newsfirstkannada.com

ಹುಟ್ಟುಹಬ್ಬದಂದು ಎಣ್ಣೆ ಕಡಿಮೆಯಾಗಿದ್ದಕ್ಕೆ ಗಲಾಟೆ! ಬರ್ತ್​ಡೇ ಬಾಯನ್ನು 4 ಮಹಡಿಯಿಂದ ಬಿಸಾಕಿದ ಸ್ನೇಹಿತರು

Share :

Published July 2, 2024 at 12:23pm

Update July 2, 2024 at 12:28pm

  ಮದ್ಯದ ಅಮಲಿನಲ್ಲಿ ನಡೆಯಿತು ಭೀಕರ ಹತ್ಯೆ

  ಎಣ್ಣೆ ಕಮ್ಮಿಯಾಗಿದ್ದಕ್ಕೆ ಕಟ್ಟಡದಿಂದ ಎಸೆದ ಸ್ನೇಹಿತರು

  25ನೇ ವರ್ಷದ ಹುಟ್ಟುಹಬ್ಬಕ್ಕೆ ಸ್ನೇಹಿತರಿಂದಲೇ ಹತ್ಯೆಯಾದ

ಹುಟ್ಟುಹಬ್ಬದಂದು ಮದ್ಯ ಕಮ್ಮಿಯಾಯಿತು ಎಂದು ಸ್ನೇಹಿತನನ್ನು 4ನೇ ಮಹಡಿಯಿಂದ ಎಸೆದ ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದೆ. ಘಟನೆಯಲ್ಲಿ ಕಾರ್ತಿಕ್​ ಎಂಬಾತ ಸಾವನ್ನಪ್ಪಿದ್ದಾನೆ.

ಕಲ್ಯಾಣ್​ನ ಚಿಂಚಪಾದ ಗಾಂವ್​ನಲ್ಲಿ ಈ ದುರ್ಘಟನೆ ನಡೆದಿದೆ. ಕಾರ್ತಿಕ್ ತನ್ನ​​ 25ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ. ಹೀಗಾಗಿ ಸ್ನೇಹಿತರಾದ ನಿಲೇಶ್​​ ಕ್ಷೀರಸಾಗರ್​, ಸಾಗರ್​​ ಕಾಳೆ ಮತ್ತು ಧೀರಜ್​ ಜೊತೆಗೆ ಎಣ್ಣೆ ಪಾರ್ಟಿ ಮಾಡುತ್ತಿದ್ದ. ಆದರೆ ಎಣ್ಣೆ ಖಾಲಿಯಾಗಿದ್ದಕ್ಕೆ ಕೋಪಗೊಂಡ ಸ್ನೇಹಿತರು ಆತನನ್ನು 4ನೇ ಮಹಡಿಯಿಂದ ಎತ್ತಿ ಬಿಸಾಕಿದ್ದಾರೆ.

ಮನೆಯಿಂದ ಹೊರ ನಡೆಯಿರಿ

ಜೂನ್​​ 27ರಂದು ನಡೆದ ಘಟನೆ ಇದಾಗಿದೆ. ತಡರಾತ್ರಿ ಮದ್ಯ ಖಾಲಿಯಾದಾಗ ಸ್ನೇಹಿತರು ಮತ್ತು ಕಾರ್ತಿಕ್​ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಕಾರ್ತಿಕ್​ ಅವಮಾನಗೊಂಡು ಕೋಪದಲ್ಲಿ ನಿಲೇಶ್​ ತಲೆಯ ಮೇಲೆ ಮದ್ಯದ ಬಾಟಲಿಯಿಂದ ಹೊಡೆದಿದ್ದಾನೆ. ಪರಿಣಾಮ ಗಲಾಟೆ ಮತ್ತಷ್ಟು ತಾರಕಕ್ಕೇರಿದೆ. ಈ ವೇಳೆ ಮೂವರು ಸ್ನೇಹಿತರನ್ನು ಕಾರ್ತಿಕ್​ ಮನೆಯಿಂದ ಹೊರ ನಡೆಯುವಂತೆ ಹೇಳಿದ್ದಾನೆ. ಬಳಿಕ ಕಾರ್ತಿಕ್​ ತನ್ನ ಕೋಣೆಗೆ ಹೋಗಿ ಮಲಗಿದ್ದಾನೆ.

ಬಾಲಕ್ಕಿನಿಂದ ಎಸೆದರು

ಕಾರ್ತಿಕ್​ನಿಂದ ಅವಮಾನಗೊಂಡು ಸ್ನೇಹಿತರು ಕಾರ್ತಿಕ್​ ಕೋಣೆಗೆ ನುಗ್ಗಿದ್ದಾರೆ. ಬಳಿಕ ಬಾಲ್ಕನಿಗೆ ಎಳೆದುಕೊಂಡು ಬಂದು ಕೋಪದಿಂದ ಆತನನ್ನು ಎಸೆದಿದ್ದಾರೆ. 4ನೇ ಮಹಡಿಯಿಂದ ಬಿದ್ದ ಕಾರ್ತಿಕ್​ ಸಾವನ್ನಪ್ಪಿದ್ದಾನೆ.

ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ ಸ್ನೇಹಿತರು

ಕಾರ್ತಿಕ್​ ಸಾವಿನ ವಿಚಾರ ತಿಳಿದು ಪೋಷಕರು ಪೊಲೀಸರಿಗೆ ತಿಳಿಸಿದ್ದಾರೆ. ಅತ್ತ ಬಾಟಲಿ ಏಟಿಗೆ ಗಾಯಗೊಂಡ ನಿಲೇಶ್ ಆಸ್ಪತ್ರೆಗೆ ದಾಖಲಾಗಿದ್ದಾನೆ. ಮಾತ್ರವಲ್ಲದೆ ಸ್ನೇಹಿತರು ಈ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದ್ದಾರೆ. ಆದರೆ ಅನುಮಾನಗೊಂಡ ಪೊಲೀಸರು ಕಾರ್ತಿಕ್​ ಸಾವಿನ ವಿಚಾರಣೆ ಮಾಡಿದಾಗ ಪಾರ್ಟಿ ವೇಳೆ ಗಲಾಟೆ ನಡೆದಿದ್ದು, ಈ ಕೃತ್ಯ ನಡೆದಿದೆ ಎಂದು ಹೇಳಿದ್ದಾರೆ. ಇದೀಗ ಪೊಲೀಸರು ಮೂವರು ಸ್ನೇಹಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹುಟ್ಟುಹಬ್ಬದಂದು ಎಣ್ಣೆ ಕಡಿಮೆಯಾಗಿದ್ದಕ್ಕೆ ಗಲಾಟೆ! ಬರ್ತ್​ಡೇ ಬಾಯನ್ನು 4 ಮಹಡಿಯಿಂದ ಬಿಸಾಕಿದ ಸ್ನೇಹಿತರು

https://newsfirstlive.com/wp-content/uploads/2024/07/kalyan-Death.jpg

Load More