ್​ನಿಂದ ಉಂಟಾಗುವ ಸೋಂಕಿನಿಂದ ಕೋಳಿಗಳು ಮೃತಪಡುತ್ತಿವೆ. ಇದರ ಪರಿಣಾಮವಾಗಿ ಕರ್ನಾಟಕದ ಗಡಿ ಭಾಗಗಳಲ್ಲಿ ಆತಂಕ ಮನೆ ಮಾಡಿದೆ. ತೆಲಂಗಾಣ ಆಂಧ್ರಪ್ರದೇಶಗಳಲ್ಲಿ ಕೋಳಿಗಳ ಮಾರಣಹೋಮವೇ ನಡೆಯುತ್ತಿದ್ದೆ. ಸಂಯುಕ್ತ ನೆಲ್ಲರೂ ಜಿಲ್ಲೆಯ ಗುಡೂರು, ಸುಳ್ಳೂರುಪೇಟ, ನಾಯ್ಡುಪೇಟ ಮತ್ತು ವೆಂಕಟಗಿರಿ ಪ್ರದೇಶದಲ್ಲಿ ಹಕ್ಕಿಜ್ವರದಿಂದಾಗ ಕೋಳಿಗಳು ಹುಳ ಹುಪ್ಪಟೆಗಳು ಸತ್ತಂತೆ ಸಾಯುತ್ತಿವೆ. ಚಿಕನ್ ಶಾಪ್​ಗಳಲ್ಲಿಯೇ ನೂರಾರು ಕೋಳಿಗಳು ಜೀವಬಿಡುತ್ತಿವೆ.
ಇದನ್ನೂ ಓದಿ:ಹಳೇ ಬಾಯ್​ಫ್ರೆಂಡ್​ ಜೊತೆ ಪತ್ನಿ ಪರಾರಿ, ಮನನೊಂದು ಪತಿ ಸಾವಿಗೆ ಶರಣು
ಇದರಿಂದಾಗಿ ಜನ ತೀವ್ರ ಕಳವಳ ವ್ಯಕ್ತಪಡಿಸಿದ್ದು ಬೇರೆ ರಾಜ್ಯಗಳಿಂದ ಇಲ್ಲಿಯೂ ಸೋಂಕು ಹರಡುವ ಭೀತಿಯಿದ್ದು. ಬೀದರ್, ಬೆಳಗಾವಿ, ಬಳ್ಳಾರಿ ಸೇರಿದಂತೆ ಗಡಿ ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ವಹಿಸಲಾಗಿದೆ.ಬೇರೆ ರಾಜ್ಯಗಳಿಂದ ಬರುವ ಕೋಳಿ ಹಾಗೂ ಮೊಟ್ಟೆಗಳಿಗೆ ನಿರ್ಬಂಧ ವಿಧಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us