ಸಾಯೋ ಮುನ್ನ ಪತ್ನಿಗೆ ವಿನಯ್ ಸೋಮಯ್ಯ ವಿಶೇಷ ಮನವಿ.. ಮನಕಲಕುವಂತಿದೆ ಆ ಭಾವುಕ ಪತ್ರ!

author-image
admin
Updated On
ಸಾಯೋ ಮುನ್ನ ಪತ್ನಿಗೆ ವಿನಯ್ ಸೋಮಯ್ಯ ವಿಶೇಷ ಮನವಿ.. ಮನಕಲಕುವಂತಿದೆ ಆ ಭಾವುಕ ಪತ್ರ!
Advertisment
  • ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಪ್ರಕರಣಕ್ಕೆ ಟ್ವಿಸ್ಟ್‌!
  • ನೇರವಾಗಿ ಪತ್ನಿಗೆ ಕಳಿಸದೇ ಪತ್ನಿ ಸಹೋದರನಿಗೆ ಕಳಿಸಿದ್ದ ವಿನಯ್
  • ಮಗಳು ಸಾದ್ವಿಯನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಮನವಿ

ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಪ್ರಕರಣ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಕಾಂಗ್ರೆಸ್, ಬಿಜೆಪಿ ಹೋರಾಟದ ಮಧ್ಯೆ ಮತ್ತೊಂದು ಸ್ಫೋಟಕ ಮಾಹಿತಿ ಬಯಲಾಗಿದೆ. ವಿನಯ್ ಸೋಮಯ್ಯ ಅವರು ಸಾಯುವ ಮುನ್ನ ಪತ್ನಿಗೆ ಭಾವುಕ ಪತ್ರ ಬರೆದಿದ್ದಾರೆ.

ತನ್ನ ಪತ್ನಿ ಶೋಭಿತಾಗೆ ಕ್ಷಮೆ ಕೇಳಿರೋ ವಿನಯ್, ಮಗಳು ಸಾದ್ವಿಯನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ. ಹೆಂಡತಿಗೆ ವಿನಯ್ ಸೋಮಯ್ಯ ಅವರು ಬರೆದಿರೋ ಕೊನೆಯ ಪತ್ರದ ಒಂದೊಂದು ಸಾಲುಗಳು ಮನಕಲಕುವಂತಿದೆ.

ಸಾಯುವ ಮುನ್ನ ಪತ್ನಿಗೆ ಪತ್ರ ಬರೆದ ವಿನಯ್​ ಸೋಮಯ್ಯ ಅವರು ಅದನ್ನ ನೇರವಾಗಿ ಪತ್ನಿಗೆ ಕಳಿಸದೇ ಪತ್ನಿ ತಮ್ಮ ಸುಶಾಂತ್​ಗೆ ಕಳಿಸಿದ್ದಾರೆ. ಸುಶಾಂತ್​ನೇ ಈ ಪತ್ರವನ್ನ ಪತ್ನಿಗೆ ತೋರಿಸಬೇಕು ಅಂತ ಮನವಿ ಮಾಡಿಕೊಂಡಿದ್ದಾರೆ.

publive-image

ನನ್ನ ಕ್ಷಮಿಸಿ ಬಿಡು ಹೆಂಡತಿ!
ಸುಶಾಂತ್​, ಈ ಮೆಸೇಜ್​ನ ನೀನು ಶೋಭಿಗೆ ಫಾರ್ವರ್ಡ್ ಮಾಡಬೇಡ, ನೀನೇ ಹೋಗಿ ತೋರಿಸು. ಅವಳು ಈ ಮೆಸೇಜ್ ಓದುವಾಗ ನಾನು ಈ ಲೋಕದಲ್ಲಿ ಇರುವುದಿಲ್ಲ. ಕ್ಷಮಿಸು ಸುಶಾಂತ್.. ಸಾಧ್ವಿನ ಚೆನ್ನಾಗಿ ನೋಡಿಕೊ. ನೀನು ಇನ್ನು ಮುಂದೆ ಶೋಭಿ ಜೊತೆ ಸ್ಟೇ ಆಗು. ಬೇರೆ ರೂಮ್​ನಲ್ಲಿ ಇರೋದು ಬೇಡ. ಶೋಭಿ ಹಾಗೂ ಸಾಧ್ವಿಗೆ ಹೆಲ್ಪ್ ಆಗುತ್ತೆ. ಪ್ಲೀಸ್​​ ಬೆಳಗ್ಗೆ ಹೋಗಿ ಸಾಧ್ವಿದು ಬಟ್ಟೆ ನೀನೇ ಪ್ಯಾಕ್​ ಮಾಡು. ಕಾರ್ ಡಾಕ್ಯುಮೆಂಟ್ಸ್​​ ನನ್ನ ​ಆಫೀಸ್ ಕೊಲೀಗ್ ರಜತ್​ಗೆ ಹೇಳು ಶೋಭಿ ಅಥವಾ ನಿನ್ನ ಹೆಸರಿಗೆ ಟ್ರಾನ್ಸ್‌ಫರ್‌​​ ಮಾಡೋಕೆ. ಬೈಕ್ ಕೀ ಹಾಳಾಗಿದೆ. ಯಾವುದಾದರೂ ಮೆಕ್ಯಾನಿಕ್​ನ ಕರೆಸಿ, ಸರಿ ಮಾಡಿಸಿ ಅಣ್ಣಗೆ ಕೊಟ್ಟು ಬಿಡು..

ಹಾಯ್‌ ಶೋಭಿ, 
ಈ ಲೆಟರ್​​ನ ನಾನು ಸುಶಾಂತ್​ಗೆ ಕಳಿಸಿದ್ದು ಯಾಕಂದ್ರೆ ನಿಂಗೆ ಕಳಿಸಿದ್ರೆ ನಿನ್ನ ಸಂಭಾಳಿಸುವವರು ಯಾರೂ ಇರುವುದಿಲ್ಲ, Sorry.. ಇದು ಕ್ಷಮಿಸುವ ತಪ್ಪಲ್ಲ, ನನಗೆ ಗೊತ್ತು, 2 ತಿಂಗಳಿನಿಂದ ನನ್ನ ಮನಸ್ಸು ಕಂಟ್ರೋಲ್‌ಗೆ ಬರ್ತಾ ಇಲ್ಲ. ನನ್ನ ಮುಖದಲ್ಲಿ ನಗುವಿದ್ದರೂ ಅದು ಆರ್ಟಿಫಿಶಿಯಲ್, ನನ್ನ ಮೇಲೆ ಹಾಕಿದ FIR ನಿಂದಾಗಿ ನಿನಗೆ, ಚಾಚಾಗೆ ಎಷ್ಟು ಬೇಜಾರಾಗಿದೆ ಅಂತ ಗೊತ್ತಿದೆ ನಂಗೆ. ಅವರು ಇನ್ನೂ ನಮ್ಮ ಫೋಟೋ ಹಾಕ್ಕೊಂಡು ಕಿಡಿಗೇಡಿಗಳು ಅಂತ ಅವರ ಗ್ರೂಪ್‌ನಲ್ಲಿ ಹಾಕ್ಕೊಳ್ತಿದ್ದಾರೆ. ಹಾಗೂ ನಮ್ಮ ಮೇಲೆ ರೌಡಿ ಶೀಟ್‌ ಹಾಕೋಕೆ ಟ್ರೈ​​ ಮಾಡ್ತಿದ್ದಾರೆ.

ಇದನ್ನೂ ಓದಿ: ಬ್ಲ್ಯಾಕ್​ಮೇಲ್ ಕೇಸ್‌.. ಆರೋಪಿ ಅವಧೂತ ಗುರುಮೂರ್ತಿ ಸ್ವಾಮೀಜಿ ಬೆಂಗಳೂರಿನಿಂದ ಎಸ್ಕೇಪ್‌! 

ಕಳೆದ ವಾರ ಮಡಿಕೇರಿ ಪೊಲೀಸ್ ಕಾಲ್ ಮಾಡಿ, ಬಂದು ತಹಶೀಲ್ದಾರ್ ಮುಂದೆ ಸಿಗ್ನೇಚರ್ ಮಾಡಬೇಕು ಅಂತ ಫೋರ್ಸ್ ಮಾಡಿದ್ರು. ನಾನು ಎಷ್ಟು ಮರೆಯಲು ಪ್ರಯತ್ನ ಪಟ್ಟರೂ, ಪುನಃ ಪುನಃ ಅದನ್ನು ನೆನಪಿಸುತ್ತಿದ್ದಾರೆ ಅವರು. ರಿಯಲೀ ವೇರಿ Sorry ಮಾ.. ಜಾಮೀನು ಸಿಕ್ಕಿದ ಮರುದಿನ​ ಪೊಲೀಸರು ರಜತ್​ ಮನೆಗೆ ಹೋಗಿ ಅವನನ್ನ ನನ್ನ ಮನೆ ಅಡ್ರೆಸ್ ಕೇಳಿದ್ದಾರೆ. ಅದು ಕೂಡ ಜಾಮೀನು ಸಿಕ್ಕ ನಂತರ. ಅಷ್ಟೆಲ್ಲಾ ಮೆಂಟಲಿ ಟಾರ್ಚರ್ ಕೊಟ್ಟಿದ್ದಾರೆ. ಹೇಳ್ಕೊಳ್ಳೋಕೂ ಆಗ್ತಿಲ್ಲ.

publive-image

ನಿನ್ನ ನಾನು ಪಡೆಯಲು ಪುಣ್ಯ ಮಾಡಿದ್ದೆ. ನನ್ನ ಎಲ್ಲಾ ಕಷ್ಟದ ಸಮಯದಲ್ಲೂ ನೀನು ನನ್ನ ಸಪೋರ್ಟ್‌ಗೆ ಇದ್ದೆ. ಥಾಂಕ್ಯೂ ಯು ಮಾ.. ಸಾಧ್ವಿ 1 ವಾರ ಕೇಳಬಹುದು. ನಂತರ ಸರಿ ಆಗುತ್ತೆ ಬಿಡು, ಅವಳಿಗೆ ಅಪ್ಪ ದೂರ ಹೋಗಿದ್ದಾರೆ ಅಂತ ಹೇಳು. ಅವಳಿಗೆ ನೀನಿದ್ರೆ ಸಾಕು, ನೀನೇ ಅವಳ ಪ್ರಪಂಚ. ಅವಳು ದೊಡ್ಡವಳಾದ ಮೇಲೆ ಹೇಳು, ಅಪ್ಪ ಅವಳನ್ನು ತುಂಬಾ ಇಷ್ಟ ಪಡ್ತಿದ್ರು ಅಂತ. ಏನೇನೋ ಆಸೆ ಇತ್ತು ಕಣೆ, ಒಳ್ಳೆ ಕೆಲಕ್ಕೆ ಸೇರಬೇಕು, ಫ್ಲ್ಯಾಟ್​ ತಗೋಬೇಕು, ಅಲ್ಲಿ ನಾವು ಜೀವನ ನಡೆಸಬೇಕು ಅಂತ.

ಆದರೆ ನನ್ನ ಮನಸ್ಸಿನಿಂದ ಆ FIR ಘಟನೆಯ ವಿಚಾರ ಹೋಗ್ತಾನೇ ಇಲ್ಲ. ನನ್ನಿಂದ ನಮ್ಮ ಹಾಗೂ ನಿಮ್ಮ ಕುಟುಂಬದ ಮರ್ಯಾದೆನೇ ಹೋಯ್ತು. ನಾವಿಲ್ಲ ಅಂತ ನನ್ನ ಮನೆಯವರನ್ನ ಬಿಟ್ಟು ಹೋಗಬೇಡ. ನಮ್ಮ ಮನೆಯಲ್ಲಿ ಎಲ್ಲರಿಗೂ ನಂಗೆ ನೀನು ಎಷ್ಟು ಇಷ್ಟಾನೋ ಅಷ್ಟೇ ನಿನ್ನ ಅವರೂ ಇಷ್ಟ ಪಡ್ತಾರೆ. ಅದು ನಿನಗೂ ಗೊತ್ತಿದೆ, ನೀನು ಈವಾಗ ನನ್ನ ಫ್ಯಾಮಿಲಿ ಜೊತೆ ಹೇಗಿದ್ದೀಯೋ ಹಾಗೆ ಇರು. ಹಾಗೇ ಇರು ಪ್ಲೀಸ್​.. ಆವಾಗಾವಾಗ ನಮ್ಮ ಮನೆಗೆ ಹೋಗ್ತಿರು. ನಿಂಗೆ ಏನೇ ಕಷ್ಟ ಇದ್ರೂ ನನ್ನ ಅಣ್ಣನ್ನ ಕೇಳು, ಅವನು ನನ್ನ ಡ್ಯಾಡಿ ಇದ್ದ ಹಾಗೆ. ಅಮ್ಮ ಮಂಜು, ಕಂದ, ಎಲ್ಲರೂ ನಿನ್ನ ತುಂಬಾ ಇಷ್ಟಪಡ್ತಾರೆ.. ಪುನರ್ ಜನ್ಮ ಅಂತ ಇದ್ರೆ, ಅದು ಸಾಧ್ವಿ, ಹೊಟ್ಟೇಲಿ ಹುಟ್ಟುತ್ತೇನೆ, ಅಲ್ಲಿಯವರೆಗೆ ನಂಗೆ ಪುನರ್ಜನ್ಮ ಬೇಡ ಅಂತ ಆ ದೇವರಲ್ಲಿ ಬೇಡಿಕೊಳ್ತೀನಿ. ನನ್ನ ಜಾಸ್ತಿ ನೆನಪಿಟ್ಕೋ ಬೇಡ, ಲವ್​ ಯು ಶೋಭಿ.. ಸಾಧ್ವಿ..
- ವಿನಯ್ ಸೋಮಯ್ಯ 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment