Advertisment

ಅಪ್ಪ ಟೂಲ್​ ಮೇಕರ್​, ಅಮ್ಮ ನರ್ಸ್​.. ಇಂಗ್ಲೆಂಡ್‌ ಹೊಸ ಪ್ರಧಾನಮಂತ್ರಿಯ ಜೀವನವೇ ಒಂದು ರೋಚಕ ಕಥೆ

author-image
AS Harshith
Updated On
ಅಪ್ಪ ಟೂಲ್​ ಮೇಕರ್​, ಅಮ್ಮ ನರ್ಸ್​.. ಇಂಗ್ಲೆಂಡ್‌ ಹೊಸ ಪ್ರಧಾನಮಂತ್ರಿಯ ಜೀವನವೇ ಒಂದು ರೋಚಕ ಕಥೆ
Advertisment
  • ತಮ್ಮ ಕುಟುಂಬದಲ್ಲಿ ಮೊದಲ ಪದವೀಧರ ಕೈರ್ ಸ್ಟಾರ್ಮರ್
  • ಮೆಕ್​ಡೊನಾಲ್ಡ್ಸ್ ವಿರುದ್ಧದ ಕೇಸ್​ನಿಂದ ಸ್ಟಾರ್ಮರ್​ ಪ್ರಖ್ಯಾತಿ
  • ಯುಕೆಯಲ್ಲಿ 14 ವರ್ಷದ ವನವಾಸ ಮುಗಿಸಿ ಅಧಿಕಾರಕ್ಕೆ

ಬರೋಬ್ಬರಿ 14 ವರ್ಷ. ಯುನೈಟೆಡ್ ಕಿಂಗ್​ಡಮ್​ನಲ್ಲಿ ಕರೆಕ್ಟ್ ಆಗಿ 14 ವರ್ಷದ ವನವಾಸ ಅನುಭವಿಸಿದ ಬಳಿಕ ಲೇಬರ್ ಪಕ್ಷ 2024ರ ಎಲೆಕ್ಷನ್​ನಲ್ಲಿ ಭರ್ಜರಿ ಗೆಲುವು ದಾಖಲಿಸಿದೆ. ಈ ಗೆಲುವು ಅಂತಿಂಥಾ ಗೆಲುವಲ್ಲ. ಐತಿಹಾಸಿಕ ಗೆಲುವು. ಪಾತಾಳಕ್ಕೆ ಹೋಗಿದ್ದ ಲೇಬರ್ ಪಕ್ಷವನ್ನ ಜಸ್ಟ್ 4 ವರ್ಷಗಳಲ್ಲಿ ಸಮರೋಪಾದಿಯಲ್ಲಿ ಕಟ್ಟಿ, ಎಲೆಕ್ಷನ್ ಅನ್ನೋ ಯುದ್ಧವನ್ನ ಗೆಲ್ಲುವಂತೆ ಮಾಡಿದ್ದು, ರಿಷಿ ಸುನಕ್​ ವಿರುದ್ಧ ಗೆದ್ದು ಬೀಗಿದ ಬ್ರಿಟನ್​ನ ಹೊಸ ಪ್ರಧಾನಮಂತ್ರಿ ಕೈರ್ ಸ್ಟಾರ್ಮರ್. ಇರೋ 650 ಸಂಸತ್ ಸ್ಥಾನಗಳಲ್ಲಿ ಬರೋಬ್ಬರಿ 412 ಸ್ಥಾನಗಳನ್ನ ಲೇಬರ್ ಪಕ್ಷದ ಸದಸ್ಯರು ಗೆದ್ದು, ಕನ್ಸರ್ವೇಟಿವ್ ಪಕ್ಷವನ್ನ ಧೂಳಿಪಟ ಮಾಡಿದ್ದಾರೆ. ಕನ್ಸರ್ವೇಟಿವ್ ಪಕ್ಷಕ್ಕೆ ಕಳೆದ ಶತಮಾನದಲ್ಲೇ ಅತ್ಯಂತ ಹೀನಾಯ ಸೋಲಿನ ರುಚಿಯನ್ನ ಕೈರ್ ಸ್ಟಾರ್ಮರ್ ತಂಡ ನೀಡಿದೆ.

Advertisment

ಕಳೆದ ಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದ ಲೇಬರ್ ಪಕ್ಷವನ್ನ ಕೈರ್ ಸ್ಟಾರ್ಮರ್ ಮತ್ತೆ ಕೇವಲ 4 ವರ್ಷಗಳಲ್ಲಿ ಕಟ್ಟಿ ಬೆಳೆಸಿದ್ದೇ ರೋಚಕ ಕಥೆ. ಹಾಗಿದ್ರೆ ಈ ಕೈರ್ ಸ್ಟಾರ್ಮರ್ ಯಾರು? ಅವ್ರ ಹಿನ್ನೆಲೆ ಏನು? ರಾಜಕೀಯದಲ್ಲಿ ಅವ್ರ ಪ್ರಭಾವ ಎಷ್ಟು? ಇಂಟ್ರೆಸ್ಟಿಂಗ್ ಡಿಟೇಲ್ಸ್ ಇಲ್ಲಿದೆ.

61 ವರ್ಷದ ಕೈರ್ ಸ್ಟಾರ್ಮರ್

1962ರಲ್ಲಿ ಲಂಡನ್​ನಲ್ಲಿ ಜನಿಸಿದ ಕೈರ್ ಸ್ಟಾರ್ಮರ್​ಗೆ ಈಗ 61 ವರ್ಷ. ಸ್ಟಾರ್ಮರ್​ರ ತಂದೆ ಲಂಡನ್​ನ ಫ್ಯಾಕ್ಟರಿಯೊಂದರಲ್ಲಿ ಟೂಲ್ ಮೇಕರ್ ಆಗಿದ್ರು. ತಾಯಿ ನರ್ಸ್ ಆಗಿ ಕೆಲಸ ಮಾಡ್ತಿದ್ರು. ಇಬ್ಬರೂ ಮೊದಲಿಂದ್ಲೂ ಲೇಬರ್ ಪಾರ್ಟಿಗೆ ಬೆಂಬಲಿಗರು. ಅಲ್ಲದೆ, ಲೇಬರ್ ಪಕ್ಷದ ಮೊದಲ ಸಂಸತ್ ನಾಯಕ ಕೈರ್ ಹಾರ್ಡಿಯ ಮೇಲೆ ಭಾರೀ ಅಭಿಮಾನವನ್ನೂ ಹೊಂದಿದ್ರು. ಹೀಗಾಗಿ ಮಗನಿಗೆ ಕೈರ್ ಸ್ಟಾರ್ಮರ್ ಅಂತ ಹೆಸರಿಟ್ಟಿದ್ದರು. ಲೀಡ್ಸ್ ವಿವಿಯಲ್ಲಿ ಕಾನೂನು ಪದವಿ ಪಡೆದ ಸ್ಟಾರ್ಮರ್ ತಮ್ಮ ಕುಟುಂಬದಲ್ಲೇ ಪದವಿಯನ್ನ ಪಡೆದ ಮೊದಲಿಗರು. ನಂತರ ಆಕ್ಸ್​ಫರ್ಡ್​ ವಿವಿಯಲ್ಲಿ ಸ್ನಾತಕೋತ್ತರ ಪದವಿಯನ್ನೂ ಮುಗಿಸಿದ್ರು. ಟೀನೇಜ್​ನಿಂದಲೇ ರಾಜಕೀಯದಲ್ಲೂ ಸ್ಟಾರ್ಮರ್ ಗುರುತಿಸಿಕೊಂಡಿದ್ರು.

[caption id="attachment_73834" align="alignnone" width="800"]publive-image ಕೈರ್ ಸ್ಟಾರ್ಮರ್ ಮತ್ತು ಪತ್ನಿ ವಿಕ್ಟೋರಿಯಾ ಸ್ಟಾರ್ಮರ್[/caption]

Advertisment

ಇಲ್ಲೀಗಲ್ ಆಗಿ ಐಸ್​ ಮಾರಿದ್ರು!

ಇನ್ನೂ ಓದುತ್ತಿದ್ದಾಗಲೇ ಗೆಟ್ ರಿಚ್ ಕ್ವಿಕ್ ಅನ್ನೋ ಸ್ಕೀಮ್​ನಲ್ಲಿ ಸ್ಟಾರ್ಮರ್ ಭಾಗಿಯಾಗಿದ್ರು. ತನ್ನ ಸ್ನೇಹಿತನ ಜೊತೆ ಸೇರಿ ಇಲ್ಲೀಗಲ್ ಆಗಿ ಫ್ರೆಂಚ್ ರಿವೇರಾದಲ್ಲಿ ಐಸ್ ಮಾರುತ್ತಾ ಫ್ರೆಂಚ್ ಪೊಲೀಸರಿಗೆ ಸಿಕ್ಕಿಬಿದ್ದಿದ್ರು. ಆದ್ರೆ ಆಗಿನ್ನೂ ಮೈನರ್ ಆಗಿದ್ದರಿಂದ ಸ್ಟಾರ್ಮರ್​ಗೆ ಯಾವುದೇ ಶಿಕ್ಷೆ ಆಗಿರಲಿಲ್ಲ.

ಶೆಲ್ ಕಂಪನಿಯ ಪ್ರಕರಣವನ್ನ ವಾದಿಸಿದ್ರು

ಕಾನೂನು ಪದವಿ ಮುಗಿಸಿದ ಬಳಿಕ ಇನ್ಸ್ ಆಫ್ ಕೋರ್ಟ್ ಅಂತ ಕರೆಯಲ್ಪಡುವ ನಾಲ್ಕು ಕೋರ್ಟ್ ಅಸೋಸಿಯೇಷನ್​ಗಳಲ್ಲಿ ಒಂದಾದ ಮಿಡ್ಲ್ ಟೆಂಪಲ್​ನಲ್ಲಿ ವಕೀಲರಾಗಿ 1987ರಲ್ಲಿ ಸೇರ್ಪಡೆಯಾಗ್ತಾರೆ. ಅಂದಿನಿಂದ 2015ರವರೆಗೂ ಮರಣ ದಂಡನೆ ಶಿಕ್ಷೆಗೆ ಗುರಿಯಾದವರ ಪರ, ಮಾನವ ಹಕ್ಕುಗಳ ಪರ ಹೋರಾಟ ಮಾಡ್ತಾ, ಖ್ಯಾತಿಯನ್ನ ಪಡೆದ್ರು. ಮೆಕ್ ಡೊನಾಲ್ಡ್ಸ್ ವಿರುದ್ಧ ಮೆಕ್​ಲೈಬಲ್ ಪ್ರಕರಣ ಹಾಗೂ ಶೆಲ್ ಕಂಪನಿಯ ಪ್ರಕರಣವನ್ನ ವಾದಿಸಿ ಹೈಪ್ರೊಫೈಲ್ ಕೇಸ್​ಗಳಲ್ಲೂ ತಮ್ಮ ಛಾಪು ಮೂಡಿಸಿದ್ರು. ಇಬ್ಬರು ಪರಿಸರವಾದಿಗಳನ್ನ ಕೆಲಸದಿಂದ ತೆಗೆದು ಹಾಕಿದ್ದಕ್ಕೆ, ಯುಕೆಯಲ್ಲಿ ಮೆಕ್​ಡೊನಾಲ್ಡ್ಸ್ ಸಂಸ್ಥೆಗೆ ಇದು ಅತೀ ದೊಡ್ಡ ಹೊಡೆತ ಕೊಟ್ಟ ಪ್ರಕರಣ ಅಂತಲೇ ಗುರುತಿಸಲಾಗಿದೆ.

[caption id="attachment_73835" align="alignnone" width="800"]publive-image ಕೈರ್ ಸ್ಟಾರ್ಮರ್ ಮತ್ತು ಪತ್ನಿ ವಿಕ್ಟೋರಿಯಾ ಸ್ಟಾರ್ಮರ್[/caption]

Advertisment

ಅತ್ಯಂತ ಬುದ್ಧಿವಂತ ವಕೀಲ

ಇನ್ನು ಪ್ರತಿಷ್ಠಿತ ದಿ ಗಾರ್ಡಿಯನ್ ಪತ್ರಿಕೆ 2008ರಲ್ಲಿ ಸ್ಟಾರ್ಮರ್​ರನ್ನ, ಅವರ ತಲೆಮಾರಿನ ಅತ್ಯಂತ ಬುದ್ಧಿವಂತ ವಕೀಲರಲ್ಲಿ ಒಬ್ಬರು ಅಂತ ಗುರುತಿಸಿತ್ತು. 2002ರಲ್ಲೇ ಪ್ರತಿಷ್ಠಿತ ಕ್ವೀನ್ಸ್ ಕೌನ್ಸೆಲ್​ಗೆ ವಕೀಲರಾಗಿ ನೇಮಕವಾಗಿದ್ರು. ಜೊತೆಗೆ 2003 ರಿಂದ 2008ರವರೆಗೆ ಉತ್ತರ ಐರ್ಲ್ಯಾಂಡ್ ಪೊಲೀಸಿಂಗ್ ಬೋರ್ಡ್​ನ ಮಾನವ ಹಕ್ಕುಗಳ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದ್ರು. 2013ರವರೆಗೆ ಪಬ್ಲಿಕ್ ಪ್ರಾಸಿಕ್ಯೂಷನ್ಸ್​​ನ ನಿರ್ದೇಶರಾಗಿ ಅನುಭವವಿದೆ. ಈ ಅವಧಿಯಲ್ಲೇ ಲೈಂಗಿಕ ದೌರ್ಜನ್ಯದ ತನಿಖಾ ವಿಧಾನದಲ್ಲಿ ಬದಲಾವಣೆಗಳನ್ನ ತಂದಿದ್ದು ಇವರ ಖ್ಯಾತಿಯನ್ನ, ಜನ ಪರ ಕಾಳಜಿಯನ್ನ ಬಿಂಬಿಸಿತ್ತು.

ಗೆಲುವಿನ ದಡ ಸೇರಿಸಿದ ಕೈರ್ ಸ್ಟಾರ್ಮರ್

2015ರಲ್ಲಿ ತಮ್ಮ 52ನೇ ವಯಸ್ಸಿನಲ್ಲಿ ಲೇಬರ್ ಪಾರ್ಟಿಯಿಂದ ಹಾಲ್​ಬಾರ್ನ್ & ಸೇಂಟ್ ಪ್ಯಾನ್ಕ್ರಾಸ್ ಸಂಸದರಾಗಿ ಮೊದಲ ಬಾರಿಗೆ ಆಯ್ಕೆಯಾಗಿದ್ರು. ವಿರೋಧ ಪಕ್ಷದ ಇಮಿಗ್ರೇಷನ್ ಹಾಗೂ ಬ್ರೆಕ್ಸಿಟ್ ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ಸ್ಟಾರ್ಮರ್, ಬ್ರೆಕ್ಸಿಟ್ ವಿರುದ್ಧ ಹೋರಾಟದ ಮೂಲಕ ತಮ್ಮ ಧ್ವನಿ ಎತ್ತಿದ್ದರು. 2020ರಲ್ಲಿ ಲೇಬರ್ ಪಾರ್ಟಿಯ ಅಧ್ಯಕ್ಷರಾಗಿ, ತಮ್ಮ ಪಕ್ಷದ ಒಳಗಡೆ ಹಾಗೂ ಹೊರಗಿನ ಸವಾಲುಗಳನ್ನೆಲ್ಲಾ ಮೆಟ್ಟಿ, ಸೋತು ನಿತ್ರಾಣವಾಗಿದ್ದ ಲೇಬರ್ ಪಕ್ಷವನ್ನ ತಳಮಟ್ಟದಿಂದ ಗಟ್ಟಿ ಗೊಳಿಸಿ ಇವತ್ತು ಗೆಲುವಿನ ದಡ ಸೇರಿಸಿದ್ದಾರೆ.

ವಿಶೇಷ ವರದಿ: ನವೀನ್ ಕುಮಾರ್​ ಕೆ​. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment