newsfirstkannada.com

ಅಯೋಧ್ಯೆಯಲ್ಲಿ ಆರಾಮಾಗಿದ್ದ ಹನುಮ.. ಅಂದು ಶ್ರೀರಾಮ ಆಂಜನೇಯನಿಗೆ ಹೇಳಿದ್ದೇನು?

Share :

Published January 13, 2024 at 8:50pm

Update January 13, 2024 at 8:37pm

  ಆವತ್ತು ಅಶೋಕ ವನದಲ್ಲಿ ಸೀತಾಮಾತೆ ಕೊಟ್ಟ ವರವೇನು ಗೊತ್ತಾ?

  ಚಿರಂಜೀವಿ ಆಗಿರುವ ಆಂಜನೇಯ ಇರೋದಾದ್ರೂ ಎಲ್ಲಿ ಗೊತ್ತಾ?

  ಜಾತಿ, ಮತ, ಪಂಥಗಳನ್ನೂ ಮೀರಿ ಆರಾಧಿಸುವ ಶಕ್ತಿಯೇ ಹನುಮ!

ಅಸಾಮಾನ್ಯ ಶಕ್ತಿಶಾಲಿ. ಆ ಶಕ್ತಿಯ ಮುಂದೆ ಅದೆಂತಾ ದುಷ್ಟ ಶಕ್ತಿಯಿದ್ರೂ ನಗಣ್ಯವಾಗಿಬಿಡುತ್ತೆ. ಅಷ್ಟಕ್ಕೂ ಯಾರು ಆ ಮಹಾನ್ ದೇವತೆ ಅಂತಾ ಕೇಳ್ತೀರಾ? ಆತ ಬೇರಾರೂ ಅಲ್ಲ. ರಾಮ ಬಂಟ, ವಾಯಪುತ್ರ, ಮಹಾಪರಾಕ್ರಮಿ ಹನುಮಂತ. ರಾವಣನ ಸಂಹಾರದ ಬಳಿಕ ರಾಮ ಲಕ್ಷ್ಮಣರೆಲ್ಲರೂ ಸ್ವರ್ಗವಾಸಿಗಳಾದ್ರೆ, ಆಂಜನೇಯ ಮಾತ್ರ ಇಂದಿಗೂ ಜಿರಂಜೀವಿಯಾಗಿದ್ದಾನೆ. ಕೇಸರಿ ನಂದನ. ಸಾಗರವನ್ನೇ ದಾಟಿದ ಸಾಹಸಿ. ಎಲ್ಲೇ ನೆನೆದರೂ ಅಲ್ಲಿಯೇ ಇರುವ. ಎಲ್ಲಿಗೆ ಕರೆದರೂ ಅಲ್ಲಿಗೆ ಬರುವ.

ಮಹಾ ಪರಾಕ್ರಮಿ ಅಂದ್ರೆ ಅದು ರಾಮ ಬಂಟ ಆಂಜನೇಯ. ತ್ರೇತಾಯುಗದಲ್ಲಿ ರಾಮನ ವನವಾಸ, ಸೀತಾಪಹರಣ, ಪಟ್ಟಾಭಿಷೇಕ ಒಂದು ಕಡೆಯಾದ್ರೆ, ಹನುಮನ ಭಕ್ತಿ. ಸಾಹಸಗಾಥೆ ಮತ್ತೊಂದು ಮೈ ರೋಮಾಂಚಕ ಅಧ್ಯಾಯ. ಇಂಥಹ ಬಲಶಾಲಿ ಬಡಬಾನಲ ಇಂದಿಗೂ ಚಿರಂಜೀವಿಯಾಗಿದ್ದಾನೆ ಅಂದ್ರೆ ನೀವು ನಂಬಲೇಬೇಕು. ವಿಶೇಷ ಅಂದ್ರೆ ರಾಮಾಯಣದಲ್ಲಿ ಆಂಜನೇಯ ಮುಖ್ಯವಾಗಿರುವ ಕಾಂಡಕ್ಕೆ ಸುಂದರ ಕಾಂಡ ಅಂತಲೇ ಕರೆಯಲಾಗಿದೆ. ನಮ್ಮಲ್ಲಿರುವ ಪುರಾಣ ಕಥೆಗಳಲ್ಲಿ ದೇವಾನು ದೇವತೆಗಳ ಅಂತ್ಯದ ಬಗ್ಗೆ ಉಲ್ಲೇಖಿಸಲಾಗಿದೆ. ಆದ್ರೆ, ಹನುಮಂತನ ಅಂತ್ಯ ಅಥವಾ ಹೊಸ ಅವತಾರಗಳ ಬಗ್ಗೆ ಎಲ್ಲಿಯೂ ಉಲ್ಲೇಖವಾಗಿಲ್ಲ. ಯಾಕಂದ್ರೆ ಸಪ್ತ ಚಿರಂಜೀವಿಗಳಲ್ಲಿ ಒಬ್ಬನಾಗಿರುವ ಆಂಜನೇಯ ಇಂದಿಗೂ ಚಿರಾಯು.

ಆದಿಕವಿ ವಾಲ್ಮೀಕಿ ಮಹರ್ಷಿಯ ರಾಮಾಯಣದ ಪಾತ್ರಗಳು ಪ್ರತಿಯೊಬ್ಬರ ಜೀವನದ ಮೇಲೆ ವಿಶೇಷ ಪ್ರಭಾವ ಬೀರುತ್ತೆ. ರಾಮ ಲಕ್ಷ್ಮಣ ಅಂದ್ರೆ, ಶ್ರೀರಾಮ ಭಕ್ತರಿಗೆ ಅದೇನೋ ಒಂದು ಭಾವ ಭಕ್ತಿ. ಆದ್ರೆ, ಜನರ ಮನಸ್ಸಿನಲ್ಲಿ ರಾಮನಷ್ಟೇ ಪರಿಣಾಮ ಬೀರಿದ ಮತ್ತೊಂದು ಮಹಾಶಕ್ತಿ ಅಂದ್ರೆ ಅದು ಆಂಜನೇಯ. ಶ್ರೀರಾಮನ ಮಂದಿರವಿಲ್ಲದ ಊರಿರರಬಹುದು. ಆದ್ರೆ, ಆಂಜನೇಯನ ಗುಡಿ ಇಲ್ಲದ ಊರೇ ಇಲ್ಲ. ಜಾತಿ ಮತ ಪಂಥಗಳನ್ನ ಮೀರಿ ಆರಾಧಿಸುವ ಶಕ್ತಿಯೆಂದ್ರೆ ಅದು ರಾಮ ಬಂಟ ಹನುಮ. ಇಂತಹ ಮಹಾಪರಾಕ್ರಮಿ ಮಹಾನ್ ರಾಮ ಭಕ್ತ ಆಂಜನೇಯನ ಜನನವಾಗಿದ್ದು, ಚೈತ್ರಾ ಮಾಸದ ಶುಕ್ಲ ಪಕ್ಷದ 15ನೇ ದಿನ. ಕರ್ನಾಟಕದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಕೇಸರಿ ಮತ್ತು ಅಂಜನಾ ದೇವಿಗೆ ಮಗನಾಗಿ ಜನಿಸಿದವನೇ ಈ ಆಂಜನೇಯ. ಮದುವೆಯಾಗಿದ್ರೂ ಅಂಜನಾ ದೇವಿಗೆ ಮಕ್ಕಳಾಗಿರಲ್ಲ. ಹೀಗಾಗಿ, ಆಕೆ ವಾಯುದೇವನನ್ನ ಪೂಜಿಸಿದಾಗ, ಆಕೆಯ ವ್ರತಕ್ಕೆ ಮೆಚ್ಚಿ ವಾಯುದೇವ ಪುತ್ರ ಪ್ರಾಪ್ತಿ ರಸ್ತು ಅಂಥಾ ವರ ಕೊಟ್ಟಿರ್ತಾನೆ. ಇನ್ನು, ಈ ವಾಯದೇವನ ವರ ಪ್ರಸಾದವಾಗಿ ಜನಿಸಿದವನೇ ಪವನ ಸುತ ಹನುಮಂತ.

ಸೀತೆ ಕೊಟ್ಟ ವರದಿಂದ ಆಂಜನೇಯ ಇಂದಿಗೂ ಚಿರಾಯು!

ವಾಯವಿನ ಅಂಶದಿಂದ ಜನಿಸಿದ ಕಾರಣಕ್ಕೆ ಆಂಜನೇಯನನ್ನ ವಾಯುಪುತ್ರ. ಪವನ ಸುತ ಅನ್ನೋ ಹೆಸರುಗಳಿಂದ ಕರೆಯಲಾಗುತ್ತೆ. ಹೀಗಾಗಿ, ವಾಯುವಿನ ಅಂಶದಿಂದ ಜನಿಸಿದ ಆಂಜನೇಯ ಇಂದಿಗೂ ಅಮರನಾಗಿದ್ದಾನೆ. ಆದ್ರೆ, ಆಂಜನೇಯನನ್ನ ಅಮರನಾಗುವಂತೆ ವರ ನೀಡಿದ್ದು ಬೇರಾರು ಅಲ್ಲ. ಶ್ರೀರಾಮನ ಸತಿ. ಮಹಾ ಪತಿವೃತೆ ಮಾತೆ ಸೀತಾದೇವಿ. ಹೌದು, ಸೀತೆಯನ್ನ ರಾವಣ ಅಪಹರಿಸಿದ ಬಳಿಕ ಸೀತೆಯನ್ನ ಹುಡುಕುತ್ತಾ ಕಿಷ್ಕಿಂದೆಗೆ ಬಂದ ರಾಮನಿಗೆ ಹನುಮ ಶರಣಾಗಿ ಬಿಡ್ತಾನೆ. ಶ್ರೀರಾಮನ ಪರಮ ಭಕ್ತನಾಗಿ ಕ್ಷಣ ಕ್ಷಣವೂ ರಾಮನಾಮ ಜಪ ಮಾಡ್ತಿರ್ತಾನೆ. ಆದ್ರೆ, ಸೀತಾ ಲಂಕೆಯಲ್ಲಿರೋದು ಗೊತ್ತಾದಾಗ ಸೀತೆ ಅಲ್ಲಿ ಹೇಗಿದ್ದಾಳೆ ಅನ್ನೋದನ್ನ ರಾಮ ತಿಳ್ಕೋಬೇಕಾಗಿರುತ್ತೆ. ಆದ್ರೆ, ರಾಮನಿಗೆ ಸಮುದ್ರದ ಆಚೆ ಇರುವ ಲಂಕೆಗೆ ಕಳಿಸೋದಾದ್ರು ಯಾರು ಅನ್ನೋದು ದೊಡ್ಡ ಪ್ರಶ್ನೆಯಾಗಿರುತ್ತೆ. ಆಗ ರಾಮನಿಗೆ ನೆರವಾಗಿದ್ದು ಪವನ ಸುತ ಆಂಜನೇಯ.

ಶ್ರೀರಾಮನಿಗೆ ಆಂಜನೇಯನ ಪರಾಕ್ರಮದ ಬಗ್ಗೆ ಅರಿವಿತ್ತು. ಹೀಗಾಗಿ, ಆಂಜನೇಯನನ್ನೇ ಲಂಕೆಗೆ ಕಳಿಸೋದು ಸೂಕ್ತ ಅಂದುಕೊಂಡ ರಾಮ, ಹನುಮಂತನಿಗೆ ಲಂಕೆಗೆ ಹೋಗಿ ಸೀತೆ ಹೇಗಿದ್ದಾಳೆ ಅಂತಾ ತಿಳ್ಕೊಂಡು ಬರಲು ಹೇಳ್ತಾನೆ. ರಾಮನ ಮಾತಿನಂತೆ ಹನುಮ ಲಂಕೆಗೆ ಹಾರಿಯೇ ಬಿಡ್ತಾನೆ. ಲಂಕಾಧೀಶ್ವರನ ನಾಡಿಗೆ ಕಾಲಿಟ್ಟು ಎದುರಾದ ರಾಕ್ಷಸರನ್ನೆಲ್ಲಾ ಮೆಟ್ಟಿ ಕೊನೆಗೂ ಆಂಜನೇಯ ಸೀತಾದೇವಿ ಇರೋ ಜಾಗವನ್ನ ಪತ್ತೆ ಮಾಡ್ತಾನೆ. ಆದ್ರೆ ಆಂಜನೇಯನನ್ನ ಕಂಡ ಸೀತೆ ರಾವಣನೇ ಮಾರುವೇಷದಲ್ಲಿ ಬಂದಿರಬಹುದು ಅಂತಾ ಅಂದುಕೊಂಡಿರ್ತಾಳೆ. ಆಗ, ಆಂಜನೇಯ ಶ್ರೀರಾಮನ ಉಂಗುರ ತೋರಿಸಿದಾಗ ಹನುಮನ ಭಕ್ತಿಯ ಪರಾಕಾಷ್ಟೆ ಸೀತೆಗೂ ಅರಿವಾಗಿರುತ್ತೆ.

ಹನುಮನ ಅಪಾರ ಭಕ್ತಿಯನ್ನ ಕಂಡ ಸೀತಾದೇವಿಗೂ ಅವನಿಗೆ ರಾಮನೆಂದ್ರೆ ಅದೆಷ್ಟು ಭಕ್ತಿ ಅನ್ನೋದು ತಿಳಿದಿತ್ತು. ಅದೇ ಸಮಯದಲ್ಲಿ ದಶಕಂಠನ ಸಾಮ್ರಾಜ್ಯಕ್ಕೆ ಒಂಟಿಯಾಗಿ ಹಾರಿ ಬಂದಿದ್ದ ಹನುಮನಿಗೆ ಏನಾದ್ರೂ ವರ ನೀಡಬೇಕು ಅಂತಾ ಸೀತೆ ಅಂದುಕೊಳ್ತಾಳೆ. ಆಗ ರಾಮನ ಪರಮ ಭಕ್ತನಾಗಿರುವ ನೀನು ಚಿರಂಜೀವಿಯಾಗಿರು ಅಂತ ವರ ಕೊಟ್ಟುಬಿಡ್ತಾಳೆ. ಹೀಗಾಗಿ, ತ್ರೇತಾಯುಗದಲ್ಲಿ ರಾಮನ ಮಡದಿ ಮಹಾ ಪತಿವ್ರತೆ ಸೀತಾದೇವಿ ಕೊಟ್ಟ ವರದಿಂದಲೇ ಪವನ ಸುತ ಆಂಜನೇಯ ಇಂದಿಗೂ ಭೂಮಿಯಲ್ಲಿ ಅಮರವಾಗಿದ್ದಾನೆ ಅನ್ನೋದು ಭಕ್ತರ ನಂಬಿಕೆ. ಇದೇ ಕಾರಣಕ್ಕೆ ದೇವಾನು ದೇವತೆಗಳು ವೈಕುಂಠಕ್ಕೆ ಹೋದ್ರೂ ಆಂಜನೇಯ ಮಾತ್ರ ಅಮರವಾಗಿದ್ದಾನೆ ಅಂತಾ ಹೇಳಲಾಗುತ್ತೆ. ಹೀಗಾಗಿ, ಇಂದಿಗೂ ಪ್ರತಿ ಊರಿನಲ್ಲೂ ಪ್ರತಿ ಗ್ರಾಮದಲ್ಲೂ ಆಂಜನೇಯನ ದೇವಸ್ಥಾನವನ್ನು ನೋಡಬಹುದು. ಇದಕ್ಕೆ ಪೂರಕವೆಂಬಂತೆ ಮಹಾಭಾರತದಲ್ಲೂ ಆಂಜನೇಯನ ಉಲ್ಲೇಖವಿದೆ.

ಪಾಂಡವರು ವನವಾಸದ ಸಮಯದಲ್ಲಿ ಹಿಮವಂತನ ಪರ್ವತವನ್ನು ದಾಟಿದ ಮೇಲೆ ದ್ರೌಪದಿ ಭೀಮನಿಗೆ ಸೌಗಂಧಿಕ ಪುಷ್ಪ ತರುವಂತೆ ಹೇಳ್ತಾಳೆ. ಸೌಗಂಧಿಕ ಪುಷ್ಪದ ವಾಸನೆ ಬೆನ್ನಿಡಿದು ಹೊರಟ ಭೀಮ ಬಂದು ತಲುಪಿದ್ದು ಹಿಮಾಯಲದ ಗಂಧ ಮಾದವನ ಪರ್ವತಕ್ಕೆ. ಈ ವೇಳೆ ಗಂಧ ಮಾದವನ ಪರ್ವತದಲ್ಲಿ ಕಪಿಯೊಂದು ರಸ್ತೆಗೆ ಬಾಲ ಅಡ್ಡಲಾಗಿ ಹಾಕಿ ಕೂತಿರುತ್ತೆ. ಈ ವೇಳೆ ಭೀಮ ತನ್ನೆಲ್ಲ ಶಕ್ತಿಯನ್ನ ಪ್ರಯೋಗಿಸಿದರೂ ಬಾಲವನ್ನು ಅಲುಗಾಡಿಸಲು ಸಾಧ್ಯವಾಗಿರಲ್ಲ. ಆಗ ಭೀಮನ ಅಹಂಕಾರವನ್ನು ಮಣಿಸಿದ ನಂತರ ಆಂಜನೇಯ ತನ್ನ ನಿಜರೂಪದಲ್ಲಿ ಭೀಮನಿಗೆ ದರ್ಶನ ಕೊಟ್ಟು ಆಶಿರ್ವಾದ ಮಾಡ್ತಾನೆ. ಹೀಗಾಗಿ ಆಂಜನೇಯ ಇನ್ನೂ ಚಿರಂಜೀವಿಯಾಗಿದ್ದಾನೆ ಅನ್ನೋದು ಒಂದು ನಂಬಿಕೆಯಾದರೆ, ಇತ್ತ ಪ್ರಭು ಶ್ರೀರಾಮನೂರು ಅಯೋಧ್ಯೆಲ್ಲಿಯೂ ಆಂಜನೇಯ ನೆಲೆಸಿದ್ದಾನೆ ಅನ್ನೋದು ಮತ್ತೊಂದು ನಂಬಿಕೆ.

ಅಯೋಧ್ಯೆಯನ್ನು ರಕ್ಷಿಸುವುದಕ್ಕಾಗಿ ಹನುಮಾ ಗಡಿಯಲ್ಲಿ ನಿಂತಿದ್ದಾನೆ ಅನ್ನೋದು ಅಲ್ಲಿನ ನಂಬಿಕೆ. ಹಾಗಾಗಿ ಹನುಮಂತ ಅಯೋಧ್ಯೆಯಲ್ಲಿ ಇದ್ದಾನೆ ಅಂತಾ ಅಲ್ಲಿನ ಜನ ನಂಬುತ್ತಾರೆ. ಎಲ್ಲಿ ರಾಮಾಯಣ ಭಜನೆ ನಡೆಯುತ್ತೆ ಅಲ್ಲಿ ಹನುಮಂತ ಇರುತ್ತಾರೆ. ಭಾರತದಲ್ಲಿ ಹನುಮಾನ್​ ಇದಾನೇ ಎಂದರೆ ಅದು ನಿಜ. ಹನುಮಾನ್​​ ಅಯೋಧ್ಯೆಯಲ್ಲಿ ಇದ್ದಾನೆ ಎಂದರೆ ಅದು ನಿಜ

– ಡಾ. ಶಲ್ವಪಿಳ್ಳೈ ಅಯ್ಯಂಗಾರ್, ಇತಿಹಾಸ ತಜ್ಞರು & ಮುಖ್ಯಸ್ಥರು, ಪ್ರಾಚೀನ ಇತಿಹಾಸ & ಪುರಾತತ್ವ ವಿಭಾಗ.

ಅಯೋಧ್ಯೆಯಲ್ಲಿ ಅಮರವಾಗಿದ್ದಾನಾ ಆಂಜನೇಯ?
ಶ್ರೀರಾಮ ಆಂಜನೇಯನಿಗೆ ಅಂದು ಹೇಳಿದ ಮಾತೇನು?

ಹೌದು, ಶ್ರೀರಾಮ ವೈಕುಂಠಕ್ಕೆ ಹೋಗುವ ಮೊದಲು ತನ್ನ ಬಂಟ ಆಂಜನೇಯನಿಗೆ ಅಯೋಧ್ಯೆಯಲ್ಲೇ ನೆಲೆಸುವಂತೆ ಹೇಳಿದ್ದ ಅನ್ನೋದು ಪೌರಾಣಿಕ ಹಿನ್ನೆಲೆ. ನಾನು ಸ್ವರ್ಗಕ್ಕೆ ಹೋದ್ರೆ ಅಯೋಧ್ಯೆಯನ್ನ ರಕ್ಷಣೆ ಮಾಡುವ ಜವಾಬ್ದಾರಿ ನಿನ್ನದೇ ಅಂತಾ ಆಂಜನೇಯನಿಗೆ ಶ್ರೀರಾಮ ಹೇಳಿದ್ನಂತೆ. ಹೀಗಾಗಿ, ಅಯೋಧ್ಯೆಯಲ್ಲಿ ನೆಲೆ ನಿಂತಿರುವ ಆಂಜನೇಯ ಇಂದಿಗೂ ಅಯೋಧ್ಯೆಯನ್ನ ಕಾಯ್ತಿದ್ದಾನೆ ಅನ್ನೋದು ರಾಮ ಭಕ್ತರ ನಂಬಿಕೆ. ಚಿರಂಜೀವಿಯಾಗಿರುವ ಆಂಜನೇಯ ಕಲಿಯುಗದಲ್ಲೂ ಜನರ ರಕ್ಷಣೆ ಮಾಡ್ತಿದ್ದಾನೆ. ತ್ರೇತಾಯುಗದಲ್ಲಿ ರಾಮನಿಗೆ ಹೆಜ್ಜೆ ಹೆಜ್ಜೆಯಾಗಿ ನಿಂತಿದ್ದ ಆಂಜನೇಯ ಇಂದು ಅಯೋಧ್ಯೆಯಲ್ಲಿ ರಾಮನೂರನ್ನ ಕಾಯ್ತಿದ್ದಾನೆ. ದುಷ್ಟ ಶಕ್ತಿಗಳು ಬಾರದಂತೆ ಅಯೋಧ್ಯೆಯನ್ನ ರಕ್ಷಣೆ ಮಾಡ್ತಿದ್ದಾನೆ. ವಿಶೇಷ ಏನಂದ್ರೆ ಅಯೋಧ್ಯೆಗೆ ಬರುವ ಯಾರೇ ಆಗಲಿ ರಾಮನಿಗಿಂತ ಮೊದಲು ಆಂಜನೇಯನ ಈ ಪುಣ್ಯ ತಾಣವನ್ನು ನೋಡ್ಲೇಬೇಕು.. ಹನುಮನ ಅನುಮತಿ ಪಡೆದ ಬಳಿಕವೇ ಶ್ರೀರಾಮನ ದರ್ಶನ ಮಾಡಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಯೋಧ್ಯೆಯಲ್ಲಿ ಆರಾಮಾಗಿದ್ದ ಹನುಮ.. ಅಂದು ಶ್ರೀರಾಮ ಆಂಜನೇಯನಿಗೆ ಹೇಳಿದ್ದೇನು?

https://newsfirstlive.com/wp-content/uploads/2024/01/hunuma.jpg

Load More